🔥 TRENDING સેવા સેતુ બીજા તબક્કા નું કાર્યક્રમ ಶ್ರಾವಣ ಮಾಸದ ಭಜನಾ ಮುಕ್ತಾಯ ಕಾರ್ಯಕ್ರಮ ದೇವ... 40 கி.மீ காரின் மேற்கூரையில் பயணித்து... एआईएमआईएम के हसनपुर विधानसभा चुनाव की... Two dead after speeding Range Rover hi... 18‑Year‑Old Rehan Mansuri Joins Gujara...
28 Sep 2026•
ગુજરાતી मराठी ਪੰਜਾਬੀ বাংলা
ಬರಗಾಲ ಪ್ರದೇಶ ಅಂತಾ ಘೋಷಣೆ ಮಾಡದಿದ್ದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ: ಛಬ್ಬಿ

ಬರಗಾಲ ಪ್ರದೇಶ ಅಂತಾ ಘೋಷಣೆ ಮಾಡದಿದ್ದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ: ಛಬ್ಬಿ

✍️ Reporter: KALLAPPA MIRJI 🗓 07 Sep 2026, 08:12 PM 👁 54
Watch on: ▶️ YouTube
Share: 💬 WhatsApp 📘 Facebook 𝕏 Post

ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದರು.

ಕಲಘಟಗಿ: ರಾಜ್ಯ ಸರ್ಕಾರದ ಬರಪೀಡಿತ ಪಟ್ಟಿಯಲ್ಲಿ ಕಲಘಟಗಿ-ಅಳ್ಳಾವರ ಮತ ಕ್ಷೇತ್ರ ಕೈಬಿಟ್ಟಿದ್ದು ಕೂಡಲೇ ಬರಗಾಲ ಪ್ರದೇಶ ಅಂತಾ ಘೋಷಣೆ ಮಾಡಬೇಕು ಇಲ್ಲದಿದ್ದರೆ ರೈತರೊಂದಿಗೆ ಬೀದಿಗಿಳಿದು ಬಿಜೆಪಿ ಪಕ್ಷದಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಆಗ್ರಹಿಸಿದರು.
ಕಲಘಟಗಿ ತಾಲ್ಲೂಕಿನ ದಾಸ್ತಿಕೊಪ್ಪದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ ಮಳೆ ಕಡಿಮೆಯಾಗಿ ಮೆಕ್ಕೆಜೋಳ, ಸೋಯಾಬಿನ್, ಕಬ್ಬು ಹಾಗೂ ಇತರೆ ಬೆಳೆಗಳು ಹಸಿರು ಕಂಡರೂ ಬೆಳೆಗಳು ಕುಂಟಿವಾಗಿ ಸರಿಯಾಗಿ ಪಸಲು ಬಾರದೇ ಸಂಕಷ್ಟಕ್ಕೆ ರೈತ ವರ್ಗ ಸಿಲುಕಿದೆ.
ಕಲಘಟಗಿ ಕ್ಷೇತ್ರ ಪ್ರತಿನಿದಿಸುವ ಪ್ರಭಾವಿ ಸಚಿವರು ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ.ಇಲ್ಲಿಯವರೆಗೆ ತಾಲ್ಲೂಕಿನ ರೈತರ ಕುಂದುಕೊರತೆ ಸಭೆ ಕರೆದಿಲ್ಲ. ರೈತರ ಬೆಳೆಗಳ ವೀಕ್ಷಣೆ ಮಾಡುವಷ್ಟು ಸಮಯ ಅವರಿಗೆ ಇಲ್ಲವಾಗಿದೆ ಎಂದು
ಆಕ್ರೋಶ ಹೊರಹಾಕಿದರು.
ಮಂತ್ರಿಗಿರಿಗೆ ಲಾಬಿ ನಡೆಸಿ ಈಗ ಕ್ಷೇತ್ರಕ್ಕೆ ಭೇಟಿ ನೀಡಿ ಶೋಕಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಲಘಟಗಿ ಜನರು ಅವರಿಗೆ ಮೂರು ಬಾರಿ ಅಧಿಕಾರ ಕೊಟ್ಟಿದ್ದಾರೆ.
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಕಾಲೇಜುಗಳಿಲ್ಲ,ಸಕ್ಕರೆ ಕಾರ್ಖಾನೆ ಹಾಕುವದಾಗಿ ರೈತರ ಕಡೆಯಿಂದ ಕಡಿಮೆ ಹಣಕ್ಕೆ ಭೂಮಿ ಖರೀದಿಸಿದ್ದು ನೆನೆಗುದಿಗೆ ಬಿದ್ದಿದೆ, ತಾಲ್ಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಚ್ಚಿದರೆ ರೈತರಿಗೆ ಔಷದಿ ಕೂಡ ಸಿಗದಂತಾ ಪರಿಸ್ಥಿತಿ ತಮ್ಮ ತಾಲ್ಲೂಕಿನದಾಗಿದೆ ಎಂದು ಬೇಸರ ಹೊರಹಾಕಿದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿ ತಾಲ್ಲೂಕ ಮಳೆ ಕೊರತೆಯಿಂದ ಕೆರೆ ಕಟ್ಟೆಗಳು ನೀರಿಲ್ಲದೆ ಖಾಲಿಯಾಗಿವೆ, ರೈತರ ಬೆಳೆಗಳು ಸರಿಯಾಗಿ ಕಾಳು ಕಟ್ಟದೆ ಸಚಿವರ ಕ್ಷೇತ್ರವೇ ಬರ ಎದುರಿಸುತ್ತಿದ್ದರು ರೈತರ ಕಡೆ ಗಮನ ಹರಿಸುತ್ತಿಲ್ಲ ಎಂದರು.
ಬಿಜೆಪಿ ತಾಲ್ಲೂಕ ಘಟಕದ ಅಧ್ಯಕ್ಷ ಯಲ್ಲಾರಿ ಶಿಂದೇ, ಮುಖಂಡರಾದ ಐ. ಸಿ ಗೋಕುಲ, ಮಹಾತೇಶ ತಹಸೀಲ್ದಾರ, ಬಸವರಾಜ ಶೇರೆವಾಡ, ಕಿರಣಪಾಟೀಲ್ ಕುಲಕರ್ಣಿ, ಅರ್ಜುನ ಲಮಾಣಿ, ಆನಂದ ಕಡ್ಲಾಸ್ಕರ, ಬಸವರಾಜ ಹೊನ್ನಳಿ, ರಾಘವೇಂದ್ರ ಅಳ್ಳಾವರ,ಪುಂಡಲೀಕ ಜಾಧವ ಇದ್ದರು.
📲Get App