🔥 ट्रेंडिंग আদিবাসী প্রসূতি মণিকা মুর্মুর মৃত্যু अबदुल एल-सैयद के अमेरिकी सीनेट जीतने स... कर्नाटक में नंदिनी डेयरी ने घी, बटर, प... केरळ में बीजेडीपी ने असाधारण बस किराया... राजस्थान कंप्यूटर इंस्ट्रक्टर रिजल्ट 2... धनतेरस 2026: सोना-चांदी खरीदने के लिए...
05 नव. 2026•
ગુજરાતી मराठी ਪੰਜਾਬੀ বাংলা

ಗಲಗ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹುದ್ದೆ ಭರ್ತಿಗೆ ಒತ್ತಾಯ - 14-11-2026 ರೊಳಗೆ ನೇಮಕ ಮಾಡದಿದ್ದರೆ 16-11-2026 ರಂದು ಪ್ರತಿಭಟನೆ - ನಮ್ಮ ಕರ್ನಾಟಕ ಸೇನೆ ಎಚ್ಚರಿಕೆ

✍️ रिपोर्टर: Ningappa 🗓 05 नव. 2026, 11:07 AM 👁 19
शेयर करें: 💬 WhatsApp 📘 Facebook 𝕏 Post

ಅರಕೇರಾ ತಾಲೂಕು ಗಲಗ ಗ್ರಾಮ ಪಂಚಾಯಿತಿಯಲ್ಲಿ ತಿಂಗಳುಗಳಿಂದ ಕಂಪ್ಯೂಟರ್ ಆಪರೇಟರ್ ಹುದ್ದೆ ಖಾಲಿ - ಹಿಂದಿನ ಆಪರೇಟರ್ ಮುದುರಂಗಪ್ಪ ಹೊಸೂರು ಸಿದ್ದಾಪೂರ ಅವರನ್ನು ಆರೋಪದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿತ್ತು - 03-08-2026 ರಂದು ಸೇನೆ ದೂರು ನೀಡಿತ್ತು - ಇನ್ನೂ ನೇಮಕ ಆಗಿಲ್ಲ - ವಿಬಿಜಿ ರಾಮ್ ಜಿ ಸೇರಿ ವಿವಿಧ ಸರ್ಕಾರಿ ಯೋಜನೆಗಳ ಕೆಲಸ ಸ್ಥಗಿತ, ಸಾರ್ವಜನಿಕರಿಗೆ ತೊಂದರೆ - 14-11-2026 ರೊಳಗೆ ನೇಮಕ ಮಾಡದಿದ್ದರೆ 16-11-2026 ರಂದು ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ - ಕಸ ವಾಹನ ರಿಪೇರಿ, ಸಿಸಿ ರಸ್ತೆ ಬದಿಯ ಜಾಲಿ ತೆರವು, ಚರಂಡಿ ಸ್ವಚ್ಛತೆಗೆ ಮನವಿ

ಗಲಗ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹುದ್ದೆ ಭರ್ತಿಗೆ ಒತ್ತಾಯ

ಅರಕೇರಾ, ನ. 4: ಅರಕೇರಾ ತಾಲೂಕಿನ ಗಲಗ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹುದ್ದೆಯನ್ನು ಭರ್ತಿ ಮಾಡುವಂತೆ ನಮ್ಮ ಕರ್ನಾಟಕ ಸೇನೆ ದೇವದುರ್ಗ ಮತ್ತು ಅರಕೇರಾ ತಾಲೂಕು ಕೂಲಿಕಾರ್ಮಿಕರ ಘಟಕವು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಗಲಗ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಮುದುರಂಗಪ್ಪ ಹೊಸೂರು ಸಿದ್ದಾಪೂರ ಅವರ ಮೇಲೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದುಹಾಕಿದ ನಂತರ ಸದರಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆ ಖಾಲಿ ಇರುತ್ತದೆ.

ನಮ್ಮ ಕರ್ನಾಟಕ ಸೇನೆ ದಿನಾಂಕ 03-08-2026 ರಂದು ಸದರಿ ಆಪರೇಟರ್ ಮೇಲೆ ಸಲ್ಲಿಸಿದ ದೂರಿನ ಅನ್ವಯ ಅವನನ್ನು ತೆಗೆದು ಹಾಕಿದ್ದು, ತದ ನಂತರ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನುರಿತ ಮತ್ತು ಅನುಭವಿ ಕಂಪ್ಯೂಟರ್ ಆಪರೇಟರ್ ಅನ್ನು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಲಾಗಿತ್ತು. ಇದುವರೆಗೆ ಬೇರೆ ಯಾವುದೇ ಅರ್ಹ ಅಭ್ಯರ್ಥಿಯನ್ನು ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೇಮಕ ಮಾಡದೇ ವಿಳಂಬ ಮಾಡಲಾಗುತ್ತಿದೆ.

ಇದರಿಂದ ಸದರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಅನ್ವಯ ಸಲ್ಲಿಕೆ ಹಾಗೂ ನಿರ್ವಹಣೆ ಆಗುತ್ತಿಲ್ಲ. ಇದರಿಂದ ಸಾರ್ವಜನಿಕ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ.

