🔥 TRENDING Virender Sehwag's Hilarious Reaction t... Scripted Video Circulates as Real Hara... Secret Spot Goes Viral, Crowds Overwhe... Seoul Blames Kyiv for Breach of Secrec... The Tribune Records Search for 'jijith... The Tribune publishes profile of Dr Sh...
28 Sep 2026•
ગુજરાતી मराठी ਪੰਜਾਬੀ বাংলা
ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಫಲಾನುಭವಿಗಳಿಗೆ ಸಾಲದ ಚೆಕ್‌ಗಳನ್ನು  ಶಾಸಕ ವಿಶ್ವಾಸ ವೈದ್ಯ ವಿತರಿಸಿದರು.

ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಫಲಾನುಭವಿಗಳಿಗೆ ಸಾಲದ ಚೆಕ್‌ಗಳನ್ನು ಶಾಸಕ ವಿಶ್ವಾಸ ವೈದ್ಯ ವಿತರಿಸಿದರು.

✍️ Reporter: Ravi Papugouda Annigeri 🗓 03 Sep 2026, 06:52 AM 👁 77
Share: 💬 WhatsApp 📘 Facebook 𝕏 Post
ಯರಗಟ್ಟಿ : ಕೃಷಿ ಚಟುವಟಿಕೆಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವುದು ರೈತರ ಅಭಿವೃದ್ಧಿಗೆ ಪೂರಕವಾಗಿದೆ. ಸಹಕಾರಿ ಸಂಘಗಳು ನೀಡುವ ಈ ನೆರವು ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲಿ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಫಲಾನುಭವಿಗಳಿಗೆ ಒಟ್ಟು ೨.೩೦ ಕೋಟಿ ರೂ.ಗಳ ಸಾಲದ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ರೈತರಿಂದ ರೈತರಿಗಾಗಿಯೇ ಇರುವ ಸಹಕಾರ ಸಂಘವೇ ಹೊರತು ಲಾಭ ಮಾಡುವ ಉದ್ದೇಶದಲ್ಲಿ ಸ್ಥಾಪಿತವಾದದ್ದಲ್ಲ. ಜಮೀನಿನ ಸೂಕ್ತ ದಾಖಲೆ ಒದಗಿಸುವ ಫಲಾನುಭವಿ ೫೨೫ ರೈತರಿಗೆ ಶೇ.೦ರ ಬಡ್ಡಿದರಲ್ಲಿ ಸಾಲ ನೀಡಲಾಗವುದು. ಕ್ಷೇತ್ರದ ಅನ್ನದಾತರ ಪರವಾಗಿ ನಮ್ಮ ಸರ್ಕಾರ ಮತ್ತು ನಾನು ಸದಾ ಇರುತ್ತೇವೆ. ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ರೈತರು ಕೃಷಿಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್ ಡಿಜಿಎಂ ಎಸ್.ಬಿ.ಬಾಗೇವಾಡಿ ಮಾತನಾಡಿ, ೨.೭೦ ಕೋಟಿ ಪತ್ತನ್ನು ೫ ಕೋಟಿಗೆ ಹೆಚ್ಚಿಸಲಾಗಿದೆ ಸದ್ಯ ಬಿಡಿಸಿಸಿ ಬ್ಯಾಂಕ್ ೧೦ ಸಾವಿರ ಕೋಟಿ ಭಂಡವಾಹೊAದಿದೆ ಹಾಗೂ ರೈತರಿಗಾಗಿ ಶ್ಯೂನ್ ಬಡ್ಡಿದರದಲ್ಲಿ ೪ ಸಾವಿರ ಕೋಟಿ ಸಾಲ ನೀಡುವ ಗುರಿ ಹೊಂದಲಾಗಿದೆ. ಮತ್ತು ಟ್ಟಾö್ಯಕ್ಟರ್, ಹನಿ ನೀರಾವರಿ, ಉದ್ಯಮ ಸಾಲಸೌಲಭ್ಯ ಕಲ್ಪಿಸಲಾಗಿದೆ ಹಾಗೂ ೧೨% ಬಡ್ಡಿದಲ್ಲಿ ಪ್ರತಿ ಎಕರೆಗೆ ೧ ಲಕ್ಷ ಸಾಲ ನೀಡಲಾಗುವುದು ಎಂದು ಹೇಳಿದರು.

ಸಾನಿಧ್ಯ ಗುರುಲಿಂಗಯ್ಯ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಪ್ರಜ್ವಲ ಬಿರಾದಾರಗೌಡರ ಅಧ್ಯಕ್ಷತೆ ವಹಿಸಿದ್ದರು, ಬಿಡಿಸಿಸಿ ಬ್ಯಾಂಕ್ ತಾಲೂಕಾ ನಿಯಂತ್ರಣಾಧಿಕಾರಿ ಎಸ್.ಆಯ್.ಮಾದರ, ಬಿಡಿಸಿಸಿ ಬ್ಯಾಂಕ್ ನಿರೀಕ್ಷಕ ಡಿ.ಎಸ್.ಅಗಸಿಮನಿ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ತುಪ್ಪದ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ವೆಂಕಣ್ಣಾ ಕಳ್ಳಿಗುದ್ದಿ ಪಿಕೆಪಿಎಸ್ ಉಪಾಧ್ಯಕ್ಷ ರಾಮಚಂದ್ರ ಭಜಂತ್ರಿ, ಮಹಾಂತೇಶ ಕೊಟ್ರಶೆಟ್ಟಿ, ಮಹದೇವಪ್ಪ ಹುರಕಡ್ಲಿ, ಫಕೀರಪ್ಪ ಮಾಡಣ್ಣವರ, ಸಿದ್ದಪ್ಪ ಅರಿಬೆಂಚಿ, ನಿಂಗಪ್ಪ ಗಲಗಲಿ, ಮಹಾಂತೇಶ ಚೀಲಕಂಡಿ, ಸತೀಶ ಕುರಬಗಟ್ಟಿ, ಯಲ್ಲಪ್ಪ ಬಡೆನ್ನವರ, ಸಿದ್ದಪ್ಪ ಕೊಡ್ಲಿವಾಡ, ಜಿ.ಎಸ್.ಕಮತಗೌಡರ, ಶಂಕರ ಹಾಲ್ಯಾಳ, ಗಣಪತಿ ಆರೆರ ಸೇರಿದಂತೆ ಅನೇಕರು ಇದ್ದರು.

೦೨ ಸತ್ತಿಗೇರಿ ೦೨

ಪೋಟೊ ಶೀರ್ಷಿಕೆ TV

ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆವರಣದಲ್ಲಿ ಫಲಾನುಭವಿಗಳಿಗೆ ಸಾಲದ ಚೆಕ್‌ಗಳನ್ನು ವಿತರಿಸಿದರು.
📲Get App