धर्म
ಬೀದರ್: ಚಿದ್ರಿಯಲ್ಲಿ ಶ್ರೀ ಭವಾನಿ ಮಾತೆಯ ನವರಾತ್ರಿ ಉತ್ಸವಕ್ಕೆ ಸಿದ್ಧತೆ ಅ.11ರಿಂದ ಆರಂಭ
ಬೀದರ್ ನಗರದ ಚಿದ್ರಿಯಲ್ಲಿ ಜೈ ಮಾತಾ ದಿ ಸೇವಾ ಸಂಘದಿಂದ ಶ್ರೀ ಭವಾನಿ ಮಾತೆಯ ನವರಾತ್ರಿ ಉತ್ಸವವನ್ನು ಅ.11 ರಿಂದ 20ರವರೆಗೆ ಆಯೋಜಿಸಲಾಗಿದೆ. ಉತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬೀದರ್: ನಗರದ ಚಿದ್ರಿಯಲ್ಲಿ ಜೈ ಮಾತಾ ದಿ ಸೇವಾ ಸಂಘದ ವತಿಯಿಂದ ಶ್ರೀ ಭವಾನಿ ಮಾತೆಯ ನವರಾತ್ರಿ ಉತ್ಸವವನ್ನು ಅ.11 ರಿಂದ 20ರವರೆಗೆ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. ಈ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ದೇವಿಯ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನವರಾತ್ರಿಯ ಪ್ರತಿ ದಿನವೂ ವಿಭಿನ್ನ ಪೂಜೆಗಳು ನಡೆಯಲಿವೆ. ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ ಹಾಗೂ ದುರ್ಗಾ, ಮೂರನೇ ದಿನ ಚಂದ್ರಘಂಟಾ ಮತ್ತು ಕೂಷ್ಮಾಂಡಾ, ನಾಲ್ಕನೇ ದಿನ ದೇವಿಯ ಪೂಜೆ, ಐದನೇ ದಿನ ಸ್ಕಂದಮಾತಾ, ಆರನೇ ದಿನ ಕಾತ್ಯಾಯನಿ ಮಾತೆಯ ಪೂಜೆ ನಡೆಯಲಿದೆ. ಆರನೇ ದಿನ ಸಂಜೆ ರಾಮನಗರದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಶ್ರೀ ವಿಜಯಲಕ್ಷ್ಮಿ ಅಕ್ಕನವರ ಪ್ರವಚನ ಏರ್ಪಡಿಸಲಾಗಿದೆ. ಏಳನೇ ದಿನ ಕಾಲರಾತ್ರಿ ಮಾತೆಯ ಪೂಜೆ, ಮಕ್ಕಳಿಂದ ನಾಟಕ ಮತ್ತು ನೃತ್ಯ ಪ್ರದರ್ಶನಗಳು, ಎಂಟನೇ ದಿನ ಮಹಾಗೌರಿ, ಒಂಬತ್ತನೇ ದಿನ ಸಿದ್ಧಿದಾತ್ರಿ ಮಾತೆಯ ಪೂಜೆ ಹಾಗೂ ಹತ್ತನೇ ದಿನ ಆಯುಧ ಪೂಜೆ ನೆರವೇರಲಿದೆ.
ಅ.15ರಂದು ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಪೂಜ್ಯ ಶ್ರೀ ಮಚಂದ್ರನಾಥ ಮಹಾರಾಜರು, ಕುಮಾರಿ ಹರಿಕಾ, ಬೆಂಗಳೂರಿನ ಯುವ ವಾಗ್ಮಿ ಹಾಗೂ ಲೇಖಕ ಮಂಜುನಾಥ ಮತ್ತು ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ವಿಜಯದಶಮಿಯ ಶುಭ ಸಂದರ್ಭದಲ್ಲಿ ಚಿದ್ರಿಯಲ್ಲಿ ಶ್ರೀ ಭವಾನಿ ಮಾತೆಯ ಭವ್ಯ ಶೋಭಾಯಾತ್ರೆ ಕೂಡ ನಡೆಯಲಿದೆ.
ಜೈ ಮಾತಾ ದಿ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ್ ಶಾಲಿ ಚಿದ್ರಿ ಅವರು, ಉತ್ಸವದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಭವಾನಿ ಮಾತೆಯ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದ್ದಾರೆ.