Education
ಕಲಿಕೆಯಲ್ಲಿ ಆಸಕ್ತಿ, ಶಿಸ್ತು ಯಶಸ್ಸಿಗೆ ಪೂರಕ: ಡಾ. ಎಚ್. ವಿ. ವಾಮದೇವಪ್ಪ
ಭರಮಸಾಗರ, ಅ. 1: ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ, ಶಿಸ್ತು ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಂಡು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಡಾ. ಎಚ್. ವಿ. ವಾಮದೇವಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2026–27ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ‘ಭರಮಸಿರಿ–3’ ಬಿಡುಗಡೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಮಾರ್ಟ್ ಎಂದರೆ ಸುಂದರವಾಗಿ ಕಾಣುವುದಷ್ಟೇ ಅಲ್ಲ; ಕಲಿಕೆಯಲ್ಲಿ ಆಸಕ್ತಿ, ಶಿಸ್ತು ಮತ್ತು ಕ್ರಿಯಾಶೀಲತೆಯನ್ನು ಹೊಂದಿರುವುದು. ವಿದ್ಯಾರ್ಥಿಗಳು ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳದೆ, ಸ್ವಂತ ಸಾಮರ್ಥ್ಯವನ್ನು ಅರಿತು ಮುನ್ನಡೆಯಬೇಕು. ಕಲಿಕೆಯ ಜೊತೆಗೆ ಸ್ಪಷ್ಟ ಗುರಿ ಹೊಂದಿದ್ದರೆ ಉನ್ನತ ಸಾಧನೆ ಸಾಧ್ಯ’ ಎಂದರು. ಗ್ರಾಮೀಣ ಪ್ರದೇಶ ಹಾಗೂ ಬಡತನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳೂ ಉನ್ನತ ಸಾಧನೆ ಮಾಡಬಹುದು ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಶಶಿಕಲಾ ಎಸ್. ಮಾತನಾಡಿ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು. ಚಂದ್ರಶೇಖರ್ ಸ್ವಾಗತಿಸಿದರು. ಚಂದ್ರಕುಮಾರ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹರೀಶ್ ಪಿ. ಎಸ್. ಅತಿಥಿಗಳನ್ನು ಪರಿಚಯಿಸಿದರು. ರಿಯಾಜ್ ವಂದಿಸಿದರು. ಐಕ್ಯೂಎಸಿ ಸಂಚಾಲಕಿ ಮಮತಾ ಎನ್. ಆರ್. ನಿರೂಪಿಸಿದರು. ಉಪನ್ಯಾಸಕರಾದ ಸತ್ಯನಾರಾಯಣ, ಡಾ. ಗಿರೀಶ್, ಕಚೇರಿ ಅಧೀಕ್ಷಕ ಕರಿಬಸಪ್ಪ ಸೇರಿದಂತೆ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.