🔥 TRENDING എക്സൈസ് റെയ്ഡ് ਪੰਜਾਬ ਚੋਣਾਂ ਤੋਂ ਪਹਿਲਾਂ ਕਾਂਗਰਸ 'ਚ ਵੱਡੀ... नारौली डांग गांव में कोठी वाले बालाजी... टोंक में बजरी खनन पुनः प्रारंभ: स्थानी... નાના વરાછા શક્તિ સોસાયટીમાં પરિવાર પર... कन्नौज: हेड कांस्टेबल सुधीर सिंह को मि...
17 Oct 2026•
ગુજરાતી मराठी ਪੰਜਾਬੀ বাংলা
ವಿಧಾನ ಪರಿಷತ್ ಚುನಾವಣೆ: ಮತದಾನಕ್ಕೆ ಅರ್ಹ ನೌಕರರಿಗೆ ಅ. 23ರಂದು ವಿಶೇಷ ರಜೆ
Politics

ವಿಧಾನ ಪರಿಷತ್ ಚುನಾವಣೆ: ಮತದಾನಕ್ಕೆ ಅರ್ಹ ನೌಕರರಿಗೆ ಅ. 23ರಂದು ವಿಶೇಷ ರಜೆ

✍️ Reporter: Viswanatha D R 🗓 17 Oct 2026, 08:26 PM 👁 11
Share: 💬 WhatsApp 📘 Facebook 𝕏 Post

ಕರ್ನಾಟಕ ವಿಧಾನ ಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್‌ 23ರಂದು ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹ ನೌಕರರಿಗೆ ರಾಜ್ಯ ಸರ್ಕಾರವು ಒಂದು ದಿನದ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು, ಅ. 17: ಕರ್ನಾಟಕ ವಿಧಾನ ಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್‌ 23ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹ ನೌಕರರಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸಂಬಂಧಿತ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಸರ್ಕಾರಿ ಹಾಗೂ ಖಾಸಗಿ ಶಾಲಾ–ಕಾಲೇಜುಗಳು, ಅನುದಾನಿತ ಮತ್ತು ಅನುದಾನರಹಿತ ವಿದ್ಯಾಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಮತ್ತು ಇತರೆ ಬ್ಯಾಂಕ್‌ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಾರ್ಖಾನೆಗಳು ಮತ್ತು ಕೈಗಾರಿಕಾ ಸಂಸ್ಥೆಗಳ ನೌಕರರಿಗೆ ಮತದಾನದ ದಿನ ಈ ಸೌಲಭ್ಯ ಅನ್ವಯಿಸಲಿದೆ.

ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಮೊದಲು ಸಂಬಂಧಪಟ್ಟ ನೌಕರರು ಚುನಾವಣೆಯ ಅರ್ಹ ಮತದಾರರಾಗಿರುವುದನ್ನು ರಜೆ ಮಂಜೂರಾತಿ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
📲Get App