🔥 TRENDING આઇ.ટી.આઇ. અમરેલી ખાતે કાયદો અને ઊર્જા... त्यागराज स्टेडियम में ‘वैश्य कुल सांस्... राजकीय सीनियर सेकेंडरी स्कूल के कंप्यू... BTS Makes History at 2026 MTV VMAs, Wi... Vidya Vox Raises Alarm: AI Steals from... Mumbai to Experience Light Rain and Th...
28 Sep 2026•
ગુજરાતી मराठी ਪੰਜਾਬੀ বাংলা
ಅಂಬೇಡ್ಕರ್ ಅವಹೇಳನಕ್ಕೆ ಆಕ್ರೋಶ ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಬುದ್ದ-ಬಸವಣ್ಣರ ಕುರಿತು ಹೇಳಿಕೆಗಳಿಗೊ ಖಂಡನೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಯಾಗಲಿ ಹನುಮಂತಪ್ಪ ಮನ್ನಾಪೂರಿ

ಅಂಬೇಡ್ಕರ್ ಅವಹೇಳನಕ್ಕೆ ಆಕ್ರೋಶ ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಬುದ್ದ-ಬಸವಣ್ಣರ ಕುರಿತು ಹೇಳಿಕೆಗಳಿಗೊ ಖಂಡನೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಯಾಗಲಿ ಹನುಮಂತಪ್ಪ ಮನ್ನಾಪೂರಿ

✍️ Reporter: MAHAMAD WALI QURESHI 🗓 12 Sep 2026, 09:52 AM 👁 61
Share: 💬 WhatsApp 📘 Facebook 𝕏 Post
ಅಂಬೇಡ್ಕ‌ರ್ ಅವಹೇಳನಕ್ಕೆ ಆಕ್ರೋಶ: ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಬುದ್ಧ-ಬಸವಣ್ಣರ ಕುರಿತು ಹೇಳಿಕೆಗಳಿಗೂ ಖಂಡನೆ : ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆಯಾಗಲಿ: ಹನುಮಂತಪ್ಪ ಮನ್ನಾಪೂರಿ
ನೀಡ್ 24 ನ್ಯೂಸ್
ರಾಯಚೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್.

ಅಂಬೇಡ್ಕರ್, ಗೌತಮ ಬುದ್ಧ ಹಾಗೂ ಬಸವಣ್ಣ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿರುವ ವೇದ ಮೂರ್ತಿ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಂಆರ್ ಎಚ್‌ಎಸ್ ರಾಯಚೂರು ಜಿಲ್ಲಾ ಅಧ್ಯಕ್ಷ ಹನು ಮಂತಪ್ಪ ಮನ್ನಾಪೂರಿ ಆಗ್ರಹಿಸಿದ್ದಾರೆ.

ದೇಶದ ಸಂವಿಧಾನ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ಡಾ. ಬಿ.ಆರ. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಅತ್ಯಂತ ಖಂಡನೀ ಯ. ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ಸಮಾನತೆಯ ಸಂದೇಶವನ್ನು ಗೌರವಿಸುವ ಕೋಟ್ಯಂತರ ಜನರ ಭಾವನೆಗಳಿಗೆ ಇಂತಹ ಹೇಳಿಕೆಗಳಿಂದ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಗೌತಮ ಬುದ್ಧ ಅವರ ಶಾಂತಿ ಸಂದೇಶ ಮತ್ತು ಬಸವಣ್ಣನವರ ಸಮಾನತೆಯ ಚಿಂತನೆಗಳ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿ ರುವುದೂ ಖಂಡನೀಯ. ಮಹನೀಯರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಆಕ್ಷೇಪಾರ್ಹ ಹೇಳಿಕೆಗಳು ಹರಡದಂತೆ ಸರ್ಕಾರ

ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನ್ನಾಪೂರಿ ಒತ್ತಾಯಿಸಿದ್ದಾರೆ.

ವೇದಮೂರ್ತಿ ವಿರುದ್ದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಹಿನ್ನೆಲೆಯಲ್ಲಿ ಬಂಧನವಾಗಿದೆ ಎಂಬ ಮಾಹಿತಿ ಇದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಅನ್ವಯಿಸುವ ಕಾನೂನುಗಳ ಅಡಿಯಲ್ಲಿ

ಕ್ರಮ ಜರುಗಿಸಬೇಕು. ಹಿಂದೆಯೂ ಇದೇ ರೀತಿಯ ಹೇಳಿಕೆಗಳ ಹಿನ್ನೆಲೆಯಲ್ಲಿ ಪ್ರಕರಣ ಎದುರಿಸಿದ್ದರೆ, ಆ ಪ್ರಕರಣಗಳ ವಿವರಗಳನ್ನೂ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿ ದ್ದಾರೆ. ಸಾಮಾಜಿಕ ಶಾಂತಿಗೆ ಧಕ್ಕೆ ತರುವ ಹೇಳಿಕೆಗಳಿಗೆ ಕಡಿವಾಣ ಅಗತ್ಯ

ಮಹನೀಯರನ್ನು ಅವಮಾನಿಸುವ ಅಥವಾ ಜಾತಿ-ಸಮುದಾಯಗಳ ನಡುವೆ ವೈಷಮ್ಯ ಉಂಟುಮಾಡುವಂತಹ ಹೇಳಿಕೆ ಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಇಂ ತಹ ಹೇಳಿಕೆಗಳು ಮರುಕಳಿಸದಂತೆ ಕಾನೂನು ತನ್ನ ಕರ್ತವ್ಯವನ್ನು ಕಟ್ಟುನಿಟ್ಟಾಗಿ ನಿರ್ವ ಹಿಸಬೇಕು ಎಂದು ಹನುಮಂತಪ್ಪ ಮನ್ನಾ ಪೂರಿ ತಿಳಿಸಿದ್ದಾರೆ.

ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತಾದಲ್ಲಿ ಕಾನೂನು ಪ್ರಕಾರ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಯಾವುದೇ ವ್ಯಕ್ತಿಯ ವಿರುದ್ಧವೂ ಕಾನೂನನ್ನು ಕೈಗೆತ್ತಿಕೊಳ್ಳದೆ, ಸಂವಿಧಾನಬದ್ಧ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ಮೂಲ ಕವೇ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ವರದಿ ವಲಿ ಖುರೇಷಿ
📲Get App