🔥 TRENDING उन्नाव में मूसलाधार बारिश से जनजीवन अस... LPU Students Protest Against Administr... User Searches for 'deescalatetensions'... TribuneIndia.com Users Search for "Jij... Dr Shiny Devassy featured in Tribune I... Truck rams police SUV in Rewari, drive...
28 Sep 2026•
ગુજરાતી मराठी ਪੰਜਾਬੀ বাংলা
ಆವರಗೊಳ್ಳದಲ್ಲಿ ವಿಜೃಂಭಣೆಯ ವೀರಭದ್ರೇಶ್ವರ ಜಯಂತೋತ್ಸವ

ಆವರಗೊಳ್ಳದಲ್ಲಿ ವಿಜೃಂಭಣೆಯ ವೀರಭದ್ರೇಶ್ವರ ಜಯಂತೋತ್ಸವ

✍️ Reporter: Viswanatha D R 🗓 15 Sep 2026, 09:20 PM 👁 55
Watch on: ▶️ YouTube
Share: 💬 WhatsApp 📘 Facebook 𝕏 Post
ದಾವಣಗೆರೆ, ಸೆ.15: ಜಿಲ್ಲೆಯ ಆವರಗೊಳ್ಳ ಗ್ರಾಮದಲ್ಲಿ ಭಾದ್ರಪದ ಮಾಸದ ಮೊದಲ ಮಂಗಳವಾರದ ಅಂಗವಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಶಿವನ ಜಡೆಯಿಂದ ಅವತರಿಸಿ ದಕ್ಷಬ್ರಹ್ಮನ ಸಂಹಾರ ಮಾಡಿದ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯುತ್ಸವದ ಅಂಗವಾಗಿ ಬೆಳಿಗ್ಗೆ ಗುಗ್ಗಳ ಹಾಗೂ ದಾಸೋಹ ಕಾರ್ಯಕ್ರಮ ಜರುಗಿತು. ಶಾಂತಿಸಾಗರ (ಸೂಳೆಕೆರೆ)ದ ಶ್ರೀ ಸಿದ್ದೇಶ್ವರ ಸ್ವಾಮಿ , ಬಾತಿ ಸಿದ್ದೇಶ್ವರ ಸ್ವಾಮಿ ಹಾಗೂ ಬೀರಲಿಂಗೇಶ್ವರ ಸ್ವಾಮಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದವು,

ಸಂಜೆ ವಿವಿಧ ವಾದ್ಯಮೇಳ, ವೀರಗಾಸೆ, ಡೊಳ್ಳು ಕುಣಿತ ಹಾಗೂ ಭಜನೆ-ಭಜಂತ್ರಿಗಳೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಆವರಗೊಳ್ಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು.
📲Get App