🔥 TRENDING FBI Adds Goldy Brar to 10 Most Wanted... US Removes Tariffs on Indian Specialty... IMD Forecasts Rain in Delhi Followed b... India Issues Strong Response to Shehba... Indian Banks Cancel Strike After Sunda... Viral Video of Wheelchair User Harassm...
29 Sep 2026•
ગુજરાતી मराठी ਪੰਜਾਬੀ বাংলা
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ಆ.29, 30 ಹಾಗೂ ಸೆ.19, 20ರಂದು

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ಆ.29, 30 ಹಾಗೂ ಸೆ.19, 20ರಂದು

✍️ Reporter: Mahammed gouse 🗓 30 Aug 2026, 06:56 PM 👁 58
Share: 💬 WhatsApp 📘 Facebook 𝕏 Post

29, 30 ಹಾಗೂ ಸೆ.19, 20ರಂದು

ಮಾನ್ವಿ: ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯ, 55-ಮಾನವಿ ವಿಧಾನಸಭಾ ಕ್ಷೇತ್ರ ವತಿಯಿಂದ, ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ, ಬೆಂಗಳೂರು ಅವರ ಸೂಚನೆಯಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ–2026ರ ಸಂಬಂಧ ಅರ್ಹತಾ ದಿನಾಂಕ 2026ರ ಅ.1ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸೇರಿದಂತೆ ವಿವಿಧ ತಿದ್ದುಪಡಿಗಳಿಗೆ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಆ.29, ಆ.30 ಹಾಗೂ ಸೆ.19 ಮತ್ತು ಸೆ.20ರಂದು ನಡೆಯಲಿರುವ ವಿಶೇಷ ನೋಂದಣಿ ಅಭಿಯಾನದ ದಿನಗಳಂದು 55-ಮಾನವಿ ವಿಧಾನಸಭಾ ಕ್ಷೇತ್ರದ ಒಟ್ಟು 280 ಮತಗಟ್ಟೆಗಳಲ್ಲಿನ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ತಮ್ಮ ತಮ್ಮ ಮತಗಟ್ಟೆಗಳಲ್ಲಿ ಹಾಜರಿದ್ದು, ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಫಾರಂ–6, ಸಾಗರೋತ್ತರ ಅರ್ಜಿದಾರರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಫಾರಂ–6ಎ, ಮರಣ, ಶಾಶ್ವತ ಸ್ಥಳಾಂತರ ಹಾಗೂ ಡಬಲ್ ಮತದಾರರ ಹೆಸರುಗಳನ್ನು ತೆಗೆದುಹಾಕಲು ಫಾರಂ–7, ಮತದಾರರ ಪಟ್ಟಿಯಲ್ಲಿನ ಹೆಸರು, ಸಂಬಂಧಿಯ ಹೆಸರು, ಸಂಬಂಧ, ಲಿಂಗ ಹಾಗೂ ವಯಸ್ಸು ಸೇರಿದಂತೆ ನಮೂದುಗಳ ತಿದ್ದುಪಡಿ ಹಾಗೂ ಸ್ಥಳಾಂತರಕ್ಕಾಗಿ ಫಾರಂ–8ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಹ ಮತದಾರರು ಈ ವಿಶೇಷ ನೋಂದಣಿ ಅಭಿಯಾನದ ಸದುಪಯೋಗ ಪಡೆದುಕೊಂಡು ಅಗತ್ಯ ಅರ್ಜಿಗಳನ್ನು ತಮ್ಮ ಮತಗಟ್ಟೆಯ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸುವಂತೆ ರಾಯಚೂರು ಸಹಾಯಕ ಆಯುಕ್ತರು ಹಾಗೂ 55-ಮಾನವಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾದ ಹಂಪಣ್ಣ ಸಜ್ಜನ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
📲Get App