🔥 TRENDING માંગરોળ: પરમેશ હાઈસ્કૂલના આચાર્ય અને પ... सीसीएल का मनमानी મુખ્યમંત્રી ભૂપેન્દ્રભાઈ પટેલે રાજ્ય સ... પાટણમાં ૭ ઓક્ટોબરે ‘સેવા જ્યોતિ કળશ યા... Official Telugu Teaser of 'Slum Dog: 3... Times of India releases lyrical video...
28 Sep 2026•
ગુજરાતી मराठी ਪੰਜਾਬੀ বাংলা
4 ಕೋಟಿ ಅನುದಾನದ ರಸ್ತೆ ಕಾಮಗಾರಿಗೆ ಪೂಜೆ ನೆರೆವೇರಿಸಿದ ಸಚಿವರು

4 ಕೋಟಿ ಅನುದಾನದ ರಸ್ತೆ ಕಾಮಗಾರಿಗೆ ಪೂಜೆ ನೆರೆವೇರಿಸಿದ ಸಚಿವರು

✍️ Reporter: KALLAPPA MIRJI 🗓 01 Sep 2026, 12:50 PM 👁 89
Share: 💬 WhatsApp 📘 Facebook 𝕏 Post

ಕಲಘಟಗಿ ತಾಲ್ಲೂಕಿನ ತುಮರಿಕೊಪ್ಪ ಹಾಗೂ ರಂಗಾಪೂರ ಇನ್ನಿತರ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ 4 ಕೋಟಿ ಅನುದಾನದ ರಸ್ತೆ ಕಾಮಗಾರಿಗೆ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಸಂತೋಷ್ ಲಾಡ್ ಗುದ್ದಲಿ ಪೂಜೆ ನೆರೆವೇರಿಸಿದರು.

ಕಲಘಟಗಿ:ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದ ಮರೆತು ಎಲ್ಲರೂ ಒಂದಾಗಬೇಕು.ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಕೈಗೊಳ್ಳದೆ ಇದ್ದರೆ ಜನರು ಪ್ರಶ್ನೆ ಮಾಡಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ತಾಲ್ಲೂಕಿನ ತುಮರಿಕೊಪ್ಪ ಹಾಗೂ ರಂಗಾಪೂರ ಇನ್ನಿತರ ಗ್ರಾಮಗಳಲ್ಲಿ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದಡಿ 4 ಕೋಟಿ ಅನುದಾನದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು 3 ವರ್ಷ ಯಶಸ್ವಿಯಾಗಿ ಪೂರೈಸಿ ರಾಜ್ಯದ ಬಡ ಜನರಿಗೆ ಅನ್ನ ಭಾಗ್ಯ,ಗೃಹಲಕ್ಷ್ಮಿ,ಗೃಹ ಜ್ಯೋತಿ, ಯುವ ನಿಧಿ ಹಾಗೂ ಶಕ್ತಿ ಯೋಜನೆ 750 ಕೋಟಿ ಹೆಚ್ಚು ಹೆಣ್ಣು ಮಕ್ಕಳು ಉಚಿತವಾಗಿ ಪ್ರಯಾಣ ಬೆಳೆಸಿರುವ ಏಕೈಕ ರಾಜ್ಯ ನಮ್ಮ ಕರ್ನಾಟಕವಾಗಿದ್ದು ಐದು ಗ್ಯಾರಂಟಿ ಯೋಜನೆಗಳು ಬಡವರ್ಗದ ಜನರು ಆರ್ಥಿಕವಾಗಿ ಸದೃಢರಾಗಲು ಅನುಕೂಲವಾಗಿವೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದರು.
ತುಮರಿಕೊಪ್ಪ ಹಾಗೂ ರಂಗಾಪೂರ ಗ್ರಾಮಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 90 ಲಕ್ಷದ ಅನುದಾನದ ಸಿ.ಸಿ.ರಸ್ತೆ, ಅರೇಬಸವನಕೊಪ್ಪ ದಿಂದ ಬಿ.ಶಿಗಿಗಟ್ಟಿ ತಾಂಡಾದವರೆಗೆ ಲೋಕೋಪಯೋಗಿ ಇಲಾಖೆ ರೂ 2.60 ಕೋಟಿ ಅನುದಾನದ ಸಿ.ಸಿ. ರಸ್ತೆ, ಶಿಗಿಗಟ್ಟಿ ತಾಂಡಾದಲ್ಲಿ ಎಸ್.ಸಿ.ಪಿ ಯೋಜನೆಯ ರೂ. 50 ಲಕ್ಷ ಅನುದಾನದ ಸಿ.ಸಿ. ರಸ್ತೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್. ಆರ್ ಪಾಟೀಲ,ತಹಸೀಲ್ದಾರ ಬಸವರಾಜ ಹೊಂಕಣ್ಣದವರ, ತಾಲ್ಲೂಕ ಪಂಚಾಯತಿ ಇಓ ಪರಶುರಾಮ ಸಾವಂತ, ಸಿಪಿಐ ಶ್ರೀಶೈಲ್ ಕೌಜಲಗಿ, ಪಟ್ಟಣ ಪಂಚಾಯತಿ ಮಖ್ಯಾಧಿಕಾರಿ ಚಂದ್ರಶೇಖರ್. ಬಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ ಮುಖಂಡರಾದ ಬಿ. ವೈ ಪಾಟೀಲ, ಎಸ್. ವಿ ತಡಸಮಠ, ಬಾಬು ಅಂಚಟಗೇರಿ, ಮಂಜುನಾಥ ಧನಿಗೊಂಡ, ಶಿವಲಿಂಗ ಮುಗಣ್ಣವರ, ಶಂಕರ ದಾಸನಕೊಪ್ಪ ಇದ್ದರು.
📲Get App