ದೇವದುರ್ಗದ 18,000 ಎಕರೆ ಮೆಣಸಿನಕಾಯಿ ಬೆಳೆ ರಕ್ಷಣೆಗೆ ಜನವರಿ ಅಂತ್ಯದವರೆಗೆ ನೀರು ಬಿಡಿ - ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕಿ ಕರಿಯಮ್ಮ ಜಿ ನಾಯಕ ಮನವಿ - ನಾರಾಯಣಪುರ ಬಲದಂಡೆ ಕಾಲುವೆಯಿಂದ ನಿರಂತರ ನೀರು ಹರಿಸಲು ಒತ್ತಾಯ
ದೇವದುರ್ಗದಲ್ಲಿ 18,000 ಎಕರೆ ಮೆಣಸಿನಕಾಯಿ ಬೆಳೆ ರಕ್ಷಣೆಗೆ ನೀರು ಬಿಡಲು ಮನವಿ - ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಭೇಟಿಯಾದ ಶಾಸಕಿ ಕರಿಯಮ್ಮ ಜಿ ನಾಯಕ - ನಾರಾಯಣಪುರ ಬಲದಂಡೆ ಕಾಲುವೆಯಿಂದ ಜನವರಿ ಅಂತ್ಯದವರೆಗೆ ನೀರು ಹರಿಸಲು ಒತ್ತಾಯ - ಸಕಾರಾತ್ಮಕ ಸ್ಪಂದನೆ
ದೇವದುರ್ಗದ 18,000 ಎಕರೆ ಮೆಣಸಿನಕಾಯಿ ಬೆಳೆ ರಕ್ಷಣೆಗೆ ಜನವರಿ ಅಂತ್ಯದವರೆಗೆ ನೀರು ಬಿಡಿ - ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕಿ ಕರಿಯಮ್ಮ ಜಿ ನಾಯಕ ಮನವಿ
ರಾಯಚೂರು:
ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 18,000 ಎಕರೆ ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದು, ಬೆಳೆಗಳ ಸಂರಕ್ಷಣೆಗಾಗಿ ಜನವರಿ ತಿಂಗಳ ಅಂತ್ಯದವರೆಗೆ ನಿರಂತರವಾಗಿ ನೀರಿನ ಅವಶ್ಯಕತೆ ಇದೆ ಎಂದು ದೇವದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕಿ ಕರಿಯಮ್ಮ ಜಿ ನಾಯಕ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ನಿವಾಸದಲ್ಲಿ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ನಾರಾಯಣಪುರ ಬಲದಂಡೆ ಕಾಲುವೆಯಿಂದ ಜನವರಿ ಅಂತ್ಯದವರೆಗೆ ನಿರಂತರವಾಗಿ ನೀರು ಹರಿಸುವಂತೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ನಮ್ಮ ಅನ್ನದಾತರು ಕಷ್ಟಪಟ್ಟು ಬೆಳೆದ ಬೆಳೆ ನೀರಿಲ್ಲದೆ ಒಣಗಲು ಬಿಡಬಾರದು. ರೈತರ ಬೆಳೆ ರಕ್ಷಣೆ ಹಾಗೂ ಅವರ ಹಿತಾಸಕ್ತಿಗಾಗಿ ನನ್ನ ಹೋರಾಟ ಮತ್ತು ಪ್ರಯತ್ನ ಸದಾ ಮುಂದುವರಿಯಲಿದೆ ಎಂದು ಶಾಸಕಿ ಕರಿಯಮ್ಮ ಜಿ ನಾಯಕ ತಿಳಿಸಿದರು.