🔥 ट्रेंडिंग राधिका अपटे ने बॉलीवुड कलाकारों पर आलो... उन्नाव: प्रेम प्रसंग के चलते युवक ने ख... आईबी ने चेतावनी दी: हवारा का पंजाब जेल... पूर्व एएपी विधायक ने भाजपा में शामिल ह... सिरसा ने पंजाब AAP पर छिपे धान के जलान... હિંમતનગરમાં ગહું, ચોખા અને મકાઈના ભાવમ...
03 नव. 2026•
ગુજરાતી मराठी ਪੰਜਾਬੀ বাংলা

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ದೇವದುರ್ಗದಲ್ಲಿ AIKKMS ಪ್ರತಿಭಟನೆ - 3,344 ಅರ್ಜಿ ಬಾಕಿ, LGC ರಚನೆಗೆ ಒತ್ತಾಯ

✍️ रिपोर्टर: Ningappa 🗓 03 नव. 2026, 11:55 AM 👁 16
शेयर करें: 💬 WhatsApp 📘 Facebook 𝕏 Post

ದೇವದುರ್ಗ ಮತ್ತು ಅರಕೇರಾ ತಾಲೂಕಿನ 3,344 ಬಗರ್ ಹುಕುಂ ಅರ್ಜಿಗಳ ವಿಲೇವಾರಿ, ಹಕ್ಕುಪತ್ರ ವಿತರಣೆ ಮತ್ತು ಅರಕೇರಾ ತಾಲೂಕಿನ ಭೂ ಮಂಜೂರಾತಿ ಸಮಿತಿ ರಚನೆಗೆ ಆಗ್ರಹಿಸಿ ದೇವದುರ್ಗ ಮಿನಿ ವಿಧಾನಸೌಧ ಎದುರು AIKKMS ವತಿಯಿಂದ ಪ್ರತಿಭಟನಾ ಧರಣಿ

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ದೇವದುರ್ಗದಲ್ಲಿ AIKKMS ಪ್ರತಿಭಟನೆ

ದೇವದುರ್ಗ: ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ವತಿಯಿಂದ ದೇವದುರ್ಗ ಮಿನಿ ವಿಧಾನಸೌಧ ಎದುರುಗಡೆ ಪ್ರತಿಭಟನಾ ಧರಣಿ ನಡೆಸಿ ದೇವದುರ್ಗ ತಹಶೀಲ್ದಾರರಾದ ನಾಗಮ್ಮ ಕಟ್ಟಿಮನಿ ಹಾಗೂ ಅರಕೇರಾ ಗ್ರೇಡ್-2 ತಹಶೀಲ್ದಾರರಾದ ಶ್ರೀಧರ ಪವಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ನಮೂನೆ 50, 53 ಮತ್ತು 57ರ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ದೇವದುರ್ಗ ಮತ್ತು ಅರಕೇರಾ ತಾಲೂಕು ಸೇರಿ ಸುಮಾರು 3,344 ಅರ್ಜಿಗಳು ಬಾಕಿಯಿದ್ದು, ತಕ್ಷಣ ಅರಕೇರಾ ತಾಲೂಕಿನ ಭೂ ಮಂಜೂರಾತಿ ಸಮಿತಿ (LGC) ರಚಿಸಬೇಕು. ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸುವ ಕ್ರಮ ಕೈಬಿಡಬೇಕು ಹಾಗೂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಲಾಯಿತು.

ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಕಾಲಾವಕಾಶ ಕೋರಿದ್ದು, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಬಗರ್ ಹುಕುಂ ಸಾಗುವಳಿದಾರರ ರಾಜ್ಯ ಸಂಚಾಲಕರಾದ ಲಕ್ಷ್ಮಣ್ ಜಡಗಣ್ಣನವರ್, ಜಿಲ್ಲಾ ಉಪಾಧ್ಯಕ್ಷರಾದ ದುರ್ಗಣ್ಣ ಅಡಕಲಗುಡ್ಡ, ಜಿಲ್ಲಾ ಕಾರ್ಯದರ್ಶಿಗಳಾದ ಮಲ್ಲನಗೌಡ ಅಂಚೆಸಗೂರು ಸೇರಿದಂತೆ ಎರಡೂ ತಾಲೂಕಿನ ರೈತರು ಭಾಗವಹಿಸಿದ್ದರು.
📲Get App