🔥 TRENDING National Award winner Manasi Parekh sa... Gujarat Giants announce retained and r... CBI Opposes Bail for Former Bhopal Jud... ભુજ ખાણ ખનીજ વિભાગના બે કર્મચારી રૂા.... अब बदलेगी कटिहार के हर गांव की तस्वीर!... રાજુલા નગરપાલિકા દ્વારા આયોજિત સેવા સે...
28 Sep 2026•
ગુજરાતી मराठी ਪੰਜਾਬੀ বাংলা

ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆ

✍️ Reporter: Shreeshail Gurulingappa Sajjan 🗓 12 Sep 2026, 05:09 PM 👁 32
Share: 💬 WhatsApp 📘 Facebook 𝕏 Post
ಕೊಣ್ಣೂರು ಗ್ರಾಮ ಪಂಚಾಯತಿ ಮಟ್ಟದ ಕೆಡಿಪಿ ಸಭೆ ತಾಳಿಕೋಟಿ: ತಾಲೂಕಿನ ಕೊಣ್ಣೂರ ಗ್ರಾಮ ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯನ್ನು ಶುಕ್ರವಾರ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಮಹೇಶ ಜೋಶಿ ವಹಿಸಿದ್ದರು. ಈ ಸಭೆಯಲ್ಲಿ ಸಂಬಂಧಪಟ್ಟ ಅನೇಕ ಇಲಾಖೆ ಅಧಿಕಾರಿಗಳ ಜೊತೆ ಗ್ರಾಮಗಳ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ,ವಿದ್ಯುತ್, ಆರೋಗ್ಯ ಇದರ ಜೊತೆಗೆ ಭೀಕರ ಬರಗಾಲ ಆವರಿಸಿದ್ದರಿಂದ ಗ್ರಾಮೀಣ ಭಾಗದ ಪುರುಷ ಹಾಗೂ ಮಹಿಳಾ ಕೂಲಿ ಕಾರ್ಮಿಕರಿಗೆ ಸರ್ಕಾರದ ವಿಶೇಷ ಯೋಜನೆ ಯಾದ ವಿಬಿ- ಜಿ-ರಾಮ್ ಜಿ ಅಡಿಯಲ್ಲಿ ಉದ್ಯೋಗವನ್ನು ಸಮರ್ಪಕವಾಗಿ ಕೊಡುವ ಕುರಿತು ಚರ್ಚಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಯಡ್ರಾಮಿ ಅವರು ಮಾತನಾಡಿ ಈ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಉದ್ಯೋಗದ ಅವಕಾಶವನ್ನು ನೀಡಲಾಗುವುದು ಆದ್ದರಿಂದ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಈ ಸಭೆಗೆ ಹಾಜರಾಗದ
ಕಂದಾಯ ಇಲಾಖೆ, ನೀರಾವರಿ ಇಲಾಖೆಯ, ಪಶು ಪಾಲನ ಇಲಾಖೆ, ಕೆಬಿಜೆನಲ್ ಹಾಗೂ
ಅರಣ್ಯ ಇಲಾಖೆ
ಅಧಿಕಾರಿಗಳ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಸಭೆಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪಂಚಾಯಿತಿ ಆಡಳಿತ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿ ಬರದೇ ಇರುವ ಅಧಿಕಾರಿಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗುವುದು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಊರಿನ ಗಣ್ಯರು, ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ವರದಿ. ಶ್ರೀಶೈಲ ಸಜ್ಜನ ತಾಳಿಕೋಟಿ.
📲Get App