🔥 TRENDING Amritsar Police Seize Drug Trafficking... मुरबाड तालुक्यात बळीराजाच्या कष्टाचे स... Five Youths Arrested for Drug Use in P... Elderly Woman in Jalandhar Assaulted,... Punjab Court Allows Police to Immediat... Four Illegal Bangladeshi Nationals Det...
18 Nov 2026•
ગુજરાતી मराठी ਪੰਜਾਬੀ বাংলা

ಕುರಣಿ, ಉಳ್ಳಾಗಡ್ಡಿ ಖಾನಾಪುರ ಗ್ರಾಮಗಳಲ್ಲಿ 1.36 ಕೋಟಿ ರೂ. ವೆಚ್ಚದ 3 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ - ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಅಣ್ಣಾ ಜಾರಕಿಹೊಳಿ ಅವರಿಂದ ಚಾಲನೆ - 2 ರಸ್ತೆ ಡಾಂಬರೀಕರಣ, ಶಾಲೆಯಲ್ಲಿ 2 ನೂತನ ಕೊಠಡಿ ನಿರ್ಮಾಣ

✍️ Reporter: Ningappa 🗓 18 Nov 2026, 10:25 PM 👁 16
Share: 💬 WhatsApp 📘 Facebook 𝕏 Post

ಕುರಣಿ, ಉಳ್ಳಾಗಡ್ಡಿ ಖಾನಾಪುರ ಗ್ರಾಮಗಳಲ್ಲಿ 1.36 ಕೋಟಿ ರೂ. ವೆಚ್ಚದ 3 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ - ಕುರಣಿ ಹಂಚಿನಾಳ ಸಂಪರ್ಕ ರಸ್ತೆಗೆ 50 ಲಕ್ಷ, ಉಳ್ಳಾಗಡ್ಡಿ ಖಾನಾಪುರ ಗಟ್ಟಿಗಿ ತೋಟದ ರಸ್ತೆಗೆ 50 ಲಕ್ಷ, ಶಾಲೆಯಲ್ಲಿ 36 ಲಕ್ಷ ರೂ. ನಲ್ಲಿ 2 ನೂತನ ಕೊಠಡಿ - ರಾಹುಲ್ ಅಣ್ಣಾ ಜಾರಕಿಹೊಳಿ ಅವರಿಂದ ಚಾಲನೆ - ಸತೀಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಅಭಿವೃದ್ಧಿ

ಯಮಕನಮರಡಿ: ಇದೇ ನ.18ರಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರು ಯಮಕನಮರಡಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಕುರಣಿ ಹಾಗೂ ಉಳ್ಳಾಗಡ್ಡಿ ಖಾನಾಪುರ ಗ್ರಾಮಗಳಲ್ಲಿ ಒಟ್ಟು 1.36 ಕೋಟಿ ರೂ. ವೆಚ್ಚದ ಮೂರು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕುರಣಿ ಗ್ರಾಮದಲ್ಲಿ ಹಂಚಿನಾಳ ಸಂಪರ್ಕ ರಸ್ತೆಯ ಡಾಂಬರೀಕರಣಕ್ಕೆ 50 ಲಕ್ಷ ರೂ., ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಗಟ್ಟಿಗಿ ತೋಟದ ರಸ್ತೆ ಡಾಂಬರೀಕರಣಕ್ಕೆ 50 ಲಕ್ಷ ರೂ. ಹಾಗೂ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 36 ಲಕ್ಷ ರೂ. ವೆಚ್ಚದಲ್ಲಿ ಎರಡು ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಸುಧಾರಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಲು ಸಹಕಾರಿಯಾಗಲಿವೆ. ಗ್ರಾಮೀಣ ಮೂಲಸೌಕರ್ಯಗಳ ಬಲವರ್ಧನೆ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಈ ಯೋಜನೆಗಳು ಮಹತ್ವದ ಕೊಡುಗೆ ನೀಡಲಿವೆ.

ಜನಪ್ರಿಯ ಶಾಸಕರಾದ ಶ್ರೀ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನ ಹಾಗೂ ಅಭಿವೃದ್ಧಿಪರ ಚಿಂತನೆಯೊಂದಿಗೆ, ಜನರ ಅಗತ್ಯಗಳಿಗೆ ಸ್ಪಂದಿಸುತ್ತಾ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ.
📲Get App