🔥 TRENDING Ambala Construction Site Collapse Leav... Kharif Acreage Surpasses Five‑Year Ave... Rumor of Student Rape Sparks Protests... 3-Day Bank Strike Called Off After Lat... India’s Diplomatic Dilemma: Navigating... Pakistan reaches Asian Games cricket s...
28 Sep 2026•
ગુજરાતી मराठी ਪੰਜਾਬੀ বাংলা
ಕಟ್ಟಡ ಕಾರ್ಮಿಕರ ಅಪಘಾತ ಪರಿಹಾರ ಮಂಜೂರು ಕರುನಾಡ ಸಂಘದ ಪ್ರಯತ್ನಕ್ಕೆ ಜಯ

ಕಟ್ಟಡ ಕಾರ್ಮಿಕರ ಅಪಘಾತ ಪರಿಹಾರ ಮಂಜೂರು ಕರುನಾಡ ಸಂಘದ ಪ್ರಯತ್ನಕ್ಕೆ ಜಯ

✍️ Reporter: MAHAMAD WALI QURESHI 🗓 08 Sep 2026, 07:54 PM 👁 49
Watch on: ▶️ YouTube
Share: 💬 WhatsApp 📘 Facebook 𝕏 Post
*ಕಟ್ಟಡ ಕಾರ್ಮಿಕರಿಗೆ ಅಪಘಾತ ಪರಿಹಾರ ಮಂಜೂರು - ಕರುನಾಡು ಸಂಘದ ಪ್ರಯತ್ನಕ್ಕೆ ಜಯ*
ನೀಡ್ 24 ನ್ಯೂಸ್ ದೇವದುರ್ಗ: ಸೆ 8
ಮೇಸಾನ್ ಕಾರ್ಮಿಕರಾದ *ದಿ. ರಂಜಾನ್ ಬಿನ್ ಚಂದ್ ಸಾಬ್, ಅರಶಿಣಿಗಿ* ರವರು ದಿನಾಂಕ *22-12-2025* ರಂದು ನಗರಗುಂಡ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಪರಿಹಾರಕ್ಕಾಗಿ *ಕರುನಾಡು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ (ರಿ), ದೇವದುರ್ಗ* ವತಿಯಿಂದ ದಿನಾಂಕ *06-03-2026* ರಂದು ಕಾರ್ಮಿಕ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು.

ಸಂಘದ ಮನವಿಗೆ ಸ್ಪಂದಿಸಿದ ಕಾರ್ಮಿಕ ಇಲಾಖೆಯು ಈ ಕೆಳಗಿನ ಪರಿಹಾರವನ್ನು ಮಂಜೂರು ಮಾಡಿದೆ:

*1. ಮರಣ ಮತ್ತು ಅಂತ್ಯಕ್ರಿಯೆ ವೆಚ್ಚ: ರೂ. 1,50,000/-*
*2. ಅಪಘಾತ ಪರಿಹಾರ: ರೂ. 2,50,000/-*
*ಒಟ್ಟು: ರೂ. 4,00,000/-* ನಗದು ನಾಮನಿರ್ದೇಶಿತರಾದ *ಶ್ರೀಮತಿ ಫಾತಿಮಾ* ರವರ ಬ್ಯಾಂಕ್ ಖಾತೆಗೆ ಜಮೆಯಾಗಿದೆ.

ಇದಲ್ಲದೆ *ರೂ. 2,50,000/-* ಮೊತ್ತದ ಠೇವಣಿ ಬಾಂಡ್ ಅನ್ನು *ಸಹಾಯಕ ಕಾರ್ಮಿಕ ಆಯುಕ್ತರು, ಕಲಬುರಗಿ* ವಿಭಾಗದವರು ಮಂಜೂರು ಮಾಡಿರುತ್ತಾರೆ.

ಈ ಆದೇಶ ಪತ್ರವನ್ನು ನಾಮನಿರ್ದೇಶಿತರಿಗೆ ವಿತರಿಸುವ ಸಂದರ್ಭದಲ್ಲಿ ಸಂಘದ *ಅಧ್ಯಕ್ಷರಾದ ಶ್ರೀ ಉಸ್ಮಾನ್ ಪಾಷ ಗೌರಂಪೇಟೆ, ಉಪಾಧ್ಯಕ್ಷರಾದ ಶ್ರೀ ಶೇಕ್ ಅಲಿ ಇಡೂಪನೂರ್, ಕಾರ್ಯದರ್ಶಿ ಶ್ರೀ ಕಾಸಿಂ ಅಲಿ ಉಜನೇರಿ, ಸದಸ್ಯರಾದ ಶ್ರೀ ಖಾಸಿಂ ಸೌದೆಗಾರ್, ಶ್ರೀ ಸುರೇಶ್ ಪಾಟೀಲ್, ಶ್ರೀ ಮುತ್ತಪ್ಪ ಗೋಪಾಳಾಪುರ ಹಾಗೂ ಮೃತರ ಸಹೋದರ ಶ್ರೀ ಬುಡನ್ ಸಾಬ್* ಉಪಸ್ಥಿತರಿದ್ದರು.ವರದಿ ವಲಿ ಖುರೇಷಿ
📲Get App