🔥 ट्रेंडिंग ओडिशा में बाघ का हमला रिपोर्ट ओडिशा ने 3 वर्ष के लिए नई शराब की दुका... आंध्र प्रदेश के कृषि मंत्री करेंगे 6.1... नडु ने अमरावती में क्वांटम वैली योजना... तेलंगाना और आंध्र प्रदेश में दशहरा 202... रेलवे स्टेशन पर 4 करोड़ रुपये की सोने...
05 अक्टू. 2026•
ગુજરાતી मराठी ਪੰਜਾਬੀ বাংলা

ಸ್ಮಶಾನ ಭೂಮಿ ವಿವಾದದ ಸಮಸ್ಯೆ ಪರಿಹರಿಸಲು ಉಪ ವಿಭಾಗಾಧಿಕಾರಿ ಭೇಟಿ ಪರಿಶೀಲನೆ

✍️ रिपोर्टर: KALLAPPA MIRJI 🗓 05 अक्टू. 2026, 11:32 AM 👁 11
शेयर करें: 💬 WhatsApp 📘 Facebook 𝕏 Post

ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಹಿಂದೂ ಕುಟುಂಬಗಳ ಸ್ಮಶಾನ ಭೂಮಿ ವಿವಾದದ ಸಮಸ್ಯೆ ಪರಿಹರಿಸಿ ಸರ್ವೇ ಕಾರ್ಯ ನಡೆಸಲು ಜಿಲ್ಲಾ ಉಪ ವಿಭಾಗಾಧಿಕಾರಿ ಪ್ರಭಾವತಿ. ಎಫ್ ಅವರು ಗ್ರಾಮದ ಸ್ಮಶಾನ ಜಾಗಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಹಿಂದೂ ಕುಟುಂಬಗಳ ಸ್ಮಶಾನ ಭೂಮಿ ವಿವಾದದ ಸಮಸ್ಯೆ ಪರಿಹರಿಸಿ ಸರ್ವೇ ಕಾರ್ಯ ನಡೆಸಲು ಜಿಲ್ಲಾ ಉಪ ವಿಭಾಗಾಧಿಕಾರಿ ಪ್ರಭಾವತಿ. ಎಫ್ ಅವರು ಗ್ರಾಮದ ಸ್ಮಶಾನ ಜಾಗಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ನೂರಾರು ವರ್ಷಗಳಿಂದ ಬಡಿಗೇರ ಎಂಬುವವರ ಖಾಸಗಿ ಜಮೀನಿನಲ್ಲಿ ಮಿಶ್ರಿಕೋಟಿ ಗ್ರಾಮದ ಹಿಂದೂ ಕುಟುಂಬಗಳು ಅಂತ್ಯಕ್ರಿಯೆ ಮಾಡುತ್ತಾ ಬರಲಾಗುತ್ತಿದೆ ಎಂದು ಗ್ರಾಮಸ್ಥರ ಅಧಿಕಾರಿಗಳಿಗೆ ತಿಳಿಸಿದರು.
ಕೆಲವು ವರ್ಷಗಳ ಹಿಂದೆ ಇವರು ಬೇರೆಯರಿಗೆ ಜಮೀನು ಮಾರಾಟ ಮಾಡಿದ್ದರಿಂದ ಖರೀದಿ ತೆಗೆದುಕೊಂಡ ಮಾಲೀಕರು ಗ್ರಾಮಸ್ಥರಿಗೆ ಶವ ಹೂಳಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಜಮೀನು ಸರ್ವೆ ಮುಗಿದ ನಂತರ ನೂರಾರು ಜನರು ಒಂದು ಕಡೆ ಸೇರಿ ಸ್ಮಶಾನ ಜಾಗದ ಪಕ್ಕದ ಮೂಗ ಬಸವಣ್ಣ ದೇವಸ್ಥಾನದಲ್ಲಿ ಸಭೆ ಸೇರಿ ಅಧಿಕಾರಿಗಳು ಹಾಗೂ ಮುಖಂಡರು ಚರ್ಚೆ ನಡೆಸಿದರು.
ಗ್ರಾಮದಲ್ಲಿ ಶವವಾದರೇ ಹೂಳಲು ಪದೇ ಪದೇ ಸಮಸ್ಯೆ ಮಾಡುತ್ತಿದ್ದು ನಮಗೆ ಸ್ಮಶಾನ ಭೂಮಿ ಒದಗಿಸಿ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
"ದಾಖಲೆಗಳ ಪ್ರಕಾರ ಮಿಶ್ರಿಕೋಟಿ ಗ್ರಾಮದ ಸರ್ವೇ ನಂ:34 ರಲ್ಲಿ 4 ಎಕರೆ ಇದ್ದು ಅದರಲ್ಲಿ ಫೂಟ್ ಖರಾಬ್ (ಬ) ಕಾಲಂ ನಲ್ಲಿ ಇದ್ದ 24 ಗುಂಟೆ ಜಾಗದಲ್ಲಿ ಸಾರ್ವಜನಿಕರಿಗೆ ಸ್ಮಶಾನ ಎಂದು ಬಳಸಲು ತಿಳಿಸಿದ್ದೇವೆ ಎಂದು ತಹಶೀಲ್ದಾರ ಬಸವರಾಜ ಹೊಂಕಣ್ಣವರ ತಿಳಿಸಿದರು."
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಆರ್ ಪಾಟೀಲ, ತಹಶೀಲ್ದಾರ ಬಸವರಾಜ ಹೊಂಕಣದವರ, ಹಿರಿಯರಾದ ಗೋವಿಂದಪ್ಪ ಬೋವಿ, ಸಿಪಿಐ ಶ್ರೀಶೈಲ ಕೌಜಲಗಿ, ಸಚಿವರ ಆಪ್ತ ಸಹಾಯಕ ಸೋಮಶೇಖರ ಬೆನ್ನೂರು, ನರೇಶ ಮಲೆನಾಡು,ಗೋಪಾಲ ಮಾಯಣ್ಣವರ, ಕಲ್ಲಯ್ಯ ಓದಿಸುಮಠ, ರಾಮಣ್ಣ ಮಾಳಗಿ, ರಾಜಪ್ಪ ಮಿಶ್ರಿಕೋಟಿ, ರಾಮಣ್ಣ ಮುದೇನೂರು, ಬಸವರಾಜ ದಾಸನಕೊಪ್ಪ, ರಾಜಪ್ಪ ಛಲವಾದಿ, ಗುರು ಕಂಪ್ಲಿ, ಶಂಕರಯ್ಯ ಶಂಕರದೇವರಮಠ, ಭೀಮಣ್ಣ ಸವಣೂರ, ಮಹಾದೇವಿ ನಾಯ್ಕರ, ಶಿವಲೀಲಾ ಜವಳಿ, ಶೋಭಾ ಅರ್ಕಸಾಲಿ, ಮಂಜುಳಾ ರೇವಣಕರ ಹಾಗೂ ಗ್ರಾಮದ ನೂರಾರು ಜನರು ಇದ್ದರು.
📲Get App