🔥 TRENDING Ayushmann Khurrana to Portray Pakistan... Madonna and Taylor Swift Dominate MTV... TVK Minister Criticises Udhayanidhi St... Tamil Nadu government revokes controve... Massive protest erupts in Ujjain over... Ujjain mosque demolition sparks stone‑...
28 Sep 2026•
ગુજરાતી मराठी ਪੰਜਾਬੀ বাংলা
ದೇವದುರ್ಗ ಚಿಕ್ಕಹೂನ್ನಕುಣಿ ನೀರಾವರಿ ಕಚೇರಿ ವಿಲೀನಕ್ಕೆ ರೈತ ಸಂಘದ ತೀವ್ರ ವಿರೋಧ ಆದೇಶ ಹಿಂಪಡೆಯದಿದ್ದರೆ ಹೋರಾಟ ಮರಿಲಿಂಗ ಪಾಟೀಲ್

ದೇವದುರ್ಗ ಚಿಕ್ಕಹೂನ್ನಕುಣಿ ನೀರಾವರಿ ಕಚೇರಿ ವಿಲೀನಕ್ಕೆ ರೈತ ಸಂಘದ ತೀವ್ರ ವಿರೋಧ ಆದೇಶ ಹಿಂಪಡೆಯದಿದ್ದರೆ ಹೋರಾಟ ಮರಿಲಿಂಗ ಪಾಟೀಲ್

✍️ Reporter: MAHAMAD WALI QURESHI 🗓 19 Sep 2026, 10:48 AM 👁 62
Watch on: ▶️ YouTube
Share: 💬 WhatsApp 📘 Facebook 𝕏 Post
ದೇವದುರ್ಗ ಚಿಕ್ಕ ಹೊನ್ನಕುಣಿ ನೀರಾವರಿ ಕಚೇರಿ ವಿಲೀನಕ್ಕೆ ರೈತ ಸಂಘದ ತೀವ್ರ ವಿರೋಧ, ಆದೇಶ ಹಿಂಪಡೆಯದಿದ್ದರೆ ಹೋರಾಟ-ಮರಿಲಿಂಗ ಪಾಟೀಲ್

ನೀಡ್ 24 ನ್ಯೂಸ್

ದೇವದುರ್ಗ, ಸೆ.18-ದೇವದುರ್ಗ ತಾಲೂಕಿನ ಚಿಕ್ಕ ಹೊನ್ನಕುಣಿಯಲ್ಲಿರುವ ಕೃಷ್ಣಾ ಹಾಗೂ ಭದ್ರಾ ಜಲ ನಿಗಮ ನಿಯಮಿತದ ಎನ್.ಆರ್.ಪಿ.ಸಿ. ವಿಭಾಗ ಸಂಖ್ಯೆ 6ರ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಯನ್ನು ರಾಯಚೂರಿನ ಎನ್.ಆರ್. ಪಿ.ಸಿ. ವಿಭಾಗ ಸಂಖ್ಯೆ 6ರ ಕಚೇರಿಯೊಂ ದಿಗೆ ವಿಲೀನಗೊಳಿಸುವ ಸರ್ಕಾರದ ಕ್ರಮಕ್ಕೆ ಕರ್ನಾಟಕ ರಾಜ್ಯ ರೈತ ಸಂಘ

ತೀವ್ರ ವಿರೋಧ ವ್ಯಕ್ತಪಡಿಸಿದೆ. ಹಾಗೂ ಹಸಿರು ಸೇನೆ ದೇವದುರ್ಗ ತಾಲೂಕು ಘಟಕ

ಚಿಕ್ಕ ಹೊನ್ನಕುಣಿಯಲ್ಲಿರುವ ನೀರಾ ವರಿ ಇಲಾಖೆಯ ಕಚೇರಿಯನ್ನು ವಿಲೀ ನಗೊಳಿಸುವ ನಿರ್ಧಾರವು ದೇವದುರ್ಗ ತಾಲೂಕಿನ ರೈತರಿಗೆ ತೀವ್ರ ತೊಂದರೆ ಉಂಟುಮಾಡಲಿದೆ. ಸ್ಥಳೀಯವಾಗಿ ನಡೆ ಯುವ ಸಣ್ಣಪುಟ್ಟ ನೀರಾವರಿ ಕಾಮಗಾ ರಿಗಳು, ರೈತರ ಸಮಸ್ಯೆಗಳು ಹಾಗೂ ಇಲಾಖೆಗೆ ಸಂಬಂಧಿ

