🔥 TRENDING Himanta Biswa Sarma Praises Bullet Tra... Meghalaya Minister Resigns After 11 of... Lewis Hamilton Secures First Ferrari P... Hrudananda Prusty Releases 'Back To Vi... Tripura Potters Prepare Earthen Lamps... Anil Kapoor Reflects on 50 Days of Pus...
01 Nov 2026•
ગુજરાતી मराठी ਪੰਜਾਬੀ বাংলা

ಜನತಾ ಕಾಲೋನಿ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ

✍️ Reporter: Ningappa 🗓 01 Nov 2026, 01:59 PM 👁 16
Share: 💬 WhatsApp 📘 Facebook 𝕏 Post

ಜಾಲಹಳ್ಳಿ ಜನತಾ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಡಗರ - SDMC ಅಧ್ಯಕ್ಷ ಖುರ್ಷೀದ್ ಪಟೇಲ್ ಅವರಿಂದ ಕನ್ನಡ ನಾಡು-ನುಡಿಯ ಮಹತ್ವದ ಬಗ್ಗೆ ಪ್ರೇರಣಾದಾಯಕ ಮಾತು

ದೇವದುರ್ಗ/ಜಾಲಹಳ್ಳಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜನತಾ ಕಾಲೋನಿಯಲ್ಲಿ ಇಂದು 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ರಾಜ್ಯೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಉಲ್ಫತ್ ಉನ್ನೀಸಾ ರವರು ಕಾರ್ಯಕ್ರಮಕ್ಕೆ ಆಗಮಿಸಿದ್ದ SDMC ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಮುಖ್ಯ ಅತಿಥಿಗಳು, ಅಡುಗೆ ಸಿಬ್ಬಂದಿ, ಸಹಶಿಕ್ಷಕರು, ಅತಿಥಿ ಶಿಕ್ಷಕರು, ಮುದ್ದು ಮಕ್ಕಳು ಹಾಗೂ ಶಿಕ್ಷಣ ಪ್ರೇಮಿಗಳನ್ನು ಪ್ರೀತಿಯಿಂದ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ SDMC ಅಧ್ಯಕ್ಷರಾದ ಶ್ರೀ ಖುರ್ಷೀದ್ ಪಟೇಲ್ ರವರು ಮಾತನಾಡಿ,ಕನ್ನಡ ನಾಡು-ನುಡಿಯ ಮಹತ್ವ ಮತ್ತು ರಾಜ್ಯೋತ್ಸವದ ಹಿನ್ನೆಲೆಯ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಶಿವಪ್ಪ ಅಂಜಳ ರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಕನ್ನಡ ಭಾಷೆಯ ಉಳಿವಿಗೆ ಮತ್ತು ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ಶ್ರೀ ಸೋಮಣ್ಣ ನಾಯಕ, SDMC ಸದಸ್ಯರಾದ ಶ್ರೀಮತಿ ಮೀನಾಕ್ಷಿ ರಂಗಪ್ಪ ಗಾಜಲದಿನ್ನಿ ಹಾಗೂ ಅಡುಗೆ ಸಿಬ್ಬಂದಿಯವರಾದ ಶ್ರೀಮತಿ ಮಲ್ಲಮ್ಮ ಮತ್ತು ಶ್ರೀಮತಿ ದೊಡ್ಡ ಯಲ್ಲಮ್ಮ ಸೇರಿದಂತೆ ಊರಿನ ಗಣ್ಯರಾದ ರಾಜ ಮೊಹಮ್ಮದ್,ಖಾಜಾ ಹುಸೇನ್ ಬಾಬಾ,ನಂದಪ್ಪ ಮಡ್ಡಿ,ತಮ್ಮಣ್ಣ ಹೇರುಂಡಿ ಉಪಸ್ಥಿತರಿದ್ದು.
📲Get App