🔥 TRENDING HPUTWA Meets Himachal Governor to Reje... રાજ્યકક્ષા મંત્રી કૌશિકભાઈ વેકરિયાએ પો... Security Sweep Launched at Firozpur Ca... Questions Raised Over Durgiana Temple... Jalandhar: 12 Farmers, Including 4 Wom... Ludhiana Hosts Disability Prevention C...
27 Nov 2026•
ગુજરાતી मराठी ਪੰਜਾਬੀ বাংলা
Religion

ಬೀದರ ಜಿಲ್ಲಾ ಜೆ.ಡಿ.ಎಸ್. ಕಚೇರಿಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರÀ ಜಯಂತಿ ಆಚರಣೆ

✍️ Reporter: Basavaraj pujari 🗓 27 Nov 2026, 05:34 PM 👁 15
Share: 💬 WhatsApp 📘 Facebook 𝕏 Post

ಬೀದರ ನಗರದ ಜಿಲ್ಲಾ ಜೆ.ಡಿ.ಎಸ್. ಕಚೇರಿಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಮಾಜಿ ಸಚಿವರು ಜೆ.ಡಿ.ಎಸ್.ನ ಹಿರಿಯ ಮುಖಂಡರಾದ ಶ್ರೀ ಬಂಡೆಪ್ಪಾ ಖಾಶೆಂಪೂರರವರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ

ಬೀದರ ಜಿಲ್ಲಾ ಜೆ.ಡಿ.ಎಸ್. ಕಚೇರಿಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರÀ ಜಯಂತಿ ಆಚರಣೆ

ಬೀದರ ನಗರದ ಜಿಲ್ಲಾ ಜೆ.ಡಿ.ಎಸ್. ಕಚೇರಿಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಮಾಜಿ ಸಚಿವರು ಜೆ.ಡಿ.ಎಸ್.ನ ಹಿರಿಯ ಮುಖಂಡರಾದ ಶ್ರೀ ಬಂಡೆಪ್ಪಾ ಖಾಶೆಂಪೂರರವರು ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಭಕ್ತ ಕನಕದಾಸರ ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಜೆ.ಡಿ.ಎಸ್.ನ ಹಿರಿಯ ಮುಖಂಡರಾದ ಶ್ರೀ ಬಂಡೆಪ್ಪಾ ಖಾಶೆಂಪೂರರವರು ಮಾತನಾಡಿ ಕೀರ್ತನೆ, ಭಜನೆ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನಕದಾಸರ ಜೀವನ ಕೃತಿಗಳು ಮತ್ತು ಅವರ ಸಾಮಾಜಿಕ ಸಂದೇಶಗಳನ್ನು ಸ್ಮರಿಸಿ ಭಕ್ತಿ ಸಮಾನತೆ ಮತ್ತು ಮಾನವೀಯತೆಯ ಪಾಠ ಬೋಧಿಸಿದ ಕನಕದಾಸರ ಉಪದೇಶಗಳು ಇಂದಿಗೂ ಜನರಿಗೆ ಮಾರ್ಗದರ್ಶನವಾಗಿವೆ ಎಂದರು.
ಪಕ್ಷದ ಜಿಲ್ಲಾ ಅಧ್ಯಕ್ಷರಾದ ರಮೇಶ ಪಾಟೀಲ ಸೋಲಪೂರರವರು ಮಾತನಾಡಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಸಂದೇಶಗಳನ್ನು ಸ್ಮರಿಸಿಕೊಂಡು ಇಂದಿನ ಪೀಳಿಗೆಗೆ ಮಾರ್ಗದರ್ಶನ ಅಗತ್ಯವಾಗಿದೆ, ಮತ್ತು ಭಕ್ತ ಕನಕದಾಸರ ಜಯಂತಿಯ ಹಾರ್ದಿಕ ಶುಭಾಷಯಗಳನ್ನು ಕೋರಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆಯವರು ಪಕ್ಷದ ಮುಖಂಡರಿಗೂ ಹಾಗೂ ಕಾರ್ಯಕರ್ತರಿಗೂ ದಾಸ ಶ್ರೇಷ್ಠ ಭಕ್ತ ಕನಕದಾಸ ಅಭಿಮಾನಿಗಳಿಗೂ ಸ್ವಾಗತ ಕೋರಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ಘಟಕದ ಅಧ್ಯಕ್ಷರಾದ ದೇವೇಂದ್ರ ಸೋನಿ,ಜೆಡಿಎಸ್ ಹಿರಿಯ ಮುಖಂಡ ಸುರೇಶ ಸೀಗಿ, ಪರಿಶಿಷ್ಟ ಪಂಗಡದ ಅಧ್ಯಕ್ಷ ಬೊಮ್ಮಗೊಂಡ ಚಿಟ್ಟಾವಾಡಿ, ಮಹಿಳಾ ಘಟಕದ ಲಲಿತಾ ಕರಂಜಿ, ಶ್ರೀಮತಿ ಸಂಗಮ್ಮ ಪಾಟೀಲ, ನಗರಸಭೆ ಸದಸ್ಯ ಸಂಗಮೇಶ ಚಿದ್ರಿ, ಮಹಿಳಾ ಮುಖಂಡರಾದ ಶಾಂತಮ್ಮಾ ಕರಕನಳ್ಳಿ ಹಾಗೂ ಬಸವರಾಜ ಶಾಹಪುರ, ರವಿಕುಮಾರ ಸಿರ್ಸಿ, ಮೊಹ್ಮದ ಫಾರೂಕ ಅಲಿ, ರಾಜಕುಮಾರ ಕಮಠಾಣ, ಮನೋಹರ ದಂಡೆ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು, ಕನಕದಾಸರ ಅಭಿಮಾನಿಗಳು ಉಪಸ್ಥಿತರಿದ್ದರು.
📲Get App