🔥 TRENDING जयपुर में लकड़ी के गोदाम में लगी तीव्र... सरपंच कि गुंडागर्दी Punjab Police Suspends ASI Over Allege... Four Arrested in Delhi Fake ₹20 Coin S... Delhi Police Recover Woman's Body Afte... Bihar food safety raid finds illegal b...
01 Nov 2026•
ગુજરાતી मराठी ਪੰਜਾਬੀ বাংলা

ಶ್ರೀ ಜೆ.ಜೆ. ಶಿಕ್ಷಣ ಸಂಸ್ಥೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

✍️ Reporter: Khaja Hussain 🗓 01 Nov 2026, 07:57 PM 👁 9
Share: 💬 WhatsApp 📘 Facebook 𝕏 Post
**ಜಾಲಹಳ್ಳಿ | ವಿಶೇಷ ವರದಿ**

# ಶ್ರೀ ಜೆ.ಜೆ. ಶಿಕ್ಷಣ ಸಂಸ್ಥೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

### ಧ್ವಜಾರೋಹಣ ನೆರವೇರಿಸಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಮಹತ್ವ ಸಾರಿದ ಗಣ್ಯರು

**ಜಾಲಹಳ್ಳಿ, ನ. 1:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯ ಶ್ರೀ ಜೆ.ಜೆ. ಶಿಕ್ಷಣ ಸಂಸ್ಥೆಯಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ
ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶ್ಚಿಮ ವಲಯದ ಸಿಆರ್‌ಪಿ ಸೋಮಶೇಖರ್ ದೊರೆ ವಹಿಸಿದ್ದರು. ಶ್ರೀ ಗುರುಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೌಢಶಾಲೆಯ ಮುಖ್ಯಗುರುಗಳಾದ ಮಾರುತಿರಾವ್ ಕುಲಕರ್ಣಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೌನೇಶ ಬಡಿಗೇರ್ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ದಂಡನಗೌಡ ಪಾಟೀಲ್ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಬಸಯ್ಯ ಹಿರೇಮಠ, ಶ್ರೀಕರ ಹಿರೇಮಠ, ಗುಡ್ಡಪ್ಪ ಬಿ., ತವನಪ್ಪ ಮುತ್ತಿನ, ಶಿವಕುಮಾರ್ ರಾಥೋಡ್, ವಿಜಯಲಕ್ಷ್ಮಿ, ಶಾಂತ ಮೇಡಂ, ಪ್ರಥಮ ದರ್ಜೆ ಸಹಾಯಕರಾದ ದ್ರಾಕ್ಷಾಯಿಣಿ, ವೀರೇಶ್ ಗೌಳಿ, ಚಂದ್ರಶೇಖರ್ ಕುದುರೆಕಾರ್ ಹಾಗೂ ಅಡಿವಯ್ಯ ಸ್ವಾಮಿ ಸೇರಿದಂತೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ನಂದಪ್ಪ ಪಿ. ಮಡ್ಡಿ, ಜಾಲಹಳ್ಳಿ ಹೋಬಳಿ ಅಧ್ಯಕ್ಷರಾದ ತಮ್ಮಣ್ಣ ಹೆರುಂಡಿ ಹಾಗೂ ಪತ್ರಕರ್ತರಾದ ಖಾಜಾ ಹುಸೇನ್ ಬಾಬಾ ಭಾಗವಹಿಸಿದ್ದರು.

ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯ ಅಭಿಮಾನವನ್ನು ಸಾರುವ ಮೂಲಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

**ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ.**
📲Get App