🔥 TRENDING एम्स पटना में पासपोर्ट सेवा मोबाइलवान... एम्स पटना में पासपोर्ट सेवा मोबाइलवान... नहान में सुंदर कार्य के लिए तैयारियों... Storm Murasu to bring rain to 5 MP dis... ರಾಯಚೂರಿನಲ್ಲಿ 5 ಗ್ಯಾರಂಟಿಗಳಿಗೆ 4805 ಕೋಟಿ... Madhya Pradesh Police Encounter Leaves...
04 Nov 2026•
ગુજરાતી मराठी ਪੰਜਾਬੀ বাংলা

ರಾಯಚೂರಿನಲ್ಲಿ 5 ಗ್ಯಾರಂಟಿಗಳಿಗೆ 4805 ಕೋಟಿ ವೆಚ್ಚ - ರಾಜ್ಯ ಉಪಾಧ್ಯಕ್ಷ ಪರಮೇಶ್ವರ ನಾಯಕ ಮಾಹಿತಿ

✍️ Reporter: Ningappa 🗓 04 Nov 2026, 08:03 AM 👁 16
Share: 💬 WhatsApp 📘 Facebook 𝕏 Post

ರಾಯಚೂರು ಜಿಲ್ಲೆಗೆ ಗ್ಯಾರಂಟಿ ಯೋಜನೆಗಳಡಿ 4805.24 ಕೋಟಿ ಹಣ ಬಿಡುಗಡೆ - ಗೃಹಲಕ್ಷ್ಮಿ 2744.81 ಕೋಟಿ, ಶಕ್ತಿ ಯೋಜನೆಯಲ್ಲಿ 14.59 ಕೋಟಿ ಪ್ರಯಾಣ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಸೇರಿ ಒಟ್ಟು ವೆಚ್ಚದ ವಿವರ ನೀಡಿದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ನಾಯಕ

ರಾಯಚೂರು: ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪರಮೇಶ್ವರ ನಾಯಕ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಸನ್ಮಾನ್ಯ ಡಿಕೆ ಶಿವಕುಮಾರ್ ಹಾಗೂ ಅಂದಿನ ನಾಯಕ ಸನ್ಮಾನ್ಯ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಮತದಾರರಿಗೆ ನೀಡಿದ ಗ್ಯಾರಂಟಿ ಘೋಷಣೆಯಂತೆ ಇವತ್ತು ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ರಾಯಚೂರು ಜಿಲ್ಲೆಯ ಅಂಕಿ ಅಂಶ ನೀಡಿದ ಅವರು, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 4 ಲಕ್ಷದ 61 ಸಾವಿರದ 629 ಫಲಾನುಭವಿಗಳು ನೋಂದಣಿಯಾಗಿದ್ದು, ಮೃತಪಟ್ಟವರು ಹಾಗೂ ತಾಂತ್ರಿಕ ಕಾರಣಗಳಿಂದ ಹೊರತುಪಡಿಸಿ 4 ಲಕ್ಷದ 36 ಸಾವಿರದ 460 ಫಲಾನುಭವಿಗಳಿಗೆ 2000 ರೂಪಾಯಿಯಂತೆ ಜುಲೈ ಕೊನೆಯವರೆಗೆ ಒಟ್ಟು 2744.81 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ.

ಅನ್ನಭಾಗ್ಯ ಯೋಜನೆಯಲ್ಲಿ 4 ಲಕ್ಷದ 57 ಸಾವಿರದ 145 ಫಲಾನುಭವಿಗಳಿಗೆ ಹಣ ವೆಚ್ಚ ಮಾಡಲಾಗಿದೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ 3 ಲಕ್ಷದ 14 ಸಾವಿರದ 741 ಫಲಾನುಭವಿಗಳು ನೊಂದಣಿಯಾಗಿದ್ದು 557.31 ಕೋಟಿ ವೆಚ್ಚ ಭರಿಸಲಾಗಿದೆ.

ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರವಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದು, ರಾಯಚೂರು ಜಿಲ್ಲೆಗೆ ಸೀಮಿತವಾಗಿ 14 ಕೋಟಿ 59 ಲಕ್ಷ ಮಹಿಳೆಯರು ಹಾಗೂ ಮಕ್ಕಳು ಪ್ರಯಾಣ ಮಾಡಿದ್ದು, ಸರ್ಕಾರ 618.03 ಕೋಟಿ ಹಣವನ್ನು ಭರಿಸಿದೆ.

ಒಟ್ಟಾರೆಯಾಗಿ ಅನ್ನಭಾಗ್ಯ 806.22 ಕೋಟಿ, ಗೃಹಜ್ಯೋತಿ 557.31 ಕೋಟಿ, ಶಕ್ತಿ 618.03 ಕೋಟಿ, ಯುವನಿಧಿ 78.87 ಕೋಟಿ ಸೇರಿ 2023ರ ನಂತರ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಸರ್ಕಾರದ ಅವಧಿಯಲ್ಲಿ ರಾಯಚೂರು ಜಿಲ್ಲೆಗೆ ಸೀಮಿತವಾಗಿ ನಾಲ್ಕು ಸಾವಿರದ ಎಂಟುನೂರ ಐದು ಪಾಯಿಂಟ್ ಎರಡು ನಾಲ್ಕು ಕೋಟಿ (4805.24 ಕೋಟಿ) ಹಣವನ್ನು ಐದು ಯೋಜನೆಗಳ ಫಲಾನುಭವಿಗಳಿಗೆ ನೀಡಲಾಗಿದೆ. ಇದು ರಾಯಚೂರು ಜಿಲ್ಲೆಗೆ ಬಹುದೊಡ್ಡ ಮೊತ್ತವನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು
📲Get App