ಸಿದ ಕೆಲಸಗಳಿಗಾಗಿ ರಾಯಚೂರು ಜಿಲ್ಲಾ ಕೇಂದ್ರಕ್ಕೆ ತೆರಳಬೇ ಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರು ಹಾಗೂ ಗ್ರಾಮೀಣ ಭಾಗ ದ ಜನರ ಅನುಕೂಲಕ್ಕಾಗಿ ಸ್ಥಳೀಯವಾಗಿಯೇ ಕಾರ್ಯನಿರ್ವಹಿ ಸುತ್ತಿರುವ ಕಚೇರಿಯನ್ನು ಸ್ಥಳಾಂತರಿ ಸುವ ಅಥವಾ ವಿಲೀನಗೊಳಿಸುವ ಕ್ರಮ ವನ್ನು ಕೂಡಲೇ
ಚಿಕ್ಕ ಹೊನ್ನಕುಣಿ ನೀರಾವರಿ ಕಚೇರಿ ವಿಲೀನಕ್ಕೆ ರೈತ ಸಂಘದ ತೀವ್ರ ವಿರೋಧ, ಆದೇಶ ಹಿಂಪಡೆಯದಿದ್ದರೆ ಹೋರಾಟ-ಮರಿಲಿಂಗ ಪಾಟೀಲ್‌

ಕೈಬಿಡಬೇಕು. ರೈತರ ಹಿತಾಸಕ್ತಿಗೆ ವಿರುದ್ಧವಾಗಿರುವ ಇಂತಹ ನಿರ್ಧಾರವನ್ನು ಸರ್ಕಾರ ಮರುಪರಿಶೀಲಿ ಸಬೇಕು ಎಂದು ಸಂಘ ಒತ್ತಾಯಿಸಿದೆ.

ಜನಪ್ರತಿನಿಧಿಗಳಿಗೆ ನೇರ ಎಚ್ಚರಿಕೆ:

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು, ರಾಯಚೂರು ಸಂಸದರು ಹಾಗೂ ದೇವದುರ್ಗ ಕ್ಷೇತ್ರದ ಶಾಸಕರು ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇ ಶಿಸಿ, ಚಿಕ್ಕ ಹೊನ್ನಕುಣಿ ಕಚೇರಿ ವಿಲೀನ ಆದೇಶವನ್ನು ತಡೆಹಿಡಿಯಲು ಸರ್ಕಾ ರದ ಮೇಲೆ ಒತ್ತಡ ಹೇರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.

ಚುನಾಯಿತ ಜನಪ್ರತಿನಿಧಿಗಳು ರೈತರ ಪರವಾಗಿ ಧ್ವನಿ ಎತ್ತಬೇಕಾದ ಸಂದರ್ಭದಲ್ಲಿ ಈ ವಿಚಾರದಲ್ಲಿ ಮೌನ ವಹಿಸಿದರೆ, ಅದು ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಂಘದ ಮುಖಂಡರು ಎಚ್ಚರಿಸಿದ್ದಾರೆ.

ಒಂದು ವಾರದೊಳಗೆ ವಿಲೀನ ಆದೇಶವನ್ನು ಹಿಂಪಡೆಯದಿದ್ದರೆ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿ ವರು, ಸಂಸದರು ಹಾಗೂ ದೇವದುರ್ಗ ಶಾಸಕರ ಕಚೇರಿ ಮತ್ತು ನಿವಾಸಗಳ ಮುಂದೆ ರೈತರು ಹೋರಾಟ ನಡೆಸು ವುದರ ಜೊತೆಗೆ ಮುತ್ತಿಗೆ ಚಳುವಳಿ ಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದೇವದುರ್ಗ ಘಟಕ ಪತ್ರಿ ಕಾಗೋಷ್ಠಿಯಲ್ಲಿ ಸರ್ಕಾರ ಹಾಗೂ ಜನ ಪ್ರತಿನಿಧಿಗಳಿಗೆ ನೇರ ಎಚ್ಚರಿಕೆ ನೀಡಿದೆ.

ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳು ವುದಿಲ್ಲ. ಚಿಕ್ಕ ಹೊನ್ನಕುಣಿ ಕಚೇರಿ ಯನ್ನು ವಿಲೀನಗೊಳಿಸುವ ಕ್ರಮವನ್ನು ಕೂಡಲೇ ಕೈಬಿಡಬೇಕು.

ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಅಧ್ಯಕ್ಷ ಮಲ್ಲೇಶ್ ನಾಯಕ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ರಮೇಶ್ ನಾಯಕ ಸಿಪ್ಪತಗೇರಾ, ಸಂಘದ ವಿವಿಧ ಪದಾಧಿ ಕಾರಿಗಳಾದ ಬಸವರಾಜ ಸ್ವಾಮಿ, ನಾಗರಾಜ ತೆಗ್ಗಿಹಾಳ, ಅಲ್ಲಾ ಉದ್ದಿನ್ ಬುವಾಜಿ, ಜ್ಯೋತಿ ಬಸವ ನಾಯಕ ಚಿಂಚೋಡಿ, ಇರ್ಫಾನ್ ‌ ಭುವಜಿ ಸೇರಿದಂತೆ ಇತರರು ಇದ್ದರು..
📲Get App