ಆದ್ದರಿಂದ ಗಲಗ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ 14-11-2026 ರೊಳಗೆ ಕಂಪ್ಯೂಟರ್ ಆಪರೇಟರ್ ಅನ್ನು ನೇಮಕ ಮಾಡದಿದ್ದ ಪಕ್ಷದಲ್ಲಿ ದಿನಾಂಕ 16-11-2026 ರಂದು ತಮ್ಮ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಈ ಮೂಲಕ ತಮ್ಮ ಗಮನಕ್ಕೆ ತರಲಾಗುತ್ತಿದೆ ಎಂದರು.

ಜೊತೆಗೆ ಗಲಗ ಗ್ರಾಮ ಪಂಚಾಯಿತಿ ಕಸ ಸಂಗ್ರಹಣೆ ವಾಹನ ರಿಪೇರಿಯಾಗಿದ್ದು, ಆ ವಾಹನವನ್ನು ಸೇವೆಗೆ ತಂದಿರುವುದಿಲ್ಲ. ಸಂತೆ ಬಜಾರ್ ಕಸ ಎಲ್ಲೆಂದರಲ್ಲಿ ಬಿಸಾಕಿ ಹಚ್ಚಿ ಸುಡುತ್ತಿದ್ದು, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಹಾನಿ ಉಂಟಾಗುತ್ತಿದೆ. ಆದ ಕಾರಣ ಕಸ ಸಂಗ್ರಹ ವಾಹನವನ್ನು ಕೂಡಲೇ ರಿಪೇರಿ ಮಾಡಿಸಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕ್ವಾಟ್ರಸ್ ನಿಂದ ಕುಂಬಾರ ಚೌಕನವರೆಗೆ ಸಿಸಿ ರಸ್ತೆ ನಿರ್ಮಿಸಿದ್ದು, ರಸ್ತೆಯ ಎರಡು ಬದಿಯಲ್ಲಿ ಜಾಲಿ ಮರಗಳು ಬೆಳೆದಿದ್ದು ಜಾಲಿ ಗಿಡಗಳನ್ನು ತೆರವುಗೊಳಿಸಬೇಕು. ಮತ್ತು ರಸ್ತೆಯ ಬದಿಯಲ್ಲಿ ಚರಂಡಿ ಹೂಳು ತುಂಬಿದ್ದು, ಚರಂಡಿ ನೀರು ರಸ್ತೆಗೆ ಬರುತ್ತಿದ್ದು ಕೂಡಲೇ ಚರಂಡಿಯನ್ನು ಸ್ವಚ್ಛಗೊಳಿಸಬೇಕು ಎಂದು ವಿನಂತಿಸಲಾಗಿದೆ.

ಇದೇ ಸಂದರ್ಭದಲ್ಲಿ ಸಂಚಾಲಕ ಚಿದಾನಂದಪ್ಪ ಕೆ., ಜಿಲ್ಲಾ ಉಪಾಧ್ಯಕ್ಷ ರಂಗಪ್ಪ ಕೆ. ಇರಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಶ ನಾಯಕ, ತಾಲೂಕು ಅಧ್ಯಕ್ಷ ದೇವದುರ್ಗ ಭೀಮನಗೌಡ ಎಮ್. ಪಾಟೀಲ್, ತಾ. ಅಧ್ಯಕ್ಷರು ಕೂ.ಕಾ.ಘಟಕ ಅರಕೇರಾ ರಾಜಶೇಖರಪ್ಪ ಪಾಮರತಿ, ತಾಲೂಕು ಅಧ್ಯಕ್ಷರು ಅರಕೇರಾ ಮಲ್ಲಿಕಾರ್ಜುನ ನಾಯಕ, ತಾ.ಅಧ್ಯಕ್ಷರು ಕೂ.ಕಾ.ಘಟಕ ದೇವದುರ್ಗ ಹನುಮಂತ್ರಾಯ ಗೌಡ ಗಾಜಾಲಿ, ತಾ.ಕೂ.ಕಾ. ಗೌರವ ಅಧ್ಯಕ್ಷರು ದೇವದುರ್ಗ ಚೆನ್ನಬಸವ ಕೆಡಮಲ್, ಅಧ್ಯಕ್ಷರು ಕೂ.ಕಾ.ಘಟಕ ಗಲಗ ಶಿವನಗೌಡ ಪಾಮರತಿ, ತಾಲೂಕು ಸಹ ಕಾರ್ಯದರ್ಶಿ ಅರಕೇರಾ ಶಾಂತಯ್ಯ ಸ್ವಾಮಿ, ಕಾರ್ಯದರ್ಶಿ ಕೂ.ಕಾ.ಘಟಕ ಗಲಗ ಮಲ್ಲಿಕಾರ್ಜುನ ವಿಶ್ವಕರ್ಮ, ಉಪಾಧ್ಯಕ್ಷರು ಕೂ.ಕಾ.ಘಟಕ ಗಲಗ ಮುದೇಪ್ಪ ಭೋವಿ, ಸದಸ್ಯರು ಕೂ.ಕಾ.ಘಟಕ ಗಲಗ ದುರುಗಪ್ಪ ಟಾಣಕನಮರಡಿ, ದುರುಗಪ್ಪ ಕುರುಬರು, ರಾಯಪ್ಪ ಬೆನಹಾಲ್ ಸೇರಿದಂತೆ ಇನ್ನಿತರರು ಇದ್ದರು.
📲Get App