ನೀರು ನೀರು ಎನ್ನುತ್ತಿದ್ದ ಚಾಲಕರಿಗೆ ನೀರಿನ ದಾಹ ತೀರಿಸಿದ ಪೊಲೀಸರು
ವಾಹನ ಚಾಲಕರಿಗೆ ಊಟ ನೀಡಿ ಮಾನವೀಯತೆ ಮೆರೆದ ಬೀಳಗಿ ಪೋಲಿಸ್ ಠಾಣೆ ಸಿಬ್ಬಂದಿ ಬಾಬು ಹುಡೇದ
ಬಾಗಲಕೋಟೆ: ಎಂಎಸ್‌ಪಿ ಹಾಗೂ ಕಬ್ಬಿನ ದರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸಿದ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿ ರೈತರು ಎಂಎಸ್‌ಪಿ ಹಾಗೂ ಕಬ್ಬಿನ ದರ ನಿಗದಿಪಡಿಸುವಂತೆ ಆಗ್ರಹಿಸಿ ಎತ್ತಿನ ಗಾಡಿಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಹೆದ್ದಾರಿ ಬಂದ್‌ನಿಂದಾಗಿ ರಾಜ್ಯ ಹಾಗೂ ಅಂತಾರಾಜ್ಯದ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತವು. ರಸ್ತೆ ಬದಿಯ ಹೋಟೆಲ್‌ಗಳು ಮತ್ತು ಡಾಬಾಗಳು ಬಂದ್ ಆಗಿದ್ದರಿಂದ ವಾಹನ ಚಾಲಕರು ಊಟಕ್ಕಾಗಿ ಪರದಾಡುವಂತಾಯಿತು. ಇದನ್ನು ಗಮನಿಸಿದ ಪೊಲೀಸ ಸಿಬ್ಬಂದಿ ಬಾಬು ಹುಡೇದರವರು ಬೀಳಗಿ ಸಮೀಪದ ಅನಗವಾಡಿ ಗ್ರಾಮದ ಬಳಿ ವಾಹನ ಚಾಲಕರಿಗೆ ಊಟದ ಪಾರ್ಸೆಲ್‌ಗಳನ್ನು ತಂದು ವಿತರಿಸಿ ಮಾನವೀಯತೆ ಮೆರೆದರು. ಪೊಲೀಸರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.