🔥 TRENDING பள்ளி காலாண்டு விடுமுறை: ஏற்காட்டில் க... Louisiana Court Rules in Favor of Jone... Heavy Rain in Uttar Pradesh Claims 56... Thar SUV crashes into motorcycle on Dw... Virat Kohli's Six-Fueled Century Sets... Health Ministry advises lowest effecti...
28 Sep 2026•
ગુજરાતી मराठी ਪੰਜਾਬੀ বাংলা
ದಾನಿಯೊಬ್ಬರಿಂದ ಸರಕಾರಿ ಶಾಲೆಯ ಕಟ್ಟಡ ದ್ವಂಸ ದೇವದುರ್ಗ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ದಾನಿಯೊಬ್ಬರಿಂದ ಸರಕಾರಿ ಶಾಲೆಯ ಕಟ್ಟಡ ದ್ವಂಸ ದೇವದುರ್ಗ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

✍️ Reporter: MAHAMAD WALI QURESHI 🗓 12 Sep 2026, 03:30 PM 👁 56
Share: 💬 WhatsApp 📘 Facebook 𝕏 Post
ದಾನಿಯೊಬ್ಬರಿಂದ ಸರಕಾರಿ ಶಾಲಾ ಕಟ್ಟಡ ದ್ವಂಸ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನೀಡ್ 24 ನ್ಯೂಸ್

ದೇವದುರ್ಗ, ಸೆ.11- ಮಸರಕಲ್ ಕ್ಲಸ್ಟರ್ ವ್ಯಾಪ್ತಿಯ ಚಿಕ್ಕಹೊನ್ನಕುಣಿ

ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ ದಾನಿಯೊಬ್ಬರು ಏಕಾಏಕಿ ದ್ವಂಸ ಮಾಡಿದ ಹಿನ್ನೆಲೆ ಮುಖ್ಯಶಿಕ್ಷಕ ಜಗದೇಶ ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಮೂರು ತಿಂಗಳವಾದರೂ, ಆರೋಪಿಗಳ ಬಂಧಿಸಲು ಪೊಲೀಸ್ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.

50ರ ದಶಕದಿಂದೆ ದಾನಿಯೊಬ್ಬರು ಶಾಲಾ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಿದ್ದು, ಪಹಣಿಯಲ್ಲಿ ರಾಜ್ಯಪಾಲರ ಹೆಸರಿಗೆ ನೊಂದಾಣಿಯಾಗಿದೆ. ಎಸ್ಟಿಮೀಟ್ ಕಾಫಿ ಕೇಳುತ್ತಿರುವ ಪೊಲೀಸ್ ಅಧಿಕಾರಿಗಳು ಇಲ್ಲದ ದಾಖಲೆ ಗಳು ಎಲ್ಲಿಂದ ತರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೈಚಲ್ಲಿದರಿಂದ ಪ್ರಕರಣ ಮರಿಮಾಚುತ್ತಿದೆ. ಸರಕಾರಿ ಆಸ್ತಿ ದಾನಿಯೊಬ್ಬರು ಕಬಳುಸುತ್ತಿರುವ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಬೀಮ ಆರ್ಮಿ ಸಂಘಟನೆ ಅಧ್ಯಕ್ಷ ವಿಶ್ವನಾಥ್ ಬಲ್ಲಿದವ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಬೆಂಗಳೂರು ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆ ತಾಲೂಕಿನಾದ್ಯಂತ ಚರ್ಚೆ ತೀವ್ರ ಕೂತಹಲ ಮೂಡಿಸಿದೆ.

ದಾನಿಯೊಬ್ಬರು ಚಿಕ್ಕಹೊನ್ನಕುಣಿ ಗ್ರಾಮದ ಸರ್ವೇ ನಂ.54/1/2ರಲ್ಲಿ ಸರಕಾರಿ ಶಾಲಾ ಕಟ್ಟಡ ನಿರ್ಮಿಸಲು ಜಾಗ ನೀಡಿದರು. ಹಳೆ ಕಟ್ಟಡವಾದರಿಂದ ಬೇರೆಕಡೆ ಶಾಲಾ ಕಟ್ಟಡ ನಿರ್ಮಿಸಿದ್ದು, ದಾನಿಯೊಬ್ಬರು ಶಾಲಾ ನಿರ್ಮಾಣಕ್ಕೆ ಕೊಟ್ಟಿರುವ ಜಾಗದ ಪಕ್ಕದಲ್ಲಿ ಇನ್ನುಳಿದ ನಿವೇಶನ ಇದ್ದರಿಂದ ದ್ವಂಸ ಮಾಡಿದ ಶಾಲಾ ಕಟ್ಟಡ ಜಾಗವನ್ನು ಮಾರಾಟಕ್ಕೆ ಮಾಡಲು ಪ್ಲಾನ್ ಮಾಡಿದರಿಂದ ಶಾಲಾ ಮುಖ್ಯಶಿಕ್ಷಕ ಜಾಗದ ನೀಡಿದ ದಾನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಕಾಣದ ಕೈಯಿಗಳು ದಾನಿಗೆ

