🔥 ट्रेंडिंग विधायक मनीष कुमार ने सीएचसी अस्पताल का... प्रॉपर्टी के नाम प्रति 100 करोड़ की लु... কলেজ স্ট্রিট ট্যালেন্ট সার্চ এক্সামিনে... भरतपुर के बिहारीजी मंदिर में प्रातःकाल... राजस्थान: करौली जिले की श्रीमहावीरजी औ... अमरोहा: झोलाछाप डॉक्टरों को गर्भवती की...
04 अक्टू. 2026•
ગુજરાતી मराठी ਪੰਜਾਬੀ বাংলা

ಬೀದರ ನ್ಯೂಸ್

✍️ रिपोर्टर: Basavaraj pujari 🗓 04 अक्टू. 2026, 10:22 AM 👁 9
शेयर करें: 💬 WhatsApp 📘 Facebook 𝕏 Post

ಬೀದರ್: ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ನ ಪದವಿ ದಿನಾಚರಣೆ ಜರುಗಿತು

ಬೀದರ್: ನಗರದ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯುರ್ವೇದ ಚಿಕಿತ್ಸೆಯ ಜಾಗತಿಕ ಮನ್ನಣೆಯನ್ನು ವಿವರಿಸುವ ಪದವಿ ದಿನಾಚರಣೆ ಕಾರ್ಯಕ್ರಮವು ಆಯೋಜಿಸಲಾಯಿತು. ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಎನ್‍ಸಿಐಎಸ್‍ಎಂ ಆಯುರ್ವೇದ ಮಂಡಳಿ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡಾ ಮಾತನಾಡಿ, ಹತ್ತು ವರ್ಷಗಳಲ್ಲಿ ಆಯುರ್ವೇದ ಚಿಕಿತ್ಸೆ ಗಣನೀಯ ಪ್ರಗತಿ ಹೊಂದಿದುದಾಗಿ ತಿಳಿಸಿದರು ಮತ್ತು ಕಾಲೇಜಿನ ಉತ್ತಮ ಕಾರ್ಯ ನಿರ್ವಹಣೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಮಾತನಾಡಿ, ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ವೃತ್ತಿಯ ಗೌರವ ಹೆಚ್ಚಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ 4 ವಿದ್ಯಾರ್ಥಿಗಳಿಗೆ ಪಿಎಚ್‍ಡಿ, 16 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು 69 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ಶೆಟಕಾರ್, ಜಂಟಿ ಕಾರ್ಯದರ್ಶಿ ಮಡಿವಾಳಪ್ಪ ಗಂಗಶೆಟ್ಟಿ ಸೇರಿದಂತೆ ವಿವಿಧ ಸದಸ್ಯರು ಉಪಸ್ಥಿತರಿದ್ದರು.
📲Get App