🔥 ट्रेंडिंग उत्सव के दौरान पत्थर फेंकने की घटना से... हिमाचल प्रदेश उच्च न्यायालय ने 1 वर्ष... उत्तरीाखण्ड के 26वें स्थापना दिवस पर स... पश्चिमी व्यवधान से उत्तराखंड में हल्की... सीएम धामी ने उत्तराखंड स्थापना दिवस पर... दिवाली त्यौहार पे बच्चों ने स्कूल में...
10 नव. 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ನ.12 ರಂದು AIDWA ನಿಂದ ಬೃಹತ್ ಪ್ರತಿಭಟನೆ - ಬಡ ಕೂಲಿ ಕಾರ್ಮಿಕರ ಶೌಚಾಲಯ ನೆಲಸಮ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ - ಸ್ವಚ್ಛ ಭಾರತ ಯೋಜನೆಯ ಶೌಚಾಲಯ ಒಡೆದವರಿಗೆ ಶಿಕ್ಷೆ ನೀಡಿ, ಬಡವರಿಗೆ ನ್ಯಾಯ ಒದಗಿಸಿ ಎಂದು ಆಗ್ರಹ

✍️ रिपोर्टर: Ningappa 🗓 10 नव. 2026, 02:17 PM 👁 14
शेयर करें: 💬 WhatsApp 📘 Facebook 𝕏 Post

ಸ್ವಚ್ಛ ಭಾರತ ಯೋಜನೆಯಲ್ಲಿ ನಿರ್ಮಿಸಿದ ಬಡ ಕೂಲಿ ಕಾರ್ಮಿಕರ ಶೌಚಾಲಯ ನೆಲಸಮ ಮಾಡಿ ದೌರ್ಜನ್ಯ - ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಾಲಹಳ್ಳಿಯಲ್ಲಿ AIDWA ನಿಂದ ಪ್ರತಿಭಟನೆ - ನ.12, 2026 ರಂದು ಗ್ರಾಮ ಪಂಚಾಯತಿ ಮುಂದೆ ಬೃಹತ್ ಪ್ರತಿಭಟನೆ - ಶೌಚಾಲಯ ಒಡೆದ ಅಧಿಕಾರಿಗಳ ವಿರುದ್ಧ ಕ್ರಮ, ದೋಷಿಗಳಿಗೆ ಶಿಕ್ಷೆ, ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಬೇಡಿಕೆ - ಮಹಿಳೆಯರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

ಬಡ ಕೂಲಿ ಕಾರ್ಮಿಕರ ಶೌಚಾಲಯ ನೆಲಸಮ - ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಾಲಹಳ್ಳಿಯಲ್ಲಿ ನ.12 ರಂದು AIDWA ಬೃಹತ್ ಪ್ರತಿಭಟನೆ

ಜಾಲಹಳ್ಳಿ: ಸ್ವಚ್ಛ ಭಾರತ ಯೋಜನೆಯಲ್ಲಿ ಶೌಚಾಲಯ ನಿರ್ಮಿಸಿದ ಬಡ ಕೂಲಿ ಕಾರ್ಮಿಕರ ಶೌಚಾಲಯ ನೆಲ ಸಮ ಮಾಡಿ ದೌರ್ಜನ್ಯ ಎಸಗಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ.

ದಿನಾಂಕ 12/11/2026 ರಂದು ಗ್ರಾಮ ಪಂಚಾಯತಿ ಮುಂದೆ ನಡೆಯಲಿದೆ.

ಸ್ವಚ್ಛ ಭಾರತ ಯೋಜನೆಯಡಿ ಬಡ ಕೂಲಿ ಕಾರ್ಮಿಕರು ತಮ್ಮ ಮನೆಯ ಮುಂದೆ, ತಮ್ಮ ಜಾಗದಲ್ಲಿ ಕಷ್ಟಪಟ್ಟು, ಸಾಲ ಮಾಡಿ ಶೌಚಾಲಯ ನಿರ್ಮಿಸಿದ್ದರು. ಸರ್ಕಾರವೇ ಬಯಲು ಶೌಚ ಮುಕ್ತ ಮಾಡಬೇಕು, ಪ್ರತಿಯೊಬ್ಬರ ಮನೆಯಲ್ಲೂ ಶೌಚಾಲಯ ಇರಬೇಕು ಎಂದು ಹೇಳಿ ಯೋಜನೆ ಜಾರಿ ಮಾಡಿದೆ. ಆದರೆ ಅದೇ ಸರ್ಕಾರದ ಅಧಿಕಾರಿಗಳು ಬಂದು ಬಡವರ ಶೌಚಾಲಯವನ್ನು ನೆಲಸಮ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು AIDWA ಮುಖಂಡರು ಆರೋಪಿಸಿದ್ದಾರೆ.

ಶೌಚಾಲಯ ಇಲ್ಲದೆ ಮಹಿಳೆಯರು, ಹೆಣ್ಣು ಮಕ್ಕಳು ಎಷ್ಟು ಕಷ್ಟ ಪಡುತ್ತಾರೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲವೇ. ಬೆಳಗ್ಗೆ, ಸಂಜೆ ಬಯಲು ಶೌಚಕ್ಕೆ ಹೋಗಲು ಮಹಿಳೆಯರು ಪಡುವ ಅವಮಾನ, ಕಷ್ಟವನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ. ಒಂದು ಶೌಚಾಲಯ ಇದ್ದರೆ ಮಹಿಳೆಯರಿಗೆ ಸ್ವಲ್ಪ ಮಾನ, ಮರ್ಯಾದೆ ಇರುತ್ತದೆ. ಅಂತಹ ಶೌಚಾಲಯವನ್ನು ಒಡೆದು ಹಾಕುವುದು ಮಹಿಳೆಯರ ಮೇಲೆ ಮಾಡಿದ ದೌರ್ಜನ್ಯವೇ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡ ಕೂಲಿ ಕಾರ್ಮಿಕರ ಶೌಚಾಲಯ ಒಡೆದ ಅಧಿಕಾರಿಗಳು ಯಾರು, ಯಾವ ಅಧಿಕಾರದಿಂದ ಒಡೆದರು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು AIDWA ಒತ್ತಾಯಿಸಿದೆ.

ಈ ಪ್ರತಿಭಟನೆಯ ಪ್ರಮುಖ ಬೇಡಿಕೆಗಳು ಹೀಗಿವೆ:

ಶೌಚಾಲಯ ನೆಲಸಮ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ದೋಷಿಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು, ಒಡೆದ ಶೌಚಾಲಯವನ್ನು ಮತ್ತೆ ನಿರ್ಮಿಸಿ ಕೊಡಬೇಕು.

ಸರ್ಕಾರದ ಯೋಜನೆಯಲ್ಲಿ ಕಟ್ಟಿದ ಶೌಚಾಲಯವನ್ನು ಒಡೆಯಲು ಅಧಿಕಾರಿಗಳಿಗೆ ಯಾರು ಅಧಿಕಾರ ಕೊಟ್ಟರು ಎಂದು ಪ್ರಶ್ನಿಸಿರುವ AIDWA, ಬಡವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ನ.12 ರಂದು ನಡೆಯುವ ಈ ಬೃಹತ್ ಪ್ರತಿಭಟನೆಯಲ್ಲಿ ಜಾಲಹಳ್ಳಿ ಗ್ರಾಮದ ಮಹಿಳೆಯರು, ಕೂಲಿ ಕಾರ್ಮಿಕರು, ಬಡ ಕುಟುಂಬಗಳು, AIDWA ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
📲Get App