Bidar news
ಭಾಲ್ಕಿ: ಅಕ್ಕ ಪಡೆ ಮೂಲಕ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ
ಭೀದರ: ಭೀದರ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಮಹಿಳಾ ಪೊಲೀಸ್ ತಂಡ ಭಾಲ್ಕಿ ತಾಲೂಕಿನ ಅಕ್ಕ ಪಡೆ ರವರಿಂದ ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಸಲಾಯಿತು. ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸರ ನೇತೃತ್ವದಲ್ಲಿ ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ವಿಶೇಷ ಕಾರ್ಯಗಳು ಕೈಗೊಂಡು, ಭಾಲ್ಕಿ ತಾಲ್ಲೂಕಿನ ದಿವ್ಯ ಜ್ಯೋತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಅಕ್ಕ ಪಡೆಯ ಕುರಿತು ಪರಿಚಯ ಮತ್ತು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕರ್ನಾಟಕದಲ್ಲಿ 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವುದು ಅಪರಾಧ ಎಂದು ತಿಳಿಸಿ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕುವುದು ಮತ್ತು ಕಾರಿನಲ್ಲಿ ಸೀಟ್‌ಬೆಲ್ಟ್ ಧರಿಸುವ ಅಗತ್ಯತೆ ಕುರಿತು ಮಕ್ಕಳಿಗೆ ಮತ್ತು ಸಮುದಾಯದವರಿಗೆ ಮನವಿ ಮಾಡಲಾಯಿತು. ಸಹಾಯವಾಣಿ ಸಂಖ್ಯೆ 1098, 112 ಮತ್ತು ಸೈಬರ್ ಅಪರಾಧ ಸಹಾಯವಾಣಿ 1930 ಬಗ್ಗೆ ಕೂಡ ಮಾಹಿತಿ ನೀಡಲಾಯಿತು. ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ 24x7 ಸುರಕ್ಷತೆ ಒದಗಿಸುವ ಅಕ್ಕ ಪಡೆ ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆ ಸಲ್ಲಿಸಲಾಗಿದೆ.