🔥 TRENDING రాజ్యాంగ సంస్థలను కేంద్రం ప్రభావితం చే... Breaking news - सेवढ़ा पुलिस ने मुबारक... ಗ್ರಾಮ ಪಂಚಾಯತಿಗಳಲ್ಲಿ ಅಕ್ರಮ: ಪ್ರಜಾ ಸೇವೆ... ఆదిలాబాద్ జిల్లా.. పర్యాటక ప్రదేశాల ఖి... सुजानगढ़ नगर परिषद सभापति मदन जी गुलार... SBI Clerk 2026 Prelims Cut‑Offs Reveal...
28 Sep 2026•
ગુજરાતી मराठी ਪੰਜਾਬੀ বাংলা
ಕಟ್ಟಡಕ್ಕೆ ಇಂಜಿನಿಯರ್ ಜೀವ ತುಂಬಲು ಸಾಕಷ್ಟು ಪರಿಶ್ರಮ ವಹಿಸಿರುತ್ತಾರೆ: ನಟಿ ವಸುಪಾಲ

ಕಟ್ಟಡಕ್ಕೆ ಇಂಜಿನಿಯರ್ ಜೀವ ತುಂಬಲು ಸಾಕಷ್ಟು ಪರಿಶ್ರಮ ವಹಿಸಿರುತ್ತಾರೆ: ನಟಿ ವಸುಪಾಲ

✍️ Reporter: KALLAPPA MIRJI 🗓 18 Sep 2026, 11:40 AM 👁 41
Watch on: ▶️ YouTube
Share: 💬 WhatsApp 📘 Facebook 𝕏 Post

ಪಟ್ಟಣದಲ್ಲಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಆಯೋಜಿಸಿದ್ದ ಇಂಜಿನಿಯರ್ ದಿನದ ಕಾರ್ಯಕ್ರಮ ಉದ್ಘಾಟಿಸಿ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕಲಘಟಗಿ: ನಾನು ನಟಿಯಾಗಿ ಒಂದು ವ್ಯಕ್ತಿತ್ವಕ್ಕೆ ಹೇಗೆ ಅಭಿನಯದ ಮುಖಾಂತರ ಜೀವ ತುಂಬುತ್ತೆವೆ ಹಾಗೆ ಒಂದು ಕಟ್ಟಡ ಯಶಸ್ವಿಯಾಗಲು ಒಬ್ಬ ಇಂಜಿನಿಯರ್ ಕಟ್ಟಡಕ್ಕೆ ಜೀವ ತುಂಬಲು ನಕ್ಷೆ ತಯಾರಿಸಿ ಸಾಕಷ್ಟು ಪರಿಶ್ರಮ ವಹಿಸಿರುತ್ತಾರೆ ಎಂದು ಚಿತ್ರನಟಿ ಮಲೈಕಾ ವಸುಪಾಲ ಹೇಳಿದರು.
ಪಟ್ಟಣದಲ್ಲಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಆಯೋಜಿಸಿದ್ದ ಇಂಜಿನಿಯರ್ ದಿನದ ಕಾರ್ಯಕ್ರಮ ಉದ್ಘಾಟಿಸಿ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಇಂಜನಿಯರ ಸಂಘದ ಅಧ್ಯಕ್ಷ ಅಜಿತ್ ಪಾಟೀಲ ಮಾತನಾಡಿ ಸರ್. ಎಂ ವಿಶ್ವೇಶ್ವರಯ್ಯ ನವರು ಸಮಯಪಾಲನೆ, ಪ್ರಾಮಾಣಿಕತೆ, ಶಿಸ್ತು, ಶ್ರೇಷ್ಠತೆ, ರಾಷ್ಟ್ರ ನಿರ್ಮಾಣದ ಆದರ್ಶ ವ್ಯಕ್ತಿಯಾಗಿದ್ದರು ಅವರ ಜೀವನ ಸಾಧನೆಗಳು ಈಗಿನ ಪ್ರತಿಯೊಬ್ಬ ಇಂಜಿನಿಯರ್ ಗಳಿಗೆ ಪ್ರೇರಣೆಯಾಗಿದೆ ಎಂದರು.
ಪ್ರತಿ ವರ್ಷ ನಮ್ಮ ಸಂಘದ ಉದ್ದೇಶ ವೃತ್ತಿಯಲ್ಲಿ ಗುಣಮಟ್ಟತೆ, ವೃತ್ತಿಪರ ಜ್ಞಾನ ಹಂಚಿಕೊಳ್ಳುವುದು, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶವಾಗಿದೆ ಎಂದರು. ಇಂಜಿನಿಯರ್ ದಿನಾಚಣೆ ಅಂಗವಾಗಿ ವಿವಿಧ ಸಿಮೆಂಟ್ ಕಂಪನಿ ವಿತರಕರ ಹಾಗೂ ಸಿವಿಲ್ ಇಂಜಿನಿಯರ್ ಸನ್ಮಾನಿಸಿ ಗೌರವಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಶೇಖರ್ ಬಿ, ಹಿರಿಯ ಅಭಿಯತರ ಎಂ.ಎಚ್ ದೊಡ್ಡಮನಿ, ಷಣ್ಮುಖ ಸವಣೂರ, ಮಹೇಶ ಪಾವಶಿ, ಎಸ್. ಜಿ ಉಣಕಲ, ಕಲ್ಮೇಶ್ ಬೆಣ್ಣಿ, ವಿಶ್ವನಾಥ್ ಮಟ್ಟಿ, ಸೈನಿಕ ಚಿಂತಾಮಣಿ, ಉಮೇಶ್ ಜಮಖಂಡಿ, ರವಿ ಶೆಟ್ಟಿ, ನಾಗರಾಜ್ ಮಹಾಜನಶೆಟ್ಟರ, ಇದ್ದರು.
📲Get App