ಶಾಲಾ ನಿರ್ಮಾಣಕ್ಕೆ ನಿವೇಶನ ನೀಡಿದ ದಾನಿಯೊಬ್ಬರು ಅಧಿಕಾರಿಗಳ ಗಮನಕ್ಕೆ ತರದೇ ಏಕಾಏಕಿ ಕಟ್ಟಡ ದ್ವಂಸ ಮಾಡಿದ ಹಿನ್ನೆಲೆ ಶಾಲಾ ಮುಖ್ಯಶಿಕ್ಷಕ ಜಗದೇಶ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ರಾಜ್ಯಪಾಲರ ಹೆಸರಿಗೆ ನೊಂದಾಣಿಯಾಗಿದ್ದು, ಪಹಣಿ ಇದ್ದರೂ, ಪೊಲೀಸ್ ಆಧಿಕಾರಿಗಳು ಎಸ್ಟಿಮೀಟ್ ಕಾಫಿ ಕೇಳುತ್ತಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕುತ್ತಿದ್ದಾರೆ.

* ರಾಧಾದೇವಿ ಕ್ಷೇತ್ರ ಶಿಕ್ಷಣಾಧಿಕಾರಿ

ದಾನಿಯೊಬ್ಬರು ಶಾಲಾ ಕಟ್ಟಡ ನಿರ್ಮಿಸಲು ಜಾಗ ನೀಡಿದ್ದು, ಹಳೆ ಕಟ್ಟಡ ತರಗತಿಗಳು ನಡೆಯುತ್ತಿಲ್ಲ, ಬೆಲೆ ಬಾಳುವ ಆಸ್ತಿ ಇರುವುದರಿಂದ ಏಕಾಏಕಿ ಕಟ್ಟಡ ದ್ವಂಸಗೊಳಿಸಿದ್ದಾರೆ. ಅವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಇಲ್ಲಿವರೆಗೆ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಸಾರ್ವನಿಕ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತರಿಗೆ ಹಾಗೂ ಲೋಕಾಯುಕ್ತರಿಗೆ ಅಧಿಕಾರಿಗಳು ವಿರುದ್ದ ಕ್ರಮಕ್ಕೆ ದೂರು ನೀಡಲಾಗಿದೆ.

* ವಿಶ್ವನಾಥ್ ಬಲ್ಲಿದವ್ ಭೀಮ ಆರ್ಮಿ ಸಂಘಟನೆ ಅಧ್ಯಕ್ಷ

ಬೆಂಬಲಕ್ಕೆ ನಿಂತಿರುವ ಹಿನ್ನೆಲೆ ಪೊಲೀಸ್ ಅಧಿಕಾರಿಗಳು ಇಲ್ಲಸಲ್ಲದ ದಾಖಲೆಗಳು ನೀಡಿದರೇ ಆರೋಪಿಯನ್ನು ಬಂಧಿಸುವಂತೆ ಎಂದು ಉಢಾಪೆ ಉತ್ತರ ನೀಡಲಾಗುತ್ತಿದೆ. ಶಾಲಾ ಕಟ್ಟಡ ನಿರ್ಮಿಸಲು ದಾನಿಯೊಬ್ಬರು ಜಾಗ ನೀಡಿದ ಹಿನ್ನೆಲೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ರಾಜ್ಯಪಾಲರ ಹಸರಿಗೆ ನೊಂದಾಣಿ ಮಾಡಲಾಗಿದೆ. ದಾನ ನೀಡಿದ ಮಾಲೀಕರಿಂದಲೇ ಕೋಟ್ಯಾಂತರ ರೂ. ಆಸ್ತಿ ಕಬಳುಸುತ್ತಿರುವುದು ಸರಕಾರಿ ಆಸ್ತಿ ರಕ್ಷಣೆ ಮಾಡುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದು, ಇಲ್ಲಿವರೆಗೆ ಯಾರೊಬ್ಬರು ಕ್ರಮಕೈಗೊಳ್ಳದೇ ಇರುವುದರಿಂದ ಬೆಂಗಳೂರು ಆಯುಕ್ತರಿಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ್ದು, ಮುಂದೆನ್ನು ಆಗುತ್ತದೆ ಎಂಬ ಚರ್ಚೆ ಹುಟ್ಟಿಸಿದೆ. 50ರ ದಶಕದಿಂದೆ ದಾನಿಗಳು ಸರಕಾರಿ ಶಾಲಾ ಕಟ್ಟಡಲು ನಿವೇಶನ ನೀಡಿದರೂ, ಕೈಬರದಲ್ಲಿರುವ ಕಾರಣಕ್ಕೆ ಪಹಣಿ ಮೂಲಕ ರಾಜ್ಯಪಾಲರ ಹೆಸರಿನಲ್ಲಿ ನಿವೇಶನ ನೊಂದಾಣಿ ಮಾಡಲಾಗಿದೆ. ದ್ವಂಸ ಮಾಡಿದ ಸರಕಾರಿ ಶಾಲಾ ಕಟ್ಟಡ ಕಣ್ಣಿಗೆ ಕಂಡರೂ, ಸಂಬಂಧಪಟ್ಟಂತಹ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದು, ಎಸ್ಟಿಮೀಟ್ ಕಾಫಿ ಕೊಟ್ಟರೇ ಮಾತ್ರ ಆರೋಪಿಗಳನ್ನು ಬಂಧಿಸುವಂತೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.. ವರದಿ ವಲಿ ಖುರೇಷಿ
📲Get App