"ಪದವೀಧರರ ಬೆಂಬಲದಿಂದ ಶಿಕ್ಷಣ ಕ್ಷೇತ್ರದ ಸೇವೆಗೆ ಅವಕಾಶ ನೀಡಿ: ಕೆ.ಎಂ. ಸುರೇಶ್”
Watch on:
📘 Facebook
ಶಿಕ್ಷಣ ಕ್ಷೇತ್ರದ ಸೇವೆಗೆ ಅವಕಾಶ ನೀಡಿ: ಕೆ.ಎಂ. ಸುರೇಶ್
ಹಿರಿಯೂರು: ಭಾರತೀಯ ಜನತಾ ಪಕ್ಷದ ಹಿರಿಯೂರು ಮಂಡಲದ ವತಿಯಿಂದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪೂರ್ವಸಿದ್ಧತಾ ಸಭೆ ನಗರದ ರೋಟರಿ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕಾಯಕ ಹಾಗೂ ಸೇವೆಯನ್ನು ಮೀಸಲಿಟ್ಟಿದ್ದು, ಪದವೀಧರರು ತಮ್ಮನ್ನು ಬೆಂಬಲಿಸುವ ಮೂಲಕ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಶಿವಯೋಗಿ ಸ್ವಾಮಿ ಹಾಗೂ ಚುನಾವಣಾ ರಾಜ್ಯ ಸಂಚಾಲಕ ಕೇಶವ ಪ್ರಸಾದ್ ಜಿ. ಅವರು ಚುನಾವಣಾ ಸಿದ್ಧತೆ, ಸಂಘಟನೆ ಹಾಗೂ ಕಾರ್ಯತಂತ್ರಗಳ ಕುರಿತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಚುನಾವಣಾ ಸಂಯೋಜಕ ಕಾಂತರಾಜ್, ಮಂಡಲ ಅಧ್ಯಕ್ಷ ಅಭಿನಂದನ್, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಆರ್. ಯೋಗೇಶ್ ಹಾಗೂ ನಿತಿನ್, ಜಿಲ್ಲಾ ಉಪಾಧ್ಯಕ್ಷ ದ್ಯಾಮಣ್ಣ, ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ರಾಜಣ್ಣ, ಕೋರ್ ಕಮಿಟಿ ಸದಸ್ಯ ಲಕ್ಷ್ಮಿಕಾಂತ್ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪದವೀಧರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.