🔥 TRENDING Shubman Gill and Virat Kohli each hit... India Clinches 8‑Wicket Victory Over W... Raghubir Yadav Says ‘Panchayat’ Film M... Parineeti Chopra Opens Up About Mom Gu... Sushant Singh Rajput's Sister Claims S... Journalist Faye D’Souza Urges Accuracy...
28 Sep 2026•
ગુજરાતી मराठी ਪੰਜਾਬੀ বাংলা
ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಮಲ್ಲಸಂದ್ರದಲ್ಲಿ ಆರಂಭ
Local

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಮಲ್ಲಸಂದ್ರದಲ್ಲಿ ಆರಂಭ

✍️ Reporter: GIRISHA B 🗓 03 Sep 2026, 09:22 PM 👁 51
Share: 💬 WhatsApp 📘 Facebook 𝕏 Post

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಮಲ್ಲಸಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ 350 ಸಸಿಗಳನ್ನು ನಾಟಿ ಮಾಡಿರುವ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿದೆ.

ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ತಿಮ್ಮನಾಯಕ್ ರವರು ಮಲ್ಲಸಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಾಯದಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದ ಉದ್ದೇಶ ಪಶುಪಕ್ಷಿಗಳ ಸಂಕುಲಕ್ಕೆ ಆಹಾರ, ಸೂರಿನ ವ್ಯವಸ್ಥೆ ಹಾಗೂ ಪರಿಶುದ್ದ ಪ್ರಾಣವಾಯುವನ್ನು ಒದಗಿಸುವುದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದು, ಪರಿಸರ ಸಂರಕ್ಷಣೆಗೆ ಮತ್ತು ಕೃಷಿ ಉಳಿವಿಗೆ ರೈತಕ್ಷೇತ್ರ ಪಾಠಶಾಲೆ, ಪರಿಸರ ಜಾಗೃತಿ ಕಾರ್ಯಕ್ರಮ, ವಿಶೇಷ ಕೃಷಿ ಅಧ್ಯಯನ ಪ್ರವಾಸ, ಕೆರೆ ಪುನಶ್ಚೇತನ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಸಾಮಾಜಿಕ ಅರಣ್ಯೀಕರಣದ ಭಾಗವಾಗಿ ಡೈರಿ ಆವರಣದಲ್ಲಿ 350 ಸಸಿಗಳನ್ನು ನಾಟಿ ಮಾಡಲಾಗಿದ್ದು, ಅವುಗಳ ಸಮಗ್ರ ನಿರ್ವಹಣೆಗೆ ಸೂಕ್ತ ಸಹಕಾರವನ್ನು ಒದಗಿಸುವುದಾಗಿ ಒಪ್ಪಿಗೆ ಸೂಚಿಸಲಾಯಿತು.

ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಹಣಕಾಸು ವ್ಯವಸ್ಥಾಪಕ ಶ್ರೀ ವೆಂಕಟೇಶ್, ಯೋಜನಾಧಿಕಾರಿ ಸಂದೇಶ್ ಪಿ ಬಿ, ಪತ್ರಿಕೆ ವರದಿಗಾರ ಶ್ರೀ ರಂಗನಾಥ್ ಮರಡಿ, ಸಹಕಾರಿ ಸಂಘದ ಅಧಿಕಾರಿಗಳು ಎಂ. ರಾಜು, ವಿದ್ಯಾನಂದ್, ತಿಪ್ಪೇಸ್ವಾಮಿ, ಸುರೇಶ್, ಕೆಂಪೇಗೌಡ, ಕೃಷಿ ಅಧಿಕಾರಿ ರಾಘವೇಂದ್ರ ಏನ್, ಸೇವಾಪ್ರತಿನಿಧಿಗಳು ಪುಷ್ಪಲತಾ, ಮಂಜುಳಾ, ಭಾಗ್ಯಮ್ಮ, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
📲Get App