🔥 ट्रेंडिंग जस्टवॉच ने उजागर किया पाँच आश्चर्यजनक... सर्पत्ता परम्परा 2 की शूटिंग शुरू, आर्... आईटी ने राकुल प्रीत सिंह, वशु भांगनानी... निटि आयोग ने उत्तर-पूर्व की स्वदेशी ज्... मणिपुर के सामान्य रसोई जड़ी‑बूटी से मि... त्रिपुरा के मुख्यमंत्री ने पूर्व मुख्य...
28 सित. 2026•
ગુજરાતી मराठी ਪੰਜਾਬੀ বাংলা
ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ, ಬೆಳೆಗಳ ನಾಶ  ರೈತರ ಆಕ್ರೋಶ

ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ, ಬೆಳೆಗಳ ನಾಶ ರೈತರ ಆಕ್ರೋಶ

✍️ रिपोर्टर: KALLAPPA MIRJI 🗓 02 सित. 2026, 09:48 AM 👁 137
शेयर करें: 💬 WhatsApp 📘 Facebook 𝕏 Post

ತಾಲ್ಲೂಕಿನ ಆಸ್ತಕಟ್ಟಿ,ತಬಕದಹೊನ್ನಳ್ಳಿ,ಪರಸಾಪುರ, ಸೋಲಾರಗೊಪ್ಪ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಂದಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು ಅವುಗಳ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕಲಘಟಗಿ: ಗ್ರಾಮೀಣ ಭಾಗದಲ್ಲಿ ಹಂದಿಗಳ ಕಾಟ ಹೆಚ್ಚುತ್ತಿದ್ದೂ ರೈತರ ಬೆಳೆಗಳ ನಾಶ ಹಾಗೂ ಗ್ರಾಮದ ಮನೆ ಸುತ್ತ ಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಕಂಟಕ್ಕೆ ತಂದೊಡ್ದುತ್ತಿವೆ ಎಂದು ಹಂದಿಗಳ ಮಾಲಕರ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ.
ತಾಲ್ಲೂಕಿನ ಆಸ್ತಕಟ್ಟಿ,ತಬಕದಹೊನ್ನಳ್ಳಿ,ಪರಸಾಪುರ, ಸೋಲಾರಗೊಪ್ಪ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಂದಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು ಅವುಗಳ ತಡೆಗಟ್ಟುವಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ: ಗ್ರಾಮದ ಓಣಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳು ಗುಂಪು ಗುಂಪಾಗಿ ಬಂದು ಅಶುಚಿತ್ವ ಹರಡುತ್ತಿವೆ ಇದರಿಂದ ಜನರಿಗೆ ಡೆಂಗ್ಯೂ, ಮಲೇರಿಯಾ, ಸೊಳ್ಳೆಗಳ ಕಾಟದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ರೈತರ ಬೆಳೆ ನಾಶ: ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಹಂದಿಗಳು ರೈತರು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ಕಬ್ಬು ಬೆಳೆಗೆ ನುಗ್ಗಿ ಹಾನಿ ಮಾಡುತ್ತಿದ್ದು ರೈತರಿಗೆ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.
ಸಾರ್ವಜನಿಕರಿಗೆ ತೊಂದರೆ: ರಸ್ತೆಗಳಲ್ಲಿ ಹಂದಿಗಳು ಇದ್ದಕ್ಕಿದ್ದಂತೆ ಅಡ್ಡ ಬರುವುದರಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಜರುಗಿವೆ.
ಮನೆಯ ಹಿತ್ತಲಿನ ಜಾನುವಾರಗಳ ಮೇವಿನ ಬಣವಿಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದರಿಂದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮ ಪಂಚಾಯತಿ ಅಧಿಕಾರಿಗಳು ಹಂದಿಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ನಿರ್ಲಕ್ಷ ಮಾಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ ಹಂದಿಗಳ ಹಾವಳಿ ತಪ್ಪಿಸಬೇಕು ಎಂದು ತಾಲ್ಲೂಕಿನ ಆಸ್ತಕಟ್ಟಿ ಗ್ರಾಮದ ಸಂತ ಸೇವಾಲಾಲ ಗ್ರಾಮ ವಿಕಾಸ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
"ಹಂದಿಗಳ ಹಾವಳಿಯಿಂದ ಗ್ರಾಮದ ರೈತರಾದ ನಾನಪ್ಪ ಲಮಾಣಿ ಹಾಗೂ ಭಿಮ್ಲಪ್ಪ ಲಮಾಣಿ ಅವರ ವರ್ಷಪೂರ್ತಿ ಶ್ರಮವಹಿಸಿ ಬೆಳೆದ ಕಬ್ಬು,ಮೆಕ್ಕೆಜೋಳ ಬೆಳೆಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ಆಸ್ತಕಟ್ಟಿ ಗ್ರಾಮದ ಸ್ವಗ್ರಾಮ ಮಿತ್ರರಾದ ಉಮ್ಮೆಶ ಲಮಾಣಿ ತಿಳಿಸಿದರು. "
"ಎರಡು ತಿಂಗಳಿಂದ 20 ಕ್ಕೂ ಹೆಚ್ಚು ಹಂದಿಗಳು ಬಿಡುಬಿಟ್ಟು ಮನೆಯ ಹಿತ್ತಲಿನಲ್ಲಿ ಬೆಳೆದಿರುವ ತರಕಾರಿ ಕೈತೋಟ, ರೈತರ ಕಬ್ಬು,ಸೋಯಾಬಿನ್, ಮೆಕ್ಕೆಜೋಳ ಬೆಳೆಗಳಿಗೆ ನುಗ್ಗಿ ಹಾನಿ ಮಾಡುತ್ತಿದ್ದು ಹಂದಿಗಳ ತಡೆಗಟ್ಟಲ್ಲು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು ಗಮನಹರಿಸುತ್ತಿಲ್ಲ ಎಂದು ತಾಲ್ಲೂಕಿನ ಪರಸಾಪುರ ಗ್ರಾಮದ ಸ್ವಗ್ರಾಮ ಮಿತ್ರರಾದ ರೇಣುಕಾ ಸುಬ್ಬಣ್ಣವರ ಒತ್ತಾಯಿಸಿದರು."
📲Get App