🔥 TRENDING लातेहार के पिंडारकोम गांव में हाथियों... વલસાડમાં કોંગ્રેસનો SIR અને વોટ ચોરી મ... उज्जैन पुलिस अधीक्षक ने घोड़े पर सवार... ગુજરાત સંસ્કૃતિ વકૃત્વ સ્પર્ધા Woman Abandons LSR Dream Amid Parental... Uttar Pradesh Attracts New Distillery...
28 Sep 2026•
ગુજરાતી मराठी ਪੰਜਾਬੀ বাংলা
ದತ್ತಿ ಉಪನ್ಯಾಸ ಹಾಗೂ ವಚನ ಶ್ರಾವಣ ಕಾರ್ಯಕ್ರಮ

ದತ್ತಿ ಉಪನ್ಯಾಸ ಹಾಗೂ ವಚನ ಶ್ರಾವಣ ಕಾರ್ಯಕ್ರಮ

✍️ Reporter: KALLAPPA MIRJI 🗓 03 Sep 2026, 09:47 AM 👁 49
Share: 💬 WhatsApp 📘 Facebook 𝕏 Post

ಕಲಘಟಗಿ:ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಅನುಭವ ಮಂಟಪದಲ್ಲಿ ತಾಲ್ಲೂಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು,ಗ್ರಾಮದ ಶರಣರ ಬಳಗದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಹಾಗೂ ವಚನ ಶ್ರಾವಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಲಘಟಗಿ:ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಅನುಭವ ಮಂಟಪದಲ್ಲಿ ತಾಲ್ಲೂಕ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು,ಗ್ರಾಮದ ಶರಣರ ಬಳಗದ ಆಶ್ರಯದಲ್ಲಿ ದತ್ತಿ ಉಪನ್ಯಾಸ ಹಾಗೂ ವಚನ ಶ್ರಾವಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಸವ ದರ್ಶನದ ಉಪನ್ಯಾಸಕರಾಗಿ ಶರಣರಾದ ರಾಮಣ್ಣ ಕೋಟಿ ಮಾತನಾಡಿ 12ನೇ ಶತಮಾನದ ಬಸವಾದಿ ಶರಣರು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಧರ್ಮ ಬಸವ ಧರ್ಮ, ಎಲ್ಲಾ ಕಾಯಕ ವರ್ಗದವರು ಸೇರಿಕೊಂಡು ಜಾತಿ, ವರ್ಣ ವರ್ಗ ವ್ಯವಸ್ಥೆಯನ್ನು ಕಿತ್ತುಹಾಕಿ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ ಎಂದರು.
ಅನುಭವ ಮಂಟಪದ ಶರಣರ ಬಳಗದಿಂದ ಪ್ರಮುಖರಿಗೆ ಬಸವೇಶ್ವರ ಭಾವಚಿತ್ರ ನೀಡಿ ಸನ್ಮಾನಿಸಿದರು.
ಶರಣ ಸಾಹಿತ್ಯ ಪರಿಷತ್ತ ತಾಲ್ಲೂಕ ಅಧ್ಯಕ್ಷ ಗುರುಲಿಂಗಪ್ಪ ಉಣಕಲ್ಲ ಮಾತನಾಡಿ ಲಿಂಗೈಕ್ಯ ಶರಣೆ ನೀಲಾಂಬಿಕ ಶಿವರಾಯಪ್ಪ ಶೀಲವಂತರ ಹಾಗೂ ಲಿಂಗೈಕ್ಯ ಪರಮಾನಂದ ಒಡೆಯರ ಕುಟುಂಬದರಾದ ಅಶೋಕ ಶೀಲವಂತರ ಮತ್ತು ರಾಜು ಶೀಲವಂತರ ಹಾಗೂ ಮಲ್ಲಿಕಾರ್ಜುನ ಒಡೆಯರ ಕುಟುಂಬ ವರ್ಗದಿಂದ ದತ್ತಿ ದಾನಿಗಳ ನೀಡಿದ ಕೊಡುಗೆ ಬಸವಾದಿ ಶರಣರ ಸಂದೇಶಕ್ಕೆ ಅನುಗುಣವಾಗಿವೆ ಎಂದರು.
ಶರಣೆ ಸುಜಾತಾ ನಾಯ್ಡು,ಗಣೇಶ ನಾಯ್ಡು ಕಾರ್ಯಕ್ರಮ ಉದ್ಘಾಟಿಸಿದರು.ಜಾನಪದ ತಜ್ಞ ರಾಮು ಮೂಲಗಿ ಜಾನಪದ ಹಾಡುಗಳ ಮುಖೇನ ಬಸವಣ್ಣನವರ ದರ್ಶನ ಮಾಡಿಸಿದರು ,
ಅಧ್ಯಕ್ಷತೆ ಶರಣ ಶಿವಲಿಂಗಪ್ಪ ಜೋಡಳ್ಳಿ ವಹಿಸಿದ್ದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ ಮುರಳ್ಳಿ,ನೀಲಪ್ಪ ಮುತ್ತಗಿ, ಬಸವರಾಜ ಮಾದಿ,ಪ್ರಭುಲಿಂಗ ರಂಗಾಪುರ,ಶಂಕರಲಿಂಗ ಹೊಸಮನಿ,ಶಂಕರ ದಾಸನಕೊಪ್ಪ,ಶಿವರುದ್ರಪ್ಪ ದನಿಗೊಂಡ ಇದ್ದರು.
📲Get App