🔥 TRENDING Arunachal Governor Bestows Tourism Awa... West Kameng Police Arrest Suspect in P... President Droupadi Murmu meets student... Jammu & Kashmir Government Declares No... BJP tables motion to oust J&K Assembly... Jammu & Kashmir Assembly Demands Immed...
28 Sep 2026•
ગુજરાતી मराठी ਪੰਜਾਬੀ বাংলা
ಜಿವಂತ ಇರುವ ವ್ಯಕ್ತಿಯನ್ನೆ ಸರ್ಕಾರಿ ದಾಖಲೆಯಲ್ಲಿ ಮೃತ ದಾಖಲು

ಜಿವಂತ ಇರುವ ವ್ಯಕ್ತಿಯನ್ನೆ ಸರ್ಕಾರಿ ದಾಖಲೆಯಲ್ಲಿ ಮೃತ ದಾಖಲು

✍️ Reporter: KALLAPPA MIRJI 🗓 13 Sep 2026, 01:41 PM 👁 64
Share: 💬 WhatsApp 📘 Facebook 𝕏 Post

ತಬಕದಹೊನ್ನಳ್ಳಿ ಗ್ರಾಮದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಬೆಳಕಿಗೆ ಬಂದಿದೆ.

ಕಲಘಟಗಿ: 5 ವರ್ಷಗಳ ಹಿಂದೆ ತಂದೆಯ ಮರಣದ ದಾಖಲೆಗೆ ಅರ್ಜಿ ಸಲ್ಲಿಸಿದ ಮಗನಿಗೆ ಸರ್ಕಾರಿ ದಾಖಲೆಯಲ್ಲಿ ಮಗನೇ ಮೃತ ಪಟ್ಟಿದ್ದಾನೆ ಎಂದು ನಮೋದಿಸಿದ ಪ್ರಕರಣದ ಆರೋಪ ತಬಕದಹೊನ್ನಳ್ಳಿ ಗ್ರಾಮದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಬೆಳಕಿಗೆ ಬಂದಿದೆ.
ನಂತರ ಸಾರ್ವಜನಿಕ ಸಮಸ್ಯೆಗಳ ಅಹವಾಲು ಸ್ವೀಕರಿಸಲು ಪ್ರಾರಂಭಿಸಿದಾಗ ತಬಕದಹೊನ್ನಳ್ಳಿ ಗ್ರಾಮದ ಅಶೋಕ ಗೌಡೇನವರ ಎಂಬುವವರು 11-4-2022 ರಂದು ಮೃತಪಟ್ಟ ನಮ್ಮ ತಂದೆ ಪರಸಪ್ಪ ಗೌಡೇನವರ ಮರಣ ದಾಖಲೆ ಪಡೆಯಲು ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದೇನೆ ಎಂದರು.
ನಮ್ಮ ತಂದೆಯವರ ಮರಣ ದಾಖಲೆ ಪಡೆದು ಕೆಲವು ದಿನಗಳ ನಂತರ ಮಕ್ಕಳ ಶಿಕ್ಷಣಕ್ಕೆ ಹಾಗೂ ಸರ್ಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಮುಂದಾದಾಗ ಕಂಪ್ಯೂಟರ್ ನಲ್ಲಿ ನಾನೇ ಮೃತ ಪಟ್ಟಿದ್ದೇನೆ ಎಂದು ದಾಖಲಾಗಿದ್ದು 5 ವರ್ಷಗಳು ಕಳೆದರೂ ನಮ್ಮ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ತಿದ್ದುಪಡೆಗೆ ಅರ್ಜಿ ಸಲ್ಲಿಸಿದರು ನಿರ್ಲಕ್ಷ: 5 ವರ್ಷಗಳ ಹಿಂದೆ ಅಶೋಕ ಅವರು ನಮ್ಮ ದಾಖಲೆಯಲ್ಲಿ ಆದ ತಾಂತ್ರಿಕ ಲೋಪ ದೋಷ ಸರಿಪಡಿಸಬೇಕು ಎಂದು ತಹಸೀಲ್ದಾರ ಕಚೇರಿಗೆ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಅರ್ಜಿ ಸಲ್ಲಿಸಿ 5 ವರ್ಷಗಳಿಂದ ನಿರಂತರವಾಗಿ ಕಚೇರಿಗೆ ಅಲೆದಾಡುತ್ತಿದ್ದರು ಕೆಲಸ ಮಾಡದೇ ಅಧಿಕಾರಿಗಳು ಭರವಸೆ ನೀಡಿ ಸತಾಯಿಸುತ್ತಿದ್ದಾರೆ. ಇನ್ನಾದರೂ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ನಾನು ಕಚೇರಿಗೆ ಅಲೆದಾಡಿದ ಖರ್ಚು ವೆಚ್ಚ ಭರಿಸಬೇಕು ಎಂದು ಸಂತ್ರಸ್ತರಾದ ಅಶೋಕ ಗೌಡೇನವರ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಒತ್ತಾಯಿಸಿದರು.
📲Get App