🔥 TRENDING Arunachal Governor Bestows Tourism Awa... West Kameng Police Arrest Suspect in P... President Droupadi Murmu meets student... Jammu & Kashmir Government Declares No... BJP tables motion to oust J&K Assembly... Jammu & Kashmir Assembly Demands Immed...
28 Sep 2026•
ગુજરાતી मराठी ਪੰਜਾਬੀ বাংলা
ಶಾಂತಿ ಸುವವ್ಯವಸ್ಥೆಯಿಂದ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸಿ: ಕೌಜಲಗಿ

ಶಾಂತಿ ಸುವವ್ಯವಸ್ಥೆಯಿಂದ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸಿ: ಕೌಜಲಗಿ

✍️ Reporter: KALLAPPA MIRJI 🗓 10 Sep 2026, 08:54 AM 👁 53
Share: 💬 WhatsApp 📘 Facebook 𝕏 Post

ಕಲಘಟಗಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಗಣೇಶ ಹಬ್ಬದ ಅಂಗವಾಗಿ ಕರೆದ ಶಾಂತಿ ಸಭೆ ಉದ್ದೇಶಿಸಿ ಸಿಪಿಐ ಶ್ರೀಶೈಲ ಕೌಜಲಗಿ ಮಾತನಾಡಿದರು. ತಹಸೀಲ್ದಾರ ಬಸವರಾಜ ಹೊಂಕಣದವರ ಇದ್ದಾರೆ.

ಕಲಘಟಗಿ: ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಮಯದಲ್ಲಿ ಅಹಿತರ ಘಟನೆಗೆ ಅವಕಾಶ ನೀಡದೇ ಶಾಂತಿ ಸುವವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಬ್ಬ ಸಂಭ್ರಮದಿಂದ ಆಚರಣೆ ಮಾಡಬೇಕು ಎಂದು ಸಿಪಿಐ ಶ್ರೀಶೈಲ ಕೌಜಲಗಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಗಣೇಶ ಹಬ್ಬದ ಅಂಗವಾಗಿ ಕರೆದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು.
ಗಣೇಶ ಹಬ್ಬ ಮನರಂಜನೆಗೆ ಸೀಮಿತಗೊಳ್ಳಿಸದೆ ನಮ್ಮ ದೇಶದ ಸಂಸ್ಕೃತಿ,ಪರಂಪರೆ ಬಿಂಬಿಸುವ ಭಕ್ತಿಯ ಪ್ರತೀಕವಾಗಬೇಕು.ಗಣೇಶ ಉತ್ಸವ ಸಮಿತಿಯವರು ಡಿಜೆಗೆ ಹೆಚ್ಚಿನ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಗ್ರಾಮೀಣ ಭಾಗದ ಡೊಳ್ಳು,ಹಲಗೆ, ಭಜನೆ, ಕೋಲಾಟದ ಹಾಗೂ ಜಾನಪದ ಕಲಾವಿದರ ಕರೆಯಿಸಿ ಮೆರವಣಿಗೆ ನಡೆಸುವಂತೆ ಸಲಹೆ ನೀಡಿದರು.
ಗಣೇಶ ವಿಸರ್ಜನೆ ಮಾಡುವಾಗ ಸಾರ್ವಜನಿಕರಿಗೆ ತೊಂದರೆ, ಅತಿಯಾದ ಶಬ್ದ ಮಾಲಿನ್ಯ ಉಂಟಾಗದಂತೆ ಪೊಲೀಸ್ ಇಲಾಖೆ ತಿಳಿಸಿದ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದರು.
ತಾಲ್ಲೂಕ ತಹಸೀಲ್ದಾರ ಬಸವರಾಜ ಹೊಂಕಣದವರ ಮಾತನಾಡಿ ಗಣೇಶ ಹಬ್ಬ ಸಮಿತಿಯವರಿಗೆ ಸೀಮಿತವಾಗದೆ ಪಟ್ಟಣ ಹಾಗೂ ಆಯಾ ಗ್ರಾಮದ ಹಿರಿಯರ ಸಲಹೆ ತೆಗೆದುಕೊಂಡು ಸಂಭ್ರಮದಿಂದ ಆಚರಿಸಲು ತಿಳಿಸಿದರು.
ವೃಷಬೇದ್ರ ಪಟ್ಟಣಶೆಟ್ಟಿ, ಮಂಗಲಪ್ಪ ಲಮಾಣಿ, ಆರ.ಎಸ್ ಚಿಕ್ಕಮಠ ಹಾಗೂ ವಿವಿಧ ಗ್ರಾಮಗಳ ಗಜಾನನ ಮಂಡಳಿಯ ಅಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.
📲Get App