🔥 TRENDING चलते ऑटो से कूदी छात्रा, विरोध पर चालक... அரசு ஆண்கள் மேல்நிலைப்பள்ளியில், 1993... Virender Sehwag's Hilarious Reaction t... Scripted Video Circulates as Real Hara... Secret Spot Goes Viral, Crowds Overwhe... Seoul Blames Kyiv for Breach of Secrec...
28 Sep 2026•
ગુજરાતી मराठी ਪੰਜਾਬੀ বাংলা
ದೇವದುರ್ಗ ವಾರ್ಡ್ ನಂಬರ್ 10 ಮೋಮಿನ್ ಪುರ ಓಣಿಯಲ್ಲಿ ಖಾಜಿ ಜೀಲಾನಿ ಪಾಶ ಅವರಿಂದ ಸಮಾಜಸೇವೆ ಕೆಲಸ

ದೇವದುರ್ಗ ವಾರ್ಡ್ ನಂಬರ್ 10 ಮೋಮಿನ್ ಪುರ ಓಣಿಯಲ್ಲಿ ಖಾಜಿ ಜೀಲಾನಿ ಪಾಶ ಅವರಿಂದ ಸಮಾಜಸೇವೆ ಕೆಲಸ

✍️ Reporter: MAHAMAD WALI QURESHI 🗓 08 Sep 2026, 03:38 PM 👁 52
Watch on: ▶️ YouTube
Share: 💬 WhatsApp 📘 Facebook 𝕏 Post
ನೀಡ್ 24 ನ್ಯೂಸ ದೇವದುರ್ಗ: ಮೊಮೀನ್‌ಪುರ ಓಣಿಯಲ್ಲಿ ಖಾಜಿ ಜೀಲಾನಿ ಪಾಶ್ ಅವರಿಂದ ಸಮಾಜಸೇವೆ
ದೇವದುರ್ಗ, ಸೆ.5: ನಗರದ ವಾರ್ಡ್ ನಂ. 10ರ ಮೊಮೀನ್‌ಪುರ ಓಣಿಯಲ್ಲಿ ಖಾಜಿ ಜೀಲಾನಿ ಪಾಶ್ ಅವರು ಸಮಾಜಮುಖಿ ಕಾರ್ಯಕ್ಕೆ ಮುಂದಾಗಿ, ಅಗತ್ಯವಿರುವ ಕುಟುಂಬಗಳಿಗೆ ಸೀಲಿಂಗ್ ಫ್ಯಾನ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸ್ಥಳೀಯ ನಿವಾಸಿಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸೀಲಿಂಗ್ ಫ್ಯಾನ್‌ಗಳನ್ನು ವಿತರಿಸಲಾಗಿದ್ದು, ಇದರಿಂದ ಕುಟುಂಬಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಖಾಜಿ ಜೀಲಾನಿ ಪಾಶ್ ಅವರು ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಬಡವರು, ನಿರ್ಗತಿಕರು ಹಾಗೂ ಅಗತ್ಯವಿರುವವರಿಗೆ ತಮ್ಮಿಂದಾದ ಸಹಾಯವನ್ನು ಮಾಡುತ್ತಿದ್ದಾರೆ. ಯಾವುದೇ ಭೇದಭಾವವಿಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜದಲ್ಲಿ ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ.
ಮೊಮೀನ್‌ಪುರ ಓಣಿಯ ನಿವಾಸಿಗಳು ಅವರ ಸಮಾಜಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಹಾಗೂ ಮುಂದೆಯೂ ಇದೇ ರೀತಿಯ ಜನಪರ ಕೆಲಸಗಳನ್ನು ಮುಂದುವರಿಸಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ಯುವಕರು ಖಾಜಿ ಶಪೀ ಬಾವದಿನ್ ಖುರೇಷಿ ಸಂಶುದ್ದೀನ್ ಹೌದಡಿ ವಲಿ ಖುರೇಷಿ ಬಾಬಾ ಭೈ ಶೇಕ್ ಮುನ್ನ ಹಾಗೂ ಉಪಸ್ಥಿತರಿದ್ದರು.. ವರದಿ ವಲಿ ಖುರೇಷಿ ದೇವದುರ್ಗ
📲Get App