🔥 TRENDING Bollywood Stars Shine at Global Fashio... BollywoodHungama Releases 337 Photos o... Bollywood Hungama Unveils 10 New Photo... Microdramas Shine at FICCI FRAMES, Mar... Film Bodies Protest 570% BMC Tax Hike,... Swara Bhasker Calls Backlash Over Padm...
28 Sep 2026•
ગુજરાતી मराठी ਪੰਜਾਬੀ বাংলা
ಚಿಕ್ಕಹೊನ್ನಕುಣಿಯಲ್ಲೇ ನೀರಾವರಿ ಇಲಾಖೆ ಉಳಿಸಿ: ಪ್ರಾಂತ ರೈತ ಸಂಘ ಆಗ್ರಹ

ಚಿಕ್ಕಹೊನ್ನಕುಣಿಯಲ್ಲೇ ನೀರಾವರಿ ಇಲಾಖೆ ಉಳಿಸಿ: ಪ್ರಾಂತ ರೈತ ಸಂಘ ಆಗ್ರಹ

✍️ Reporter: Khajahussain baba Jalahalli 🗓 13 Sep 2026, 08:25 PM 👁 55
Share: 💬 WhatsApp 📘 Facebook 𝕏 Post
📰 ದೇವದುರ್ಗ | ಬ್ರೇಕಿಂಗ್ ನ್ಯೂಸ್

ಚಿಕ್ಕಹೊನ್ನಕುಣಿಯಲ್ಲೇ ನೀರಾವರಿ ಇಲಾಖೆ ಉಳಿಸಿ: ಪ್ರಾಂತ ರೈತ ಸಂಘ ಆಗ್ರಹ

ಕಚೇರಿ ಸ್ಥಳಾಂತರದ ನಿರ್ಧಾರ ಕೈಬಿಡದಿದ್ದರೆ ಬೃಹತ್ ಪ್ರತಿಭಟನೆ: ಎಚ್ಚರಿಕೆ

ದೇವದುರ್ಗ, ಸೆ.12: ರೈತರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಬೇಕಾದ ನಾರಾಯಣಪುರ ಬಲದಂಡೆ ಕಾಲುವೆಯ ಚಿಕ್ಕಹೊನ್ನಕುಣಿ ವಿಭಾಗ ಸಂಖ್ಯೆ–6ರ ನೀರಾವರಿ ಇಲಾಖೆಯ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸುವ ಕ್ರಮಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ದೇವದುರ್ಗ ತಾಲೂಕು ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕಚೇರಿ ಸ್ಥಳಾಂತರಿಸುವ ನಿರ್ಧಾರವನ್ನು ಕೂಡಲೇ ಕೈಬಿಟ್ಟು, ಚಿಕ್ಕಹೊನ್ನಕುಣಿಯಲ್ಲೇ ಕಚೇರಿಯನ್ನು ಮುಂದುವರಿಸಬೇಕು ಎಂದು ಸಂಘ ಆಗ್ರಹಿಸಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಹನುಮಂತ ಗುರಿಕಾರ ಹಾಗೂ ಕಾರ್ಯದರ್ಶಿ ಮೌನೇಶ ಜಾಲಹಳ್ಳಿ, ಚಿಕ್ಕಹೊನ್ನಕುಣಿಯಲ್ಲಿರುವ ನೀರಾವರಿ ಕಚೇರಿ ಸುತ್ತಮುತ್ತಲಿನ ಸಾವಿರಾರು ರೈತರಿಗೆ ನೇರ ಸಂಪರ್ಕದ ಕೇಂದ್ರವಾಗಿದೆ. ಕಾಲುವೆ ನಿರ್ವಹಣೆ, ನೀರು ಹರಿವು, ಕಾಲುವೆ ದುರಸ್ತಿ, ನೀರಿನ ಕೊರತೆ ಹಾಗೂ ಬೆಳೆಗಳಿಗೆ ಸಂಬಂಧಿಸಿದ ತುರ್ತು ಸಮಸ್ಯೆಗಳನ್ನು ರೈತರು ಅಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲೇ ಪರಿಹಾರ ಪಡೆಯಲು ಈ ಕಚೇರಿ ಅತ್ಯಂತ ಅನುಕೂಲವಾಗಿದೆ ಎಂದು ತಿಳಿಸಿದರು.

“ನೀರಾವರಿ ಇಲಾಖೆ ರೈತರಿಗೆ ಅನುಕೂಲ ಕಲ್ಪಿಸಬೇಕೇ ಹೊರತು, ರೈತರಿಂದ ದೂರವಾಗಬಾರದು. ಕಾಲುವೆಯಲ್ಲಿ ನೀರು ನಿಂತಾಗ, ಕಾಲುವೆ ಒಡೆದಾಗ ಅಥವಾ ಬೆಳೆಗಳಿಗೆ ನೀರಿನ ಕೊರತೆಯಾದಾಗ ರೈತರು ದೂರದ ರಾಯಚೂರಿನ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು” ಎಂದು ಅವರು ಹೇಳಿದರು.

ಚಿಕ್ಕಹೊನ್ನಕುಣಿ ವಿಭಾಗ ಸಂಖ್ಯೆ–6ರ ನೀರಾವರಿ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಇದೇ ಸ್ಥಳದಲ್ಲಿ ಕಚೇರಿಯನ್ನು ಮುಂದುವರಿಸಬೇಕು. ಇಲ್ಲವಾದಲ್ಲಿ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ
📲Get App