🔥 TRENDING India, Canada Reach Fifth Negotiation... Sanjay Gupta Questions Smoking in Film... Nor'easter Hits US Northeast, Floods H... October 2026: Rare Planetary Conjuncti... Singh Ji: Life Dedicated to Humanity,... Trump Offers US Weapon Sales to China’...
28 Sep 2026•
ગુજરાતી मराठी ਪੰਜਾਬੀ বাংলা
ಅಪಾಯಕಾರಿ ವಿದ್ಯುತ್ ಕಂಬ ತರುವೆ ಇಲ್ಲ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಅಪಾಯಕಾರಿ ವಿದ್ಯುತ್ ಕಂಬ ತರುವೆ ಇಲ್ಲ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

✍️ Reporter: MAHAMAD WALI QURESHI 🗓 08 Sep 2026, 04:46 PM 👁 51
Watch on: ▶️ YouTube
Share: 💬 WhatsApp 📘 Facebook 𝕏 Post
ಅಪಾಯಕಾರಿ ವಿದ್ಯುತ್ ಕಂಬ ತೆರವು ಇಲ್ಲ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ನೀಡ್ 24 ನ್ಯೂಸ್

ರಾಯಚೂರು, ಸೆ.08-

ನಗರದ ಮಂಗಳವಾರಪೇಟೆ ಪ್ರದೇಶದಲ್ಲಿರುವ ಹಳೆಯ ಹಾಗೂ ಅಪಾಯಕಾರಿ ಕಬ್ಬಿಣದ ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಹೊಸ ಕಂಬ ಅಳವಡಿಸುವ ಕಾಮಗಾರಿ ಯನ್ನು ವಿಳಂಬ ಮಾಡುತ್ತಿರುವ ಜೆಸ್ಕಾಂನ ಸಂಬಂಧಪಟ್ಟ ಕಿರಿಯ ಅಭಿಯಂತರರ ವಿರುದ್ದ ಶಿಸ್ತು ಕ್ರಮ

ಕೈಗೊಳ್ಳಬೇಕು ಎಂದು ಎಐಎಂ ಐಎಂ ರಾಯಚೂರು ನಗರ ಅಧ್ಯಕ್ಷ ಶಬ್ಬಿರ್ ಅಹ್ಮದ್ ಹೌದಡಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿರುವ ಹಳೆಯ ವಿದ್ಯುತ್ ಕಂಬವನ್ನು ತೆರ ವುಗೊಳಿಸಿ ಹೊಸ ಕಂಬ ಅಳವಡಿ ಸುವಂತೆ ಜುಲೈ 20ರಂದು ಹಾಗೂ

7ರಂದು ಮನವಿ ಆಗಸ್ಟ್ ಸಲ್ಲಿಸಲಾಗಿದೆ. ಆದರೂ ಇದುವರೆಗೆ ಕಾಮಗಾರಿ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸರಳವಾದ ಸಾರ್ವಜನಿಕ ಸುರಕ್ಷತಾ ಕಾಮಗಾರಿಯೊಂದನ್ನು 47 ದಿನಗಳಿಗೂ ಹೆಚ್ಚು ಕಾಲ ವಿಳಂಬ ಮಾಡಿರುವುದು ಜೆಸ್ಕಾಂ ಅಧಿಕಾರಿಗಳ ಕರ್ತವ್ಯಲೋಪಕಂಬ ತೆರವು ಇಲ್ಲ: ಜೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮತ್ತು ನಿರ್ಲಕ್ಷ್ಯವನ್ನು ತೋರಿಸುತ್ತದೆ. ವಿದ್ಯುತ್ ಕಂಬದ ಸ್ಥಿತಿ ಮತ್ತಷ್ಟು ಹದಗೆಟ್ಟರೆ ಯಾವುದೇ ಅವಘಡ ಸಂಭವಿಸಿದರೂ ಅದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.

ಸಂಬಂಧಪಟ್ಟ ಕಿರಿಯ ಅಭಿಯಂತರರ ವಿರುದ್ಧ ನಿಷ್ಪಕ್ಷಪಾತ ಇಲಾಖಾ ವಿಚಾರಣೆ ನಡೆಸಿ, ಕರ್ತವ್ಯಲೋಪ ಸಾಬೀತಾದಲ್ಲಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ ಮಂಗಳವಾರಪೇಟೆಯ ಅಪಾಯಕಾರಿ ಹಳೆಯ ವಿದ್ಯುತ್ ಕಂಬವನ್ನು ತಕ್ಷಣ ತೆರವುಗೊಳಿಸಿ, ಹೊಸ ಕಂಬ ಅಳವಡಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶಹಬಾಜ್ ಅಹ್ಮದ್, ತನ್ವಿರ್ ಅಹ್ಮದ್, ಖಾಜಾ ಮೊಯಿನುದ್ದಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.. ವರದಿ ವಲಿ ಖುರೇಷಿ ದೇವದುರ್ಗ
📲Get App