🔥 ट्रेंडिंग मॉल शूटिंग का अपडेट Hardoi police सिक्किम का सेवोके‑रंगपो रेलवे लाइन: नि... માંગરોળ ની પૌરાણિક હવેલી શ્રી વિઠ્ઠલના... सिक्किम की कॉन्सर्ट अर्थव्यवस्था ने मी... Hello मन ने सिखिम के दूरस्थ गाँवों में...
03 नव. 2026•
ગુજરાતી मराठी ਪੰਜਾਬੀ বাংলা

ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ 5 ತಾಲೂಕುಗಳಿಂದ ರೈತರ ಪಾದಯಾತ್ರೆ - ಬರಗಾಲ ಪರಿಹಾರ, ಬಗರ್ ಹುಕುಂ, ನಿವೇಶನ ಬೇಡಿಕೆ - ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಂಟಿ ಸಭೆ

✍️ रिपोर्टर: Ningappa 🗓 03 नव. 2026, 09:52 AM 👁 19
शेयर करें: 💬 WhatsApp 📘 Facebook 𝕏 Post

ಅಕ್ಟೋಬರ್ 24-27ರಂದು ದೇವದುರ್ಗ, ಸಿಂಧನೂರು, ಮಸ್ಕಿ, ಲಿಂಗಸೂಗೂರು, ಅರಕೇರಾ ತಾಲೂಕುಗಳಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಿ ರೈತ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಂಘಟನೆಗಳ ಜಂಟಿ ಸಭೆ

ತಾಲೂಕುಗಳಿಂದ ರಾಯಚೂರಿಗೆ ರೈತರ ಪಾದಯಾತ್ರೆ - ಬೇಡಿಕೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಂಟಿ ಸಭೆ

ರಾಯಚೂರು: ಅಕ್ಟೋಬರ್ 24 ರಿಂದ 27-2026 ರವರೆಗೆ ಕರ್ನಾಟಕ ಪ್ರಾಂತ ರೈತ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಬರಗಾಲ ಪರಿಹಾರ, ಉದ್ಯೋಗ ಖಾತ್ರಿ, ಬಗರ್ ಹುಕುಂ, ಮನೆ-ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಯಚೂರು ಜಿಲ್ಲೆಯ ದೇವದುರ್ಗ, ಸಿಂಧನೂರು, ಮಸ್ಕಿ, ಲಿಂಗಸೂಗೂರು ಮತ್ತು ಅರಕೇರಾ ತಾಲೂಕುಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಗಿತ್ತು.

ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಂದು ಬೇಡಿಕೆಗಳ ಪರಿಹಾರ ಸಂಬಂಧ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲಾ ತಾಲೂಕಿನ ತಹಶೀಲ್ದಾರರು, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ, ನೀರಾವರಿ ಇಲಾಖೆ, ಆಹಾರ ಇಲಾಖೆ, ವಿದ್ಯುತ್ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ* ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಎರಡು ಸಂಘಟನೆಗಳ ಮುಖಂಡರನ್ನು ಒಳಗೊಂಡು ಜಂಟಿ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಪಾದಯಾತ್ರೆಯ ಮೂಲಕ ಸಲ್ಲಿಸಲಾದ ಬೇಡಿಕೆಗಳ ಕುರಿತು ಇಲಾಖಾವಾರು ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
📲Get App