🔥 TRENDING सोनाहातू थाना क्षेत्र कि चोगा गांव में... अचारपुरा औद्योगिक क्षेत्र को मिलेगी नई... जनता दल (यूनाइटेड) के राष्ट्रीय कार्यक... ਬਰਨਾਲਾ ਤੋਂ पाटलिपुत्र कॉलोनी में पूर्व राज्यसभा स... बीदूर में जिला प्रथम दलित बंडाय सम्मेल...
12 Nov 2026•
ગુજરાતી मराठी ਪੰਜਾਬੀ বাংলা
Local

ರೈತ ಸಂಘಟನೆಗಳ ಒಕ್ಕೂಟವು ಬೀದರ್ ಜಿಲ್ಲೆಯಲ್ಲಿ ಕಬ್ಬು ಬೆಲೆ ನಿಗದಿಗೆ 15 ನವೆಂಬರ್ ಗಡುವು ನೀಡಿದೆ

✍️ Reporter: Basavaraj pujari 🗓 12 Nov 2026, 06:04 PM 👁 14
Share: 💬 WhatsApp 📘 Facebook 𝕏 Post

ರೈತ ಪರ ಸಂಘಟನೆಗಳ ಒಕ್ಕೂಟವು ಜಿಲ್ಲಾಧಿಕಾರಿಗೆ 15 ನವೆಂಬರ್ ಗಡುವು ನೀಡಿದ್ದು, ಬೆಲೆ ನಿಗದಿಪಡಿಸದಿದ್ದರೆ ಮನ್ನಳ್ಳಿಯಿಂದ ಬರೂರು ಸಮೀಪದ ಭವಾನಿ ಸಕ್ಕರೆ ಕಾರ್ಖಾನೆ ವರೆಗೆ ಪಾದಯಾತ್ರೆ ನಡೆಸುವುದಾಗಿ ತಿಳಿಸಿದೆ.

ರೈತ ಪರ ಸಂಘಟನೆಗಳ ಒಕ್ಕೂಟವು ಬೀದರ್ ಜಿಲ್ಲೆಯಲ್ಲಿ ಕಬ್ಬು ಬೆಲೆ ನಿಗದಿಗೆ 15 ನವೆಂಬರ್ ಗಡುವು ನೀಡಿದೆ. ಒಕ್ಕೂಟದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಅವರಿಗೆ ಸಲ್ಲಿಸಿದರು. ನಿಗದಿತ ಅವಧಿಯ ಒಳಗೆ ಕಬ್ಬು ಬೆಲೆ ನಿಗದಿಪಡಿಸದಿದ್ದರೆ ನ. 16 ರಂದು ಮನ್ನಳ್ಳಿಯಿಂದ ಬರೂರು ಸಮೀಪದ ಭವಾನಿ ಸಕ್ಕರೆ ಕಾರ್ಖಾನೆ ವರೆಗೆ ಪಾದಯಾತ್ರೆ ನಡೆಸಿ, ಕಾರ್ಖಾನೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ. 4,000 ಬೆಲೆ ನಿಗದಿ ಮಾಡಬೇಕು. ಈಗಾಗಲೇ ಪ್ರತಿ ಟನ್‍ಗೆ ರೂ. 3,000 ಪಾವತಿಸಿದ ರೈತರ ಖಾತೆಗೆ ಬಾಕಿ ರೂ. 1,000 ಜಮೆ ಮಾಡಬೇಕು. ರಾಜ್ಯ ಸರ್ಕಾರ ಕಬ್ಬಿಗೆ ಪ್ರತಿ ಟನ್‍ಗೆ ರೂ. 1,000 ರಾಜ್ಯ ಸಲಹಾ ಬೆಲೆ ನಿಗದಿಪಡಿಸಿ, ರೈತರಿಗೆ ಪ್ರೋತ್ಸಾಹ ಧನ ಕೊಡಬೇಕು. ಕೇಂದ್ರ ಸರ್ಕಾರ ಪ್ರತಿ ಕೆಜಿ ಸಕ್ಕರೆಗೆ ಕನಿಷ್ಠ ರೂ. 60 ಎಂ.ಎಸ್.ಪಿ. ನಿಗದಿಪಡಿಸಬೇಕು. ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಹಾನಿಗೊಳಗಾದ ಕಬ್ಬಿಗೆ ಪ್ರತಿ ಎಕರೆಗೆ ರೂ. 1 ಲಕ್ಷ ಪರಿಹಾರ ನೀಡಬೇಕು. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪಾರದರ್ಶಕ ತೂಕದ ವ್ಯವಸ್ಥೆ ಜಾರಿಗೊಳಿಸಬೇಕು. ಹೊರ ರಾಜ್ಯಗಳಿಂದ ಕಬ್ಬು ತರುವುದನ್ನು ನಿಯಂತ್ರಿಸಿ, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಆದ್ಯತೆ ಕೊಡಬೇಕು.

ಜಿಲ್ಲೆಯ ಸಾವಿರಾರು ರೈತರು ಭವಾನಿ ಸಕ್ಕರೆ ಕಾರ್ಖಾನೆ ಸೇರಿ ಜಿಲ್ಲೆಯ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ. ಆದರೆ, ಅವರಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕಬ್ಬಿಗೆ ರೂ. 3,000 ಬೆಲೆ ಮಾತ್ರ ನೀಡುತ್ತಿರುವುದು ಅನ್ಯಾಯವಾಗಿದೆ ಎಂದು ಹೇಳಿದರು. 2025-26ನೇ ಹಂಗಾಮಿನಲ್ಲಿ ಭವಾನಿ ಸಕ್ಕರೆ ಕಾರ್ಖಾನೆ ಸರ್ಕಾರದ ಸೂಚನೆಯಂತೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ 2,950 ಬೆಲೆ ಪಾವತಿಸಬೇಕಿತ್ತು. ಆದರೆ, ರೈತರ ಖಾತೆಗೆ ಪ್ರತಿ ಟನ್‍ಗೆ 2,700 ಮಾತ್ರ ಪಾವತಿಸಿದೆ. ಕೂಡಲೇ ಬಾಕಿ ಉಳಿದ ರೂ. 250 ಪ್ರತಿ ಟನ್‍ನ ರೂ. 250 ರೈತರ ಖಾತೆಗೆ ಜಮೆ ಮಾಡಬೇಕು.

ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣಶೆಟ್ಟಿ ಬಣ) ಯ ಜಿಲ್ಲಾ ರೈತ ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರೆ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಮಡಕಿ, ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ರೈತ ಮುಖಂಡರಾದ ಪ್ರದೀಪ್ ಸಾವಜಿ, ಇಮ್ಯಾನುವೆಲ್ ಮಂದಕನಳ್ಳಿ, ಅಲ್ಲಾವುದ್ದೀನ್ ನಿರ್ಣಾ ಮತ್ತಿತರರು ಈ ಮನವಿಯಲ್ಲಿ ಭಾಗವಹಿಸಿದ್ದರು.
📲Get App