ಯುವಕರಿಂದ ದೈಹಿಕ ಶಕ್ತಿ ಪ್ರದರ್ಶನದ ಖಾಲಿ ಚಕ್ಕಡಿ ಎಳೆಯುವ ಸ್ಪರ್ಧೆ ಆಯೋಜನೆ
ಕಲಘಟಗಿ: ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಯುವಕರ ಬಳಗದಿಂದ ಖಾಲಿ ಚಕ್ಕಡಿ ಎಳೆಯುವ ದೈಹಿಕ ಶಕ್ತಿ ಪ್ರದರ್ಶನದ ಸ್ಪರ್ಧೆ ಮಂಗಳವಾರ ಆಯೋಜಿಸಲಾಗಿತ್ತು.

ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯತಿ ಪಿಡಿಓ ಅಬ್ದುಲರಜಾಕ್ ಮನಿಯಾರ್ ಹಿಂದಿನ ರಾಜರ ಕಾಲದಲ್ಲಿ ಇಂತಹ ಅನೇಕ ದೈಹಿಕ ಸಾಮರ್ಥ್ಯ ಪ್ರದರ್ಶಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿತ್ತು. ಅಂದಿನ ಜನರು ಗಟ್ಟಿಮುಟ್ಟಾದ ದೇಹ ಹಾಗೂ ಶ್ರಮಾಧಾರಿತ ಜೀವನಶೈಲಿಯನ್ನು ಹೊಂದಿದ್ದರು. ಅವರ ಆಹಾರ ಪದ್ಧತಿಯೂ ಆರೋಗ್ಯಕರ ಹಾಗೂ ಕಟ್ಟುನಿಟ್ಟಾಗಿತ್ತು. ಆದರೆ ಇಂದಿನ ಆಧುನಿಕ ಜೀವನಶೈಲಿಯಲ್ಲಿ ದೈಹಿಕ ಶ್ರಮ ಮತ್ತು ಸಾಂಪ್ರದಾಯಿಕ ಆಹಾರ ಪದ್ಧತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಇಂತಹ ಸ್ಪರ್ಧೆಗಳು ಯುವಕರಲ್ಲಿ ಜೀವನೋತ್ಸಾಹ, ಆತ್ಮವಿಶ್ವಾಸ ಹಾಗೂ ಸ್ಪರ್ಧಾ ಮನೋಭಾವವನ್ನು ಬೆಳೆಸುವುದರ ಜೊತೆಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಉತ್ತಮ ಆರೋಗ್ಯ ಮತ್ತು ಉತ್ತಮ ಜೀವನ ರೂಪಿಸಿಕೊಳ್ಳಲು ಇಂತಹ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವುದು ಅಗತ್ಯ ಎಂದು ಹೇಳಿದರು.
ಚಕ್ಕಡಿ ಎಳೆಯುವ ಸ್ಪರ್ಧೆಯಲ್ಲಿ ಯುವಕರು ತಮ್ಮ ಶಕ್ತಿ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಿದರೆ, ನೆರೆದಿದ್ದ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರು-ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.