🔥 ट्रेंडिंग May Gururaj’s Retired Life Be Happy an... Massive Farmers’ Protest in Jalahalli... Brahmapur Sadar PS Intensifies Crackdo... ગીર ગઢડા તાલુકાના બેડીયા ગામે બસ અને... हजारीबाग में विशेष अभियान: नो पार्किंग... स्मार्ट मीटर: रिचार्ज के बावजूद पटनावा...
30 सित. 2026•
ગુજરાતી मराठी ਪੰਜਾਬੀ বাংলা

ಗುರುರಾಜ್ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ -ಸಹಾಯಕ ನಿರ್ದೇಶಕ ಹನುಮಂತಪ್ಪ

✍️ रिपोर्टर: Khaja Hussain 🗓 30 सित. 2026, 07:22 PM 👁 30
शेयर करें: 💬 WhatsApp 📘 Facebook 𝕏 Post
ರಾಯಚೂರು ಬ್ರೇಕಿಂಗ್ ನ್ಯೂಸ್

ಗುರುರಾಜ್ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ -ಸಹಾಯಕ ನಿರ್ದೇಶಕ ಹನುಮಂತಪ್ಪ

ರಾಯಚೂರು, ಸೆ.30: ರಾಯಚೂರು ತಾಲೂಕು ಪಂಚಾಯಿತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗುರುರಾಜ್ ತಂದೆ ಶಾಮರಾವ್ ಯಡ್ರಾಮಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (EO) ಹಾಗೂ ಸಹಾಯಕ ನಿರ್ದೇಶಕರು (AD) ಹನುಮಂತಪ್ಪ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.

ಸೆ.29ರಂದು ನಡೆದ ಕಾರ್ಯಕ್ರಮದಲ್ಲಿ ಗುರುರಾಜ್ ಅವರನ್ನು ಸನ್ಮಾನಿಸಿ, ಅವರ ಸರ್ಕಾರಿ ಸೇವೆ, ಪರಿಶ್ರಮ ಮತ್ತು ನಿಷ್ಠೆ ಸದಾ ಇತರರಿಗೆ ಪ್ರೇರಣೆಯಾಗಲಿ. ನಿವೃತ್ತಿಯ ನಂತರದ ಜೀವನ ಆರೋಗ್ಯ, ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ಗುರುರಾಜ್ ಅವರು ಗುಂಜಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ (SDA) ಕರ್ತವ್ಯ ನಿರ್ವಹಿಸಿ, ಸೆ.30, 2026ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ.

ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಗೂ ಆಪ್ತಮಿತ್ರರು, ಧರ್ಮಪತ್ನಿ ನರ್ಮದಾ, ಮಗನಾದಂತ ಹರೀಶ್ ಆಚಾರ್ (ಜ್ಯೋತಿಷ್ಯರು), ಸೊಸೆ ಶ್ವೇತಾ ಕುಲಕರ್ಣಿ, ಮೊಮ್ಮಗಳು ಶ್ರೀ ಆದ್ಯ ಕುಲಕರ್ಣಿ, ಬಿಚ್ಚಾಲಿ ಸೇರಿದಂತೆ ಹಲವರು ಗುರುರಾಜ್ ಅವರ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App