🔥 TRENDING 418 Movie Review: A Gripping Thriller... राज्यपाल आनंदीबेन पटेल ने युवाओं को रि... Prime Video Drops Trailer for R-Rated... Uttarakhand Bride Walks 18 Km Post-Wed... Delhi Air Quality Improves to 'Moderat... Delhi: Over 100 Detained as SIR Protes...
24 Oct 2026•
ગુજરાતી मराठी ਪੰਜਾਬੀ বাংলা

ಅರಕೇರಾ ಮತಗಟ್ಟೆಯಲ್ಲಿ ಶೇ. 90.78ರಷ್ಟು ಮತದಾನ: ಶಿಕ್ಷಕರಿಂದ ಉತ್ಸಾಹಭರಿತ ಮತ ಚಲಾವಣೆ!

✍️ Reporter: MAHAMAD WALI QURESHI 🗓 24 Oct 2026, 10:32 AM 👁 11
Share: 💬 WhatsApp 📘 Facebook 𝕏 Post
ಅರಕೇರಾ ಮತಗಟ್ಟೆಯಲ್ಲಿ ಶೇ. 90.78ರಷ್ಟು ಮತದಾನ: ಶಿಕ್ಷಕರಿಂದ ಉತ್ಸಾಹಭರಿತ ಮತ ಚಲಾವಣೆ!

ನೀಡ್ 24 ನ್ಯೂಸ್

ಅರಕೇರಾ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಅಂಗವಾಗಿ ಶುಕ್ರವಾರ ಅರಕೇರಾ ಗ್ರಾಮ ಪಂಚಾಯಿತಿ ಕಚೇರಿಯ ಮತಗಟ್ಟೆ ಸಂಖ್ಯೆ 128ರಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತು.

ಅರಕೇರಾ ಮತಗಟ್ಟೆಯಲ್ಲಿ ಒಟ್ಟು 141 ಮತದಾರರು ನೋಂದಾಯಿತರಾಗಿದ್ದು, ಅವರಲ್ಲಿ 99 ಪುರುಷರು ಹಾಗೂ 42 ಮಹಿಳೆಯರು ಇದ್ದರು. ಒಟ್ಟು 128 ಮಂದಿ ಮತ ಚಲಾಯಿಸಿದ್ದು, ಶೇ. 90.78ರಷ್ಟು ಮತದಾನ ದಾಖಲಾಗಿದೆ. ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಅಧಿಕಾರಿಗಳಿಂದ ಸುಗಮ ಮತದಾನ ವ್ಯವಸ್ಥೆ

ಮತಗಟ್ಟೆಯಲ್ಲಿ ಪಿಆರ್‌ಒ ಕೆ. ಸಂಗಪ್ಪ, ಎಪಿಆರ್‌ಒ ಶರಣಪ್ಪ ಸೇರಿದಂತೆ ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ದೇವದುರ್ಗ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಅಣ್ಣರಾವ್ ನಾಯಕ, ಚುನಾವಣಾ ಸಹಾಯಕ ಲಕ್ಷ್ಮಣ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಮತಗಟ್ಟೆಗೆ ಶಾಸಕಿ ಕರೆಮ್ಮ ಜಿ. ನಾಯಕ ಭೇಟಿ

ಶಾಸಕಿ ಕರೆಮ್ಮ ಜಿ. ನಾಯಕ ಅವರು ಮತಗಟ್ಟೆಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರನ್ನು ಬೆಂಬಲಿಸುವುದಾಗಿ ತಿಳಿಸಿದರು.

ಶಶೀಲ್ ಜಿ. ನಮೋಶಿ ಅವರು ಈ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಅವರೊಂದಿಗೆ ಹಿಂದಿನಿಂದಲೂ ಪರಿಚಯವಿದೆ ಎಂದು ಶಾಸಕಿ ಹೇಳಿದರು. ಪಕ್ಷದ ಹೈಕಮಾಂಡ್‌ನ ಸೂಚನೆ ಹಾಗೂ ಸಿದ್ಧಾಂತದಂತೆ ತಾವು ಮುಂದುವರಿಯುವುದಾಗಿ ತಿಳಿಸಿದ ಅವರು, ಮೈತ್ರಿಧರ್ಮವನ್ನು ಪಾಲಿಸುವ ಹಿನ್ನೆಲೆಯಲ್ಲಿ ಶಶೀಲ್ ನಮೋಶಿ ಅವರ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ, ಹನ್ಮಂತ್ರಾಯ ಚಿಂತಲಕುಂಟ, ಗೋವಿಂದರಾಜ ನಾಯಕ ಚಿಕ್ಕಗುಡ್ಡ, ಬಸವರಾಜ ನಾಯಕ ಮುತ್ತೂರು, ಮಹಾದೇವ ನಾಯಕ ಬಿಚ್ಚದ್ ಹಾಗೂ ರಮೇಶ ರಾಮನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕರ ಹಿತಾಸಕ್ತಿಗೆ ಆದ್ಯತೆ

ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರ ಸಮಸ್ಯೆಗಳು, ಬೇಡಿಕೆಗಳು ಹಾಗೂ ಹಿತಾಸಕ್ತಿಗಳ ಪರವಾಗಿ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುವ ಪ್ರತಿನಿಧಿಯನ್ನು ಆಯ್ಕೆ ಮಾಡುವ ಉದ್ದೇಶದಿಂದ ಶಿಕ್ಷಕರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಅರಕೇರಾ ಮತಗಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗಿರುವುದು ಶಿಕ್ಷಕರಲ್ಲಿ ಚುನಾವಣೆಯ ಬಗ್ಗೆ ಕಂಡುಬಂದ ಆಸಕ್ತಿ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಯಿತು.
📲Get App