🔥 TRENDING O.M: ಆಪರೇಷನ್ ಮೋಲ್ 5 ದಿನಗಳಲ್ಲಿ ₹100 ಕೋಟ... Suvendu Adhikari pitches West Bengal's... TMC accuses Govt of double standards o... बांका में अतिक्रमण हटाने की कार्रवाई क... Bihar Family Celebrates Cricketer's Re... Bihar, Uttar Pradesh and Haryana emerg...
25 Nov 2026•
ગુજરાતી मराठी ਪੰਜਾਬੀ বাংলা
Local

ಝಳಕಿಯಲ್ಲಿ 18 ಡಿಸೆಂಬರ್ ರಂದು ಸಾಮೂಹಿಕ ಅಷ್ಟ ಲಕ್ಷ್ಮಿ ಪೂಜಾ ಕಾರ್ಯಕ್ರಮ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಹೊಸ ಹಂತ

✍️ Reporter: YALLAPPA RAGATE (PATIL) 🗓 25 Nov 2026, 08:24 AM 👁 11
Watch on: 📘 Facebook
Share: 💬 WhatsApp 📘 Facebook 𝕏 Post

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಝಳಕಿ ಗ್ರಾಮದಲ್ಲಿ 18 ಡಿಸೆಂಬರ್ ಶುಕ್ರವಾರ ಸಾಮೂಹಿಕ ಅಷ್ಟ ಲಕ್ಷ್ಮಿ ಪೂಜಾ ಹಾಗೂ ಧಾರ್ಮಿಕ ಸಭೆ ನಡೆಸಲಾಗುತ್ತದೆ, ಇದಕ್ಕೆ ಗ್ರಾಮಸ್ಥರು ಹಾಗೂ ವಿವಿಧ ಸಂಸ್ಥೆಗಳು ಪೂರ್ಣ ಸಹಕಾರ ನೀಡಿವೆ.

ಭಾಜಪ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ರಾಘವೇಂದ್ರ ಕಾಪಸೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಕೆ ಜನರ ಮೆಚ್ಚುಗೆ ಹೆಚ್ಚಾಗಿದೆ ಎಂದು ಹೇಳಿ, ಪೂಜಾ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಝಳಕಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಇಂಡಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಲಾದ ಸಾಮೂಹಿಕ ಅಷ್ಟ ಲಕ್ಷ್ಮಿ ಪೂಜಾ ಕಾರ್ಯಕ್ರಮದ ಪೂರ್ವಬಾವಿ ಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಿ, ಕಾರ್ಯಕ್ರಮದ ವಿಧಿ-ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ.

ಸಣ್ಣಪ್ಪ, ತಳವಾರ ಊರಿನ ಮುಖಂಡರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 10 ವರ್ಷಗಳ ಹಿಂದೆ ಗ್ರಾಮಕ್ಕೆ ಬಂದಿದ್ದರೂ ಇವರೆಗೆ ಯಾವುದೇ ಸಾಮೂಹಿಕ ಪೂಜಾ ಕಾರ್ಯಕ್ರಮ ನಡೆಯಲಿಲ್ಲ ಎಂದು ಸೂಚಿಸಿ, ಈ ಕಾರ್ಯಕ್ರಮಕ್ಕೆ ತಮ್ಮ ಪೂರ್ಣ ಸಹಕಾರವನ್ನು ನೀಡುವುದಾಗಿ ದೃಢಪಡಿಸಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪಾಟೀಲರು ಯೋಜನೆಯ ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿ, ಸಾಮೂಹಿಕ ಪೂಜಾ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಎಲ್ಲಾ ಸಂಬಂಧಿತ ವ್ಯಕ್ತಿಗಳ ಸಹಕಾರವನ್ನು ಕೇಳಿದರು.

ಮಾಳಪ್ಪ ಉಮರಾಣಿ, ವಲಯದ ಮೇಲ್ವಿಚಾರಕರು ಅರ್ಜುನ ಪಾಟೀಲ, ರೇವಣ್ಣ ತಳವಾರ್, ಒಕ್ಕೂಟದ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಸಿ.ಎಸ್.ಸಿ. ಸೇವಾದಾರರು ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಈ ಸಭೆಯಲ್ಲಿ ಹಾಜರಿದ್ದರು.
📲Get App