🔥 TRENDING નબીપુર નજીક તલવારની અણીએ લૂંટના પ્રયાસ... Trump Suggests Pre-Midterm Strikes on... शहीद कुंदन का अस्थि कलश तिरंगे में लिप... Vikram Misri Discusses Russia and Iran... India Must Navigate Diplomatic Tightro... Political Clash Escalates as Calls Gro...
28 Sep 2026•
ગુજરાતી मराठी ਪੰਜਾਬੀ বাংলা

ದೇವದುರ್ಗ ಎಂದರೆ ನನಗೆ ಎಮೋಷನ್ ಚಿತ್ರ ನಟ ಅಂಜನ್

✍️ Reporter: MAHAMAD WALI QURESHI 🗓 23 Sep 2026, 09:14 AM 👁 41
Watch on: ▶️ YouTube
Share: 💬 WhatsApp 📘 Facebook 𝕏 Post
ದೇವದುರ್ಗ ಎಂದರೆ ನನಗೆ ಎಮೋಷನ್ ಚಿತ್ರ ನಟ ಅಂಜನ್

ನೀಡ್ 24 ನ್ಯೂಸ್

ದೇವದುರ್ಗ: "ದೇವದುರ್ಗ ಎಂದರೆ ನನಗೆ ಎಮೋಷನ್. ಇಲ್ಲಿನ ಜನರು ತೋರುವ ಪ್ರೀತಿ, ಆತ್ಮೀಯತೆ ಎಂದಿಗೂ ಮರೆಯಲಾಗದು. ದೇವದುರ್ಗ ನನ್ನ ಮನೆಯಂತಾಗಿದೆ" ಎಂದು ಚಿತ್ರ ನಟ ಅಂಜನ್ ಹೇಳಿದರು.

ತಾಲೂಕಿನ ಜಾಲಹಳ್ಳಿಗೆ ಸೋಮವಾರ 'ಹುಲಿ ಬೀರ' ಚಿತ್ರದ ಬಿಡುಗಡೆ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದಲ್ಲಿ ಅಭಿಮಾನಿಗಳು ಹಾಗೂ ಸ್ಥಳೀಯರನ್ನುದ್ದೇಶಿಸಿ ಮಾತನಾಡಿದರು.

ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಇಲ್ಲಿನ ಬದುಕು ಹಾಗೂ ಸಂಸ್ಕೃತಿಯನ್ನು ಒಳಗೊಂಡಿರುವ 1 'ಹುಲಿ ಬೀರ' ಚಿತ್ರ ಅ.2ರಂದು

ರಾಜ್ಯಾದ್ಯಂತ ತೆರೆಕಾಣಲಿದೆ. ಉತ್ತರ ಕರ್ನಾಟಕದ ಯುವ ಕಲಾವಿದರು ಹಾಗೂ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಬೆಂಬಲಿಸು ವಂತೆ ಅವರು ಮನವಿ ಮಾಡಿದರು.

ಇದಕ್ಕೂ ಮುನ್ನ ಶ್ರೀ ಲಕ್ಷ್ಮೀ ರಂಗನಾಥ ದೇವರಿಗೆ ಪೂಜೆ ಸಲ್ಲಿಸಿದ ಅಂಜನ್, ತಮ್ಮ ಚಿತ್ರದ ಪ್ರಚಾರಕ್ಕೆ ಮಾಧ್ಯಮಗಳ ಮೂಲಕ ಸಹಕಾರ ನೀಡುತ್ತಿರುವ ಪ್ರತಿನಿಧಿಗಳಿಗೆ ಹಾಗೂ ಕಾರ್ಯಕ್ರಮದ

ವೇಳೆ ಭದ್ರತೆ ಮತ್ತು ಸಹಕಾರ ನೀಡಿದ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಹಾಗೂ ಸ್ಥಳೀಯರು ಅವರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ನಟ ಅಂಜನ್ ಅವರನ್ನು ನೋಡಲು

"ಉತ್ತರ ಕರ್ನಾಟಕದ ಕಲಾವಿದರು

ಮತ್ತು ಯುವ ಪ್ರತಿಭೆಗಳಿಗೆ ಪ್ರೇಕ್ಷಕರ

ಪ್ರೋತ್ಸಾಹ ಅತ್ಯಗತ್ಯ. ನಮ್ಮ ನೆಲದ

ಪ್ರತಿಭೆಗಳಿಗೆ ಅವಕಾಶ ಸಿಗಬೇಕು. 'ಹುಲಿ

ಬೀರ' ಚಿತ್ರವನ್ನು ಚಿತ್ರಮಂದಿರಕ್ಕೆ ತೆರಳಿ

ವೀಕ್ಷಿಸುವ ಮೂಲಕ ಬೆಂಬಲಿಸಬೇಕು"

ಎಂದು ಅಂಜನ್ ಹೇಳಿದರು.

ಈ ಸಂದರ್ಭದಲ್ಲಿ ತಿಮ್ಮಣ್ಣ ನಾಯಕ್ ದಿವಾನ, ರೂಪ ಶ್ರೀನಿವಾಸ್ ನಾಯಕ, ಬಸವರಾಜ್ ರಾಂಪಳ್ಳಿ, ರಂಗನಾಥ ಮಕಾಸಿ, ಶಿವರಾಜ ಕಕ್ಕಲದೊಡ್ಡಿ, ವೀರೇಶ್ ಅರಕೇರಾ, ರಂಗನಾಥ ಮುರಾಳ, ಮಲ್ಲು ಚಿಂತಲಕುಂಟ, ರಾಚಣ್ಣನಾಯಕ್ ಕೋಳೂರು, ತಿಮ್ಮಣ್ಣ ಅರಕೇರಾ, ರಂಗನಾಥ ದೇವದುರ್ಗ ಸೇರಿದಂತೆ ಅಭಿಮಾನಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
📲Get App