🔥 TRENDING రాజ్యాంగ సంస్థలను కేంద్రం ప్రభావితం చే... Breaking news - सेवढ़ा पुलिस ने मुबारक... ಗ್ರಾಮ ಪಂಚಾಯತಿಗಳಲ್ಲಿ ಅಕ್ರಮ: ಪ್ರಜಾ ಸೇವೆ... ఆదిలాబాద్ జిల్లా.. పర్యాటక ప్రదేశాల ఖి... सुजानगढ़ नगर परिषद सभापति मदन जी गुलार... SBI Clerk 2026 Prelims Cut‑Offs Reveal...
28 Sep 2026•
ગુજરાતી मराठी ਪੰਜਾਬੀ বাংলা

ರೈತರು ಒಂದೇ ಬೆಳೆಗೆ ಸೀಮಿತವಾಗದೆ ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಭಟ್

✍️ Reporter: KALLAPPA MIRJI 🗓 22 Sep 2026, 08:42 AM 👁 57
Share: 💬 WhatsApp 📘 Facebook 𝕏 Post

ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ರೈತರಿಗಾಗಿ ಮನುವಿಕಾಸ ಸಂಸ್ಥೆಯಿಂದ ಆಯೋಜಿಸಿದ್ದ ಜಲ ಕೃಷಿ ಸಮೃದ್ಧಿ ಯೋಜನೆಯಡಿ ಸೋಮವಾರ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಲಘಟಗಿ: ರೈತರು ನಮ್ಮ ಸಂಸ್ಥೆಯ ಪಾಲುದಾರರಾಗಿದ್ದು ಫಲಾನುಭವಿಗಳಲ್ಲ ರೈತರು ಒಂದೇ ಬೆಳೆಗೆ ಸೀಮಿತವಾಗದೆ ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನುವಿಕಾಸ ಸಂಸ್ಥೆ ನಿರ್ದೇಶಕ ಗಣಪತಿ ಭಟ್ ಹೇಳಿದರು.
ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ರೈತರಿಗಾಗಿ ಮನುವಿಕಾಸ ಸಂಸ್ಥೆಯಿಂದ ಆಯೋಜಿಸಿದ್ದ ಜಲ ಕೃಷಿ ಸಮೃದ್ಧಿ ಯೋಜನೆಯಡಿ ಸೋಮವಾರ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಗ್ರಾಮದ ಹಿರಿಯರಾದ ಶಿವಲಿಂಗಪ್ಪ ಯಲಿವಾಳ ಮಾತನಾಡಿ ಮನುವಿಕಾಸ ಸಂಸ್ಥೆಯು ಮಹಿಳಾ ಸಬಲೀಕರಣ ಮತ್ತು ಕೆರೆಗಳ ಹೊಳೆತ್ತುವ ಮೂಲಕ ನೀರಿನ ಸಂರಕ್ಷಣೆ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಧಾರವಾಡ ತೋಟಗಾರಿಕೆ ಇಲಾಖೆ ಸಂಪನ್ಮೂಲ ಅಧಿಕಾರಿ ಚಂದ್ರಕಾಂತ ಮಾತನಾಡಿ ಸಂರಕ್ಷಿತ ಬೇಸಾಯ, ಹಸಿರುಮನೆ, ಪಾಲಿಹೌಸ್, ನೆರಳು ಪರದೆ ಮನೆ, ಹನಿ ನೀರಾವರಿ, ಪ್ಲಾಸ್ಟಿಕ್ ಮಲ್ಚಿಂಗ್, ಆಧುನಿಕ ನರ್ಸರಿ ಹಾಗೂ ತಂತ್ರಜ್ಞಾನ ಆಧಾರಿತ ರೋಗ ಪತ್ತೆ ವಿಧಾನ ಅಳವಡಿಸಿಕೊಳ್ಳುವ ಕುರಿತು ರೈತರಿಗೆ ಮಾಹಿತಿ ನೀಡಿದರು.
ಮನುವಿಕಾಸ ಸಂಸ್ಥೆ ಯೋಜನೆಯಡಿ ಭೂಮಿ ಸಮತಟ್ಟು ಮಾಡಿಸಿಕೊಂಡ ಗ್ರಾಮದ ರೈತ ಈರಪ್ಪ ದನಿಗೊಂಡ ಅನುಭವ ಹಂಚಿಕೊಂಡರು.
ಗ್ರಾಮಸ್ಥರಾದ ಜಿ.ಪಂ ಮಾಜಿ ಸದಸ್ಯೆ ಈರವ್ವ ದಾಸನಕೊಪ್ಪ, ನಿಂಗಯ್ಯ ಹಿರೇಮಠ, ಚನ್ನಪ್ಪ ಕೊಠಗುಣಸಿ,ಉಮೇಶ್ ಕಾಳಿ,ದ್ಯಾಮಣ್ಣ ಬಡಿಗೇರ, ನಿಂಗಪ್ಪ ಜಮ್ಮಿಹಾಳ, ಬಸಮ್ಮ ಬಸರಿಕೊಪ್ಪ, ಬಸವರಾಜ ಅಂಗಡಿ, ಗೀತಾ ನಿಲೇಕಣಿ ಹಾಗೂ ಮನುವಿಕಾಸ ಸಂಸ್ಥೆ ಸಿಬ್ಬಂದಿಗಳು ಇದ್ದರು.
📲